Showing posts with label LORD KRISHNA( ಕೃಷ್ಣನ ಹಾಡು). Show all posts
Showing posts with label LORD KRISHNA( ಕೃಷ್ಣನ ಹಾಡು). Show all posts

ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ | mella mellane bandane song lyrics | purandara dasa |

 

ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ ||||

ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುತ್ತ ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ ||.||

ಹಾಲು ಮಾರಲು ಪೋದರೆ, ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ || 1||

ಮೊಸರ ಮಾರಲು ಪೋದರೆ, ನಿನ್ನಯ ಕಂದ ಪೆಸರೇನೆಂದೆಲೆ ಕೇಳಿದ
ಹಸನಾದ ಹೆರಳ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದ ಕೃಷ್ಣ ||2||

ಪೋಗಿರೆ ರಂಗಯ್ಯನ, ಮೇಲೆ ನೀವು , ದೂರೇನು ಕೊಂಡು ಬಂದಿರೆ
ಸೃಷ್ಟೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ || 3||

 ----------------------------------------------------------------------------------------


ಆಲಾರೆ ಆಲಾರೆ, ಮುಕುಂದ ಮುರಾರೆ SONG LYRICS IN KANNADA | ALARW ALARW MUKUNDA MURARE SONG LYRICS

 

ಆಲಾರೆ ಆಲಾರೆ, ಮುಕುಂದ ಮುರಾರೆ

ಗೋಪಾಲ ಬಾರಯ್ಯ.. ಬಾರೋ ಶ್ರೀ ಕೃಷ್ಣ ನೀ ಬೇಗ ಬಾರೋ||


ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ

ನನ್ನ ಮನದಲ್ಲಿ ಇಂದು ನಿನ್ನ ರೂಪವೆ,

ಬಲ್ಲೆಯಾ ಕೃಷ್ಣನೇ

ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ

ನಿನ್ನ ನೋಡೊ ಆಸೆ ನಾ ತಾಳಲಾರೆನೆ

ಕೇಶವಾ ಮಾಧವಾರಾ ಧಾ ಲೋ ||1||


ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ

ಪ್ರೇಮದ ಕೂಗು ಇನ್ನು ಕೇಳದೆ ದೇವ,

ತಾಮಸಾ ಏತಕೇ

ನನ್ನ ಹೃದಯದ ಪ್ರೇಮ ಗಾನ ಕೇಳದೆ

ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ

ಕೇಶವಾಮಾಧವಾ, ರಾ ಧಾ ಲೋ ||2||

------------------------------------------------------------------------------------------------------------------------

ಜಗಜ್ಜಾಲಪಾಲಂ ಶ್ರೀ ಹರಿ ಸ್ತೋತ್ರಂ LYRICS IN KANNADA |jagajjala palam shri hari stotra lyrics

ಹಾಡಲು ಕಲಿಯಿರಿ(CLICK HERE TO LEARN THIS SONG) 

ಶ್ರೀ ಹರಿ ಸ್ತೋತ್ರಂ (ಜಗಜ್ಜಾಲಪಾಲಂ)

ಜಗಜ್ಜಾಲಪಾಲಂ ಕನತ್ಕಂಠಮಾಲಂ
ಶರಚ್ಚಂದ್ರಫಾಲಂ ಮಹಾದೈತ್ಯಕಾಲಮ್
ನಭೋನೀಲಕಾಯಂ ದುರಾವಾರಮಾಯಂ
ಸುಪದ್ಮಾಸಹಾಯಂ ಭಜೇಽಹಂ ಭಜೇಽಹಮ್ 1

ಸದಾಂಭೋಧಿವಾಸಂ ಗಲತ್ಪುಷ್ಪಹಾಸಂ
ಜಗತ್ಸನ್ನಿವಾಸಂ ಶತಾದಿತ್ಯಭಾಸಮ್
ಗದಾಚಕ್ರಶಸ್ತ್ರಂ ಲಸತ್ಪೀತವಸ್ತ್ರಂ
ಹಸಚ್ಚಾರುವಕ್ತ್ರಂ ಭಜೇಽಹಂ ಭಜೇಽಹಮ್ 2

ರಮಾಕಂಠಹಾರಂ ಶ್ರುತಿವ್ರಾತಸಾರಂ
ಜಲಾಂತರ್ವಿಹಾರಂ ಧರಾಭಾರಹಾರಮ್
ಚಿದಾನಂದರೂಪಂ ಮನೋಜ್ಞಸ್ವರೂಪಂ
ಧೃತಾನೇಕರೂಪಂ ಭಜೇಽಹಂ ಭಜೇಽಹಮ್ 3

ಜರಾಜನ್ಮಹೀನಂ ಪರಾನಂದಪೀನಂ
ಸಮಾಧಾನಲೀನಂ ಸದೈವಾನವೀನಮ್
ಜಗಜ್ಜನ್ಮಹೇತುಂ ಸುರಾನೀಕಕೇತುಂ
ತ್ರಿಲೋಕೈಕಸೇತುಂ ಭಜೇಽಹಂ ಭಜೇಽಹಮ್ 4

ಕೃತಾಮ್ನಾಯಗಾನಂ ಖಗಾಧೀಶಯಾನಂ
ವಿಮುಕ್ತೇರ್ನಿದಾನಂ ಹರಾರಾತಿಮಾನಮ್
ಸ್ವಭಕ್ತಾನುಕೂಲಂ ಜಗದ್ವೃಕ್ಷಮೂಲಂ
ನಿರಸ್ತಾರ್ತಶೂಲಂ ಭಜೇಽಹಂ ಭಜೇಽಹಮ್ 5

ಸಮಸ್ತಾಮರೇಶಂ ದ್ವಿರೇಫಾಭಕೇಶಂ
ಜಗದ್ಬಿಂಬಲೇಶಂ ಹೃದಾಕಾಶವೇಶಮ್
ಸದಾ ದಿವ್ಯದೇಹಂ ವಿಮುಕ್ತಾಖಿಲೇಹಂ
ಸುವೈಕುಂಠಗೇಹಂ ಭಜೇಽಹಂ ಭಜೇಽಹಮ್ 6

ಸುರಾಲೀಬಲಿಷ್ಠಂ ತ್ರಿಲೋಕೀವರಿಷ್ಠಂ
ಗುರೂಣಾಂ ಗರಿಷ್ಠಂ ಸ್ವರೂಪೈಕನಿಷ್ಠಮ್
ಸದಾ ಯುದ್ಧಧೀರಂ ಮಹಾವೀರವೀರಂ
ಭವಾಂಭೋಧಿತೀರಂ ಭಜೇಽಹಂ ಭಜೇಽಹಮ್ 7

ರಮಾವಾಮಭಾಗಂ ತಲಾಲಗ್ನನಾಗಂ
ಕೃತಾಧೀನಯಾಗಂ ಗತಾರಾಗರಾಗಮ್
ಮುನೀಂದ್ರೈಸ್ಸುಗೀತಂ ಸುರೈಸ್ಸಂಪರೀತಂ
ಗುಣೌಘೈರತೀತಂ ಭಜೇಽಹಂ ಭಜೇಽಹಮ್ 8

ಫಲಶ್ರುತಿ
ಇದಂ ಯಸ್ತು ನಿತ್ಯಂ ಸಮಾಧಾಯ ಚಿತ್ತಂ
ಪಠೇದಷ್ಟಕಂ ಕಂಠಹಾರಂ ಮುರಾರೇಃ
ವಿಷ್ಣೋರ್ವಿಶೋಕಂ ಧ್ರುವಂ ಯಾತಿ ಲೋಕಂ
ಜರಾಜನ್ಮಶೋಕಂ ಪುನರ್ವಿಂದತೇ ನೋ 9

ಇತಿ ಶ್ರೀ ಪರಮಹಂಸಸ್ವಾಮಿ ಬ್ರಹ್ಮಾನಂದವಿರಚಿತಂ ಶ್ರೀಹರಿಸ್ತೋತ್ರಮ್

-------------------------------------------------------------------------------------------

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ

ವಿಠೋಬನೆಂಬ ದೊಡ್ಡ ಸಾಹುಕಾರ || ||

ವಿಠೋಬನಿರುವದು ನದಿ ತೀರ

 ಅಲ್ಲಿ ಪಂಢರೀಭಜನೆ ವ್ಯಾಪಾರ ||.||

ತಂದೆ ನೀನೆ ತಾಯಿ ನೀನೆ ಪಾಂಡುರಂಗ

ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ

ಭಕ್ತರ ಪೋಷಕ ಪಾಂಡುರಂಗ

ನಮ್ಮ ಮುಕ್ತಿದಾಯಕ ಪಾಂಡುರಂಗ ||||

ವಿಠೋಬನಿಗೆ ಪ್ರಿಯ ತುಳಸಿಹಾರ

ಅಲ್ಲಿ ಭಕ್ತ ಜನರ ವ್ಯಾಪಾರ

ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ

ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||||

ಶ್ರೀಹರಿ ವಿಠ್ಠಲ ಪಾಂಡುರಂಗ

ಜಯ ಹರಿ ವಿಠ್ಠಲ ಪಾಂಡುರಂಗ

ವಿಠ್ಠಲ ವಿಠ್ಠಲ ಪಾಂಡುರಂಗ

ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||||

...................................................................................

ದುಗ್ಗಾಣಿ ಎಂಬುವುದು ದುರ್ಜನರ ಸಂಗ SONG LYRICS | PURANDARA DASA SONGS | DUGGANI EMBUVUDU DURJAN SANGA |

 

ದುಗ್ಗಾಣಿ ಎಂಬುವುದು ದುರ್ಜನರ ಸಂಗ

ದುಗ್ಗಾಣಿ ಬಲು ಕೆಟ್ಟದ್ದಣ್ಣಾ ॥

 

ಆಚಾರ ಹೇಳೋದು ದುಗ್ಗಾಣಿ ।ಬಹು।

ನೀಚರನೊಲಿಸೋದು ದುಗ್ಗಾಣಿ

ನಾಚಿಕೆಯಿಲ್ಲದೆ ಮನೆ ಮನೆ ತಿರುಗಿಸಿ

ಛೀ ಛೀ ಎನಿಸೋದು ದುಗ್ಗಾಣಿ ॥೧॥

 

ನೆಂಟತನ ಹೇಳೋದು ದುಗಾಣಿ । ಬಹು ।

ನೆಂಟರನೊಲಿಸೋದು ದುಗ್ಗಾಣಿ

ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು

ಕುಂಟನೆನಿಸೋದು ದುಗ್ಗಾಣಿ ॥೨॥

 

ಮಾನವಾಗಿರಿಸೋದು ದುಗ್ಗಾಣಿ ।ಬಹು ।

ಮಾನ ಹದಗೆಡಿಸೋದು ದುಗ್ಗಾಣಿ

ಬಹುಮಾನ ನಿಧಿ ಶ್ರೀ ಪುರಂದರ ವಿಠಲನ

ಕಾಣಿಸದಿರುವುದು ದುಗ್ಗಾಣಿ ॥೩॥

------------------------------------------------------------------------------------


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ | NEE MAAYEYOLAGO NINNOLU MAAYEYO | KANAKADASA SONG

ಹಾಡಲು ಕಲಿಯಿರಿ(CLICK HERE TO LEARN THIS SONG) 

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ನೀ ದೇಹದೊಳಗೂ ನಿನ್ನೊಳು ದೇಹವೊ ಹರಿಯೆ |ಪ| 


ಬಯಲೊಳಗೆ ಆಲಯವೂ ಆಲಯದಿ ಬಯಲೊ 

ಬಯಲು ಆಲಯವೆರಡು ನಯನದೊಳಗೂ 

ನಯನ ಬುದ್ಧಿಯವೊಳಗೂ ಬುದ್ಧಿ ನಯನದೊಳಗೂ

ನಯನ ಬುದ್ಧಿಗಳೆರಡೂ ನಿನ್ನೊಳಗೊ ಹರಿಯೆ |1| 


ಸವಿಯು ಸಕ್ಕರೆಯೊಳಗೂ ಸಕ್ಕರೆಯು ಸವಿಯೊಳಗೂ 

ಸವಿಯು ಸಕ್ಕರೆ ಎರಡು ಜೀಹ್ವೆಯೊಳಗೂ 

ಜೀಹ್ವೆ ಮನಸಿನವೊಳಗೋ ಮನಸು ಜೀಹ್ವೆಯವೊಳಗೂ

ಜೀಹ್ವೆ ಮನಸುಗಳೆರಡೂ ನಿನ್ನೊಳಗೊ ಹರಿಯೆ |2| 


ಕುಸುಮದಲಿ  ಗಂಧವೋ ಗಂಧದಲಿ ಕುಸುಮವೊ

ಕುಸುಮ ಗಂಧಗಳೆರಡು ಆಗ್ರಾಣದೊಳಗೂ

ಅಸಮಭವ ಕಾಗಿನೆಲೆ ಆದಿಕೇಶವರಾಯ

ಉಸುರಲೆನ್ನೊಳವಲ್ಲ ಎಲ್ಲ ನಿನ್ನೊಳಗೊ ಹರಿಯೆ

...............................................................................................................

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...