Showing posts with label SONG ON GURU. Show all posts
Showing posts with label SONG ON GURU. Show all posts

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು | ಕುವೆಂಪು | MUCCHU MARE YILLADEYE | KANNADA BHAVAGEETHE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕುವೆಂಪು

 

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

ಬಿಚ್ಚಿಡುವೆ ಹೇ ಗುರುವೆ ಅಂತರಾತ್ಮ ।

ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೆ ಅಂತರಾತ್ಮ ॥

 

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು

ಪಾಪ ತಾನುಳಿಯುವುದೆ ಪಾಪವಾಗಿ

ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ

ನರಕ ತಾನುಳಿಯುವುದೆ ನರಕವಾಗಿ ॥೧॥

 

ಶಾಂತ ರೀತಿಯಲೊಮ್ಮೆ ಕದಡಿರುವುದೆನ್ನಾತ್ಮ

ನಾಂತ ರೀತಿಯು ಅದೆಂತೋ ಓ ಅನಂತ ।

ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ

ನಿನ್ನ ನೀತಿಯ ಬೆಳಕಿನಾನಂದಕೈ ॥೨॥

----------------------------------------------------------------------------


ಶರಣು ಶಂಕರ ಗುರುವರೇಣ್ಯನೆ SONG LYRICS | SHARANU SHANKARA GURUVARENYANE | ಶಂಕರಾಚಾರ್ಯ SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಶರಣು ಶಂಕರ ಗುರುವರೇಣ್ಯನೆ ಶರಣು ಶಮಿಜನಮಾನ್ಯನೆ

 ಶರಣು ಶರಣರ ಶೋಕಮೋಹಗಳುರಿಗೆ ನೆರೆ ಪರ್ಜನ್ಯನೆ    ||  

ಶರಣು ಶಿವಗುರು ಭಾಗಧೇಯನೆ ಶರಣು ಸತ್ಯಧ್ಯೇಯನೇ

ಶರಣು ಗುರುಗೋವಿಂದರೊಲುಮೆಯ ಪರಮಹಂಸರ ರಾಯನೇ

ಶರಣು ವೇದಾಂತಾಂತರಂಗನೆ ಶರಣು ಸಂಶಯ ಭಂಗನೇ

ಶರಣು ಶುದ್ಧ ಅದ್ವೈತ ಗಂಗೆಯ ಸಿರಿಯ ಭಾಷ್ಯ ತರಂಗನೇ ||1||

 

ಶರಣು ಪರಮತ ಭೇದ ದಕ್ಷನೆ ಶರಣು ವೈದಿಕ ಪಕ್ಷನೇ

ಶರಣು ಕರುಣಾಮೃತದ ಕಿರಣಗಳೆರಚುತಿಹ ಸುಕಟಾಕ್ಷನೆ

ಶರಣು ಶಾತಿತ ಸರ್ವಕಾಮನೆ ಶರಣು ಸ್ವಾತ್ಮಾರಾಮನೇ

ಶರಣು ಸಚ್ಚಿದಾನಂದ ಧಾಮನೆ ಶರಣು ಶಂಕರ ನಾಮನೇ ||2||

………………………………………………………………………………………..

ಅಂತರತಮ ನೀ ಗುರು |ANTHARA THAMA NEE LYRICS | KUVEMPU | KANNADA SAVIGANA LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ ||

ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ || 1 ||

ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ || 2 ||

ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ || 3 ||

................................................................................................................................................. 


ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ| POET ಆರ್. ಕೆ. ಪದ್ಮನಾಭ R.K PADMANABHA |SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ

ಹೇಗೆ ಪ್ರಾರ್ಥಿಸಲಿ ಗುರುವೇ ಸದ್ಗುರುವೇ॥

 

ಜ್ಞಾನ ಸಂಪತ್ತಿಲ್ಲ ಗಾನದಲಿ ಗುಣವಿಲ್ಲ

ಮಾತಿನಲಿ ಮಂದ್ರವಿಲ್ಲ ತತ್ವದಲಿ ತಾರವಿಲ್ಲ॥೧॥

 

ಸ್ವರ ಷಡ್ಜಕೆ ಎಂದೂ ನೆಮ್ಮದಿ ಕೊಡಲಿಲ್ಲ

ಸ್ವರ ಪಂಚಮದಂತೆ ಸ್ಠಿರವಿಲ್ಲ ಚಿಂತನೆಯು

ರಾಗಾಲಾಪದಂತೆ ದಿವ್ಯ ರೂಪವಿಲ್ಲ

ರೆಕ್ಕೆಯಿಲ್ಲದ ಪಕ್ಷಿ ಪದಮನಾಭ ದಾಸ ನಾ॥೨॥

..................................................................................


ಶರೀರಂ ಸುರೂಪಂ (ಗುರು ಅಷ್ಟಕ) LYRICS IN KANNADA | GURU ASHTAKAM LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಶರೀರಂ ಸುರೂಪಂ ತಥಾ ವಾ ಕಲತ್ರಂ,

ಯಶಶ್ಚಾರು ಚಿತ್ರಂ ಧನಂ ಮೇರು ತುಲ್ಯಮ್ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 1 ||

 

ಕಲತ್ರಂ ಧನಂ ಪುತ್ರ ಪೌತ್ರಾದಿ ಸರ್ವಂ,

ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 2 ||

 

ಷಡಂಗಾದಿವೇದೋ ಮುಖೇ ಶಾಸ್ತ್ರ ವಿದ್ಯಾ,

 ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 3 ||

 

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ,

ಸದಾಚಾರವೃತ್ತೇಷು ಮತ್ತೋ ಚಾನ್ಯಃ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 4 ||

 

ಕ್ಷಮಾಮಂಡಲೇ ಭೂಪ ಭೂಪಾಲಬೃಂದೈಃ,

ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 5 ||

 

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್,

ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 6 ||

 

ಭೋಗೇ ಯೋಗೇ ವಾ ವಾಜಿರಾಜೌ,

ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 7 ||

 

ಅರಣ್ಯೇ ವಾ ಸ್ವಸ್ಯ ಗೇಹೇ ಕಾರ್ಯೇ,

ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ ಲಗ್ನಂ ಗುರೋರಂಘ್ರಿಪದ್ಮೇ,

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 8 ||

 

ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ |
ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ |
ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮಸಂಜ್ಞಂ |
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ||


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...