Showing posts with label LORD GANESHA(ಗಣೇಶನ ಹಾಡು). Show all posts
Showing posts with label LORD GANESHA(ಗಣೇಶನ ಹಾಡು). Show all posts

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ

ಸ್ಮರಿಸುವೆ ನಿನ್ನಯ ದಿವ್ಯ ನಾಮ ॥

 

ವಿಘ್ನ ವಿನಾಶಕ ಬುದ್ಧಿಪ್ರದಾಯಕ

ವಿದ್ಯೆಯ ನೀಡೋ ಶ್ರೀ ವರದಾಯಕ

ಚರಣ ಕಮಲ ನಿನ್ನ ಪೂಜಿಪೆ ಅನುದಿನ

ಪಾವನಗೊಳಿಸೋ ಈ ಶಾಂತಿಧಾಮ ॥1||

 

ಗಂಗಾಧರ ಸುತ ಚಂದ್ರ ಸುಧಾಕರ

ಮಂಗಳಗೊಳಿಸೋ ಶ್ರೀ ಶುಭಕಾರಕ ।

ಭವಸಾಗರವನು ದಾಟಲು ಅನುದಿನ

ಸಾಧನವೇ ತವ ತಾರಕನಾಮ ॥2||

ವಂದೇ ಓಂಕಾರ ಚಾಮರ ಕರ್ಣನೇ |ONDE OMKARA CHAMARA | LORD GANESHA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ವಂದೇ ಓಂಕಾರ ಚಾಮರ ಕರ್ಣನೇ  ಶಂಕರ ಸುತ ಶರಣು ವಿನಾಯಕ

ಮಂಗಳ ವರ ಶರಣು ।।

ಮಧೂರ ಗಣಪತಿ ಶರವು ಗಣಪತಿ  ಕುಂಭಾಶಿ ಗಣಪತಿ ಶರಣು

 ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣು ।।

 

ವಿಕಟನೆ ವಿಮಲನೆ ಏಕದಂತನೆ  ಶುಭವರ್ಣ ಗೌರಿ ಸುತನೆ

ವಿಕಟನೆ ವಿಮಲನೆ ಏಕದಂತನೆ  ಶುಭವರ್ಣ ಗೌರಿ ಸುತನೆ

ನೀನಲ್ಲದೆನಗಾರು ಸಖರಿಲ್ಲವೋ ಬಾಂಧವರಿಲ್ಲವೋ ಕಾಯುವರಿಲ್ಲವೋ

ಮಧೂರ ಗಣಪತಿ ಶರವು ಗಣಪತಿ  ಕುಂಭಾಶಿ ಗಣಪತಿ ಶರಣು

 ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣು ।। 1||

 

ಸುಮುಖನೆ ಕಪಿಲನೆ ಧೂಮ್ರವರ್ಣನೆ  ಗಣನಾಥ ನಿನಗೆ ವಂದನೆ

ಸುಮುಖನೆ ಕಪಿಲನೆ ಧೂಮ್ರವರ್ಣನೆ  ಗಣನಾಥ ನಿನಗೆ ವಂದನೆ

ಎಂದೆಂದೂ ನಿನ್ನನು ಸ್ತುತಿ ಮಾಡುವೆ ಹಾಡಿ ಕೊಂಡಾಡುವೆ ಪೂಜೆ ವ್ರತ ಮಾಡುವೆ

ಮಧೂರ ಗಣಪತಿ ಶರವು ಗಣಪತಿ  ಕುಂಭಾಶಿ ಗಣಪತಿ ಶರಣು

 ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣು ।। 2||

……………………………………………………………………………………………………………

 


ನೀ ನಮ್ಮ ಗೆಲುವಾಗಿ ಬಾ SONG LYRICS | NEE NAMMA GELUVAGI BAA SONG LYRICS | PRAYER SONGS

 

ನೀ ನಮ್ಮ ಗೆಲುವಾಗಿ ಬಾ,

ನೀ ನಮ್ಮ ಗೆಲುವಾಗಿ ಬಾ ಗಜಮುಖನೇ

ನೀ ನಮ್ಮ ಗೆಲುವಾಗಿ ಬಾ ||

ಗುರುಕುಲಕೆ ವರವಾಗಿ ಗುರಿ ತೋರೋ ಗುರುವಾಗಿ

ಪೊರೆ ನೀನು ಎಂದೆಂದೂ ಕರುಣಾಳು ಬಾ ಬಂಧು ‌‌ ||ನೀ ನಮ್ಮ||

 

 ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ

ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||

 

 ನಿಧಿಯಾಗಿ ವಿಧಿಯಾಗಿ ಸುಧೆ ತುಂಬು ಒಲವಾಗಿ

 ಹಿರಿಯಾದ ಸಿರಿ ನೀನು ಬಾಳ ಸವಿ ಜೇನು

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||


ಶ್ರೀ ವಿಘ್ನೇಶ್ವರ ವಿನಾಯಕ SONG LYRICS | LORD GANAPATI SONG LYRICS | SHRI VIGNESHWARA VINAYAKA SONG LYRICS IN KANNADA

CLICK HERE TO LEARN THIS SONG 

ಶ್ರೀ ವಿಘ್ನೇಶ್ವರ ವಿನಾಯಕ

ವರ ಪ್ರಸಾದಿಸೋ ಗಜಾನನ ॥


ಸುಮುಖನೆ ಹೇ ರಂಬ ಏಕದಂತನೇ

ಸುರಮುನಿ ವಂದಿತನೆ ಗಜಕರ್ಣನೇ

ಧೂಮ್ರಕೇತು ಗಣನಾಯಕ ಗಜಮುಖ

ಲೋಕಪಾಲಕಾ ತಂದೇ ಗಣಪತಿ ॥೧॥


ಭಾದ್ರಪದ ಶುಕ್ಲಚೌತಿ ನಿನ್ನ ಪೂಜಿಸಿ

ಭಕ್ತಗೆ ನೀಡುವೆ ನೀ ಸರ್ವಮಂಗಳಾ

ಭಾಗ್ಯದಾತ ಜಗವಂದಿತ ಗಣಪತಿ

ಬಾಳ ಬೆಳಗು ನೀಡು ಬಾರೊ ಸನ್ಮತಿ॥೨॥

..................................................................

ವಂದಿಸುವುದಾದಿಯಲಿ ಗಣನಾಥನ SONG LYRICS | PURANDARA DASA SONGS | VANDISUVUDADIYALI SONG LYRICS |

 

CLICK HERE TO LEARN THIS SONG

ವಂದಿಸುವುದಾದಿಯಲಿ ಗಣನಾಥನ |

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆ ಇದಕುಂಟು ||


ಹಿಂದೆ ರಾವಣ ತಾನು ವಂದಿಸದೆ ಗಜಮುಖನ

ನಿಂದು ತಪವನು ಗೈದು ವರ ಪಡೆಯಲು

ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ

ತಂದ ವರಗಳನೆಲ್ಲ ಧರೆಗೆ ಇಳಿಸಿದನು ||೧||


ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ

ಮುಂದೆ ಗಣಪನ ಪೂಜಿಸೆಂದು ಪೇಳೆ

ಒಂದೇ ಮನದಲಿ ಬಂದು ಪೂಜಿಸಲು ಗಣನಾಥ

ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||೨||


ಇಂದು ಜಗವೆಲ್ಲ ಉಮೆನಂದನನ ಪೂಜಿಸಲು

ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು

ತಂದೆ ಸಿರಿ ಪುರಂದರವಿಠಲನ ಸೇವೆಯೊಳು

ಬಂದ ವಿಘ್ನವ ಕಳೆದಾನಂದವನು ಕೊಡುವ ||೩||

...........................................................................................

ಗಜವದನ ಬೇಡುವೆ GAJAVADANA BEDUVE SONG LYRICS IN KANNADA & ENGLISH | PURANDARA DASA| LORD GANESHA SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಶ್ರೀ ಪುರಂದರದಾಸರು

ಗಜವದನ ಬೇಡುವೆ ಗೌರೀತನಯ

ತ್ರಿಜಗ ವಂದಿತನೆ ಸುಜನರ ಪೊರೆವನೆ॥

 

ಪಾಶಾಂಕುಶಧರ ಪರಮ ಪವಿತ್ರ

ಮೂಷಿಕವಾಹನ ಮುನಿಜನ ಪ್ರೇಮ॥೧॥

 

ಮೋದದಿ ನಿನ್ನಯ ಪಾದವ ತೋರೋ

ಸಾಧುವಂದಿತನೆ ಆದರದಿಂದಲಿ ೨॥

 

ಸರಸಿಜನಾಭ ಶ್ರೀ ಪುರಂದರ ವಿಟ್ಠಲನ

ನಿರುತ ನೆನೆಯುವಂತೆ ದಯ ಮಾಡೋ॥೩॥

.............................................................................................................

TRIJAGA VANDITANE SUJANARA POREVANE||


PAASHAANKUSHADHARA PARAMA PAVITRA

MOOSHIKA VAAHANA MUNIJANA PREMA||1||


MODADI NINNAYA PAADAVA TORO

SAADHU VANDITANE AADARADINDALI ||2||


SARASIJA NAABHA SHREE PURANDARA VITTALANA 

NIRUTA NENEYUVANTE DAYAMAADO ||3||

................................................................................................................................................


ಶರಣು ಸಿದ್ಧಿ ವಿನಾಯಕ SONG LYRICS | SHARANU SIDDHI VINAYAKA SONG LYRICS| PURANDARA DASA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ

ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ||

ಶರಣು ಶರಣು….

 

ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ

ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೇ॥1|| (ಶರಣು ಶರಣು….)

 

ಬಟ್ಟ ಮುತ್ತಿನ ಹಾರಪದಕನೆ ಬಾಹು ಹಸ್ತ ಚತುಷ್ಟನೇ

ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧಾರನೇ॥2|| (ಶರಣು ಶರಣು….)

 

ಕುಕ್ಷಿ ಮಹಾ ಲಂಬೊದರನೇ ಇಕ್ಷು ಚಾಪನ ಗೆಲಿದನೇ

ಪಕ್ಷಿವಾಹನ ಶ್ರೀ ಪುರಂದರ ವಿಠಲನಾ ನಿಜ ದಾಸನೇ॥3||(ಶರಣು ಶರಣು….)

 

…………………………………………………………………………

 Also see:

LORD GANESHA SONGS LYRICS

 PURANDARA DASA SONGS LYRICS

 

 


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ | kanaka dasa| song lyrics in kannada| NAMMAMMA SHARADE

 


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ|

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ ಕಾಣಮ್ಮಾ||

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ|
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ ||1||

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ ||2||

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ|
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿ ಕೇಶವ ದಾಸ ಕಣೇ ||3||
............................................................................................


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...