Sep 29, 2021

ಅಂಜನಾ ನಂದನ ಆಂಜನೇಯ ನಮೋ ನಮೋ (ANJANA NANDANA AANJANEYA )SONG LYRICS IN KANNADA AND ENGLISH

 ಹಾಡಲು ಕಲಿಯಿರಿ(CLICK HERE TO LEARN THIS SONG)

ಅಂಜನಾ ನಂದನ ಆಂಜನೇಯ ನಮೋ ನಮೋ

ಪವನ ತನಯ ನಮೋ ನಮೋ ಪತಿತ ಪಾವನ ನಮೋ ನಮೋ||

 

ರಾಮ ದೂತ ನಮೋ ನಮೋ ರಮ್ಯ ಚರಿತ ನಮೋ ನಮೋ

ಕಾಮ ದುಃಖ ಕಲುಷವಿಘ್ನ ನಾಶಕಾಯ ನಮೋ ನಮೋ||1||

 

ಜ್ಞಾನದಾತ ನಮೋ ನಮೋ ಜ್ಞಾನ ಸಿಂಧು ನಮೋ ನಮೋ

ಸಂಗೀತ ಶಾಸ್ತ್ರ ನಿಪುಣ ಶಂಕರಾಕ್ಷ ನಮೋ ನಮೋ||2||

 

ಬುದ್ಧಿ ದಾತ ನಮೋ ನಮೋ ಯಶೋದಾತ ನಮೋ ನಮೋ

ಶಕ್ತಿದಾತ ನಮೋ ನಮೋ ಶೌರ್ಯದಾತ ನಮೋ ನಮೋ||3||

.........................................................................................................

ANJANA NANDANA AANJANEYA NAMO NAMO

PAVANA TANAYA NAMO NAMO 

PATHITHA PAAVANA NAMO NAMO||


RAMA DOOTHA NAMO NAMO

RAMYA CHARITHA NAMO NAMO

KAAMA DUKHA KALUSHA VIGHNA

NAASHAKAAYA NAMO NAMO||1||


JNAANA DAATHA NAMO NAMO

JNAANA SINDHU NAMO NAMO

SANGEETHA SHAASTRA NIPUNA

SHNKARAAKSHA NAMO NAMO||2||


BUDHIDAATHA NAMO NAMO

YASHODAATHA NAMO NAMO

SHAKTHI DAATHA NAMO NAMO 

SHOURYA DAATHA NAMO NAMO||3||

..........................................................................................................................

Also See:


Sep 22, 2021

ಓ ಮಲ್ಲಿಗೆ ನಿನ್ನೊ೦ದಿಗೆ ನಾನಿಲ್ಲವೆ|O MALLIGE NINNONDIGE SONG LYRICS IN KANNADA|ಅನುರಾಗ ಸ೦ಗಮ |ANURAGA SANGAMA FILM SONG

 

ಅನುರಾಗ ಸ೦ಗಮ - ಓ ಮಲ್ಲಿಗೆ


ಓ ಮಲ್ಲಿಗೆ ನಿನ್ನೊ೦ದಿಗೆ ನಾನಿಲ್ಲವೆ ಸದಾ ಸದಾ ಸದಾ
ಈ ಕ೦ಗಳು ಮ೦ಜಾದರೆ ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೇ

ಹೋದೊರೆಲ್ಲ ಒಳ್ಳೆಯವರು, ಹರಸೋ ಹಿರಿಯರೂ
ಅವರ ಸವಿಯ ನೆನಪು ನಾವೆ, ಉಳಿದ ಕಿರಿಯರೂ
ನಿನ್ನ ಕೂಡ ನೆರಳ ಹಾಗೆ, ಇರುವೆ ನಾನು ಎ೦ದು ಹೀಗೆ , ಒ೦ಟಿಯಲ್ಲ ನೀ||1||

ನಾಳೆ ನಮ್ಮ ಮು೦ದೆ ಇಹುದು ದಾರಿ ಕಾಯುತಾ
ದುಃಖ ನೋವು ಎ೦ದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮು೦ದೆ ಸಾಗಬೇಕು ಧೈರ್ಯ ತಾಳುತಾ ||2||

........................................................................................................................

ಹಾಡಲು ಕಲಿಯಿರಿ(CLICK HERE TO LEARN THIS SONG)

Also See:

ತೆರೆದಿದೆ ಮನೆ ಓ ಬಾ ಅತಿಥಿ /TEREDIDE MANE O BAA ATHITHI LYRICS

EMOTIONAL SONGS(ಭಾವಗೀತೆಗಳು)

Sep 11, 2021

ತೆರೆದಿದೆ ಮನೆ ಓ ಬಾ ಅತಿಥಿ /TEREDIDE MANE O BAA ATHITHI LYRICS

 

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

........................................................