Showing posts with label SCHOOL PRAYERS(ಶಾಲಾ ಪ್ರಾರ್ಥನೆ). Show all posts
Showing posts with label SCHOOL PRAYERS(ಶಾಲಾ ಪ್ರಾರ್ಥನೆ). Show all posts

ವನಸುಮದೊಳೆನ್ನ ಜೀವನವು | D V G| VANA SUMADOLENNA JEEVANAVU LYRICS IN KANNADA| WITH YOUTUBE LINK

 

ಹಾಡಲು ಕಲಿಯಿರಿ(CLICK HERE TO LEARN THIS SONG)

ವನಸುಮದೊಳೆನ್ನ ಜೀವನವು ವಿಕಸಿಸುವಂತೆ

ಮನವನನುಗೊಳಿಸು ಗುರುವೇ ಹೇ ದೇವ |

 

ಜನಕೆ ಸಂತಸವೀವ ಘನನು ತಾನೆಂದೆಂಬ

ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ ||1||  

 

ಕಾನನದಿ ಮಲ್ಲಿಗೆಯು ಮೌನದಿಂ  ಬಿರಿದು

 ನಿಜ ಸೌರಭವ ಸೂಸಿ ನಲವಿಂ ತಾನೆಲೆಯ

 ಪಿಂತಿರ್ದು ದೀನತೆಯ ತೋರಿ….|

ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ||2||

.....................................................................................................................................................

ಲೋಕಮಾತೆ ವಿಮಲ ಚರಿತೆ | POPULAR SONG ON GODESS SARASWATHI LYRICS| LOKA MAATHE VIMALA CHARITHE

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೇ

ಪಾಕಶಾಸನಾದಿ ವಂದ್ಯೇಕಮಲ ಭವನ ಮಡದಿಯೇ||

 

ಕಮಲ ನೇತ್ರೆ ಇಂದು ವದನೆ ಕೋಮಲಾಂಗಿ ಸುಂದರಿ

ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ||1||

 

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ

ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ ||2||

 

ಶೃಂಗ ಗಿರಿಯ ಪುರನಿವಾಸಿ ಪಾಹಿ ಶಾರದಾಂಬೆಯೇ

ಸೆರಗನೊಡ್ಡಿ ಬೇಡಿಕೊಳ್ಳುವೆ ಪಾದ ಪದ್ಮಕೆರಗುವೆ ||3||

............................................................................................................................................

ದೇವ ನಿನ್ನ ಬೇಡುವೆ ಕಾಯೋ ದೂರ ಮಾಡದೆ song lyrics in kannada | kannada savigana lyrics | kannada school prayer

 

ಹಾಡಲು ಕಲಿಯಿರಿ(CLICK HERE TO LEARN THIS SONG)

ದೇವ ನಿನ್ನ ಬೇಡುವೆ ಕಾಯೋ ದೂರ ಮಾಡದೆ

ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ ||

 

ಸೂರ್ಯನಾಗಿ ಮೇಲೆ ಚರಿಸಿ ಕತ್ತಲನ್ನು ಸರಿಸುವೆ

ಮೋಡವಾಗಿ ನೀರು ಸುರಿಸಿ ಲೋಕಕನ್ನ ಉಣಿಸುವೆ |

ಪ್ರಾಣವಾಯುವಾಗಿ ಸುಳಿದು ಕಾಣದಂತೆ ಕಾಯುವೆ

ತಂದೆ ನಿನ್ನ ಕರುಣೆಯ ಹೇಗೆ ನಾನು ಮರೆಯುವೆ ||1||

 

ಹಸಿರಿನಲ್ಲೂ ಹೂವಿನಲ್ಲೂ ನಿನ್ನ ಹೆಜ್ಜೆ ಗುರುತಿದೆ

ಕೋಟಿ ಹಕ್ಕಿ ಕಂಠದಲ್ಲಿ ನಿನ್ನ ಸ್ತೋತ್ರ ಚಿಮ್ಮಿದೆ |

ಎಲೆ ಎಲೆಯೂ ನಿನ್ನ ಚಿತ್ರ ಕಲೆಯ ಘನತೆ ಸಾರಿದೆ

ಎಲ್ಲೆಲ್ಲೂ ನೀನೇ ದೇವ ನಿನ್ನದಲ್ಲದೇನಿದೆ ||2||

 

ಈ ಲೋಕ ನೀನು ಇರುವ ಸುಂದರ ದೇವಾಲಯ

ಒಳಗೆ ಕೂತು ಮಿಡುವೆಯಂತೆ ಇದರ ಎಲ್ಲ ನಾಡಿಯ |

ಇದರ ಸೇವೆ ನಿನ್ನ ಸೇವೆ ಎಂಬ ಋಷಿ ವಾಣಿಯ

ನಂಬಿದೆವು ಹರಸು ನಮ್ಮ ನಾವು ಕಲಿತ ಶಾಲೆಯ ||3||

............................................................................................................................................

ಯಂ ವೈದಿಕಾ ಮಂತ್ರದೃಶಃ ಪುರಾಣಾ: Lyrics in kannada| YAM VAIDIKA MANTRA | SCHOOL PRAYER

 ಹಾಡಲು ಕಲಿಯಿರಿ(CLICK HERE TO LEARN THIS SONG)


ಯಂ ವೈದಿಕಾ ಮಂತ್ರದೃಶಃ ಪುರಾಣಾ:

ಇಂದ್ರಂ ಯಮಂ ಮಾತರಿಶ್ವಾನಮಾಹು:|

ವೇದಾಂತಿನೋ  ನಿರ್ವಚನೀಯ ಮೇಕ೦

ಯ೦ ಬ್ರಹ್ಮ ಶಬ್ದೇನ ವಿನಿರ್ದಿಶಂತಿ||

 

ಶೈವಾಯಮೀಶ೦ ಶಿವ ಇತ್ಯವೋಚನ್

ಯ೦ ವೈಷ್ಣವಾ: ವಿಷ್ಣು ರಿತಿಸ್ತುವಂತಿ|

ಬುದ್ಧಸ್ತಥಾರ್ಹನ್ ಇತಿ ಬೌದ್ಧ ಜೈನಾ:

ಸತ್ ಶ್ರೀ ಅಕಾಲೇತಿ ಸಿಕ್ಖ ಸಂತಾ: ||

 

ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರ:

ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ|

ಯ೦ ಪ್ರಾರ್ಥನೆಯಂತೆ ಜಗದೀಶ ತಾರಂ

ಸ ಎಕ ಏವ ಪ್ರಭುರ್ದ್ವಿತೀಯ: ||

...................................................................................................................................


ಸ್ವಾಮಿ ದೇವನೆ ಲೋಕ ಪಾಲನೆ |SWAMY DEVANE LOKA PALANE SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತು ನಮೋಸ್ತುತೇ

ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತು ತೇ||


 ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ

ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ||1||

 

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ

ಮನೆಯ ಮಕ್ಕಳ ಐಕ್ಯ ಗಾನವ ಆಲಿಸೈ ಪರಿಪಾಲಿಸೈ||2||

.......................................................................................................................................................

Also See:

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

ಕೂಸಿನ ಕಂಡೀರಾ | KUSINA KANDIRA SONG LYRICS IN KANNADA

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

 

ತಾಯಿ ಶಾರದೆ ಲೋಕ ಪೂಜಿತೆ

 

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೇ

ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ||

 

ಅಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು(2 ಸಲ)

ಹೃದಯ ಮಂದಿರದಲ್ಲಿ ನೆಲೆಸು

ಚಿಂತೆಯ ಅಳಿಸು ಶಾಂತಿಯ ಉಳಿಸು||1||

 

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ(2 ಸಲ)

ನಿನ್ನ ಕರುಣೆಯ ಬೆಳಕಲೆಮ್ಮ ಬಾಳನು ಬೆಳಗಮ್ಮ

ನಮ್ಮ ಕೋರಿಕೆ ಆಲಿಸಮ್ಮ||2||

 

ಒಳ್ಳೆ ಮಾತುಗಲಾಡಿಸು ಒಳ್ಳೆ ಕೆಲಸವ ಮಾಡಿಸು

ಒಳ್ಳೆ ದಾರಿಯಲೆಮ್ಮ ನಡೆಸು

ವಿದ್ಯೆಯ ಕಲಿಸು ಆಸೆ ಪೂರೈಸು||3||

.............................................................................................


ಹಾಡಲು ಕಲಿಯಿರಿ(LEARN HOW TO SING THIS SONG)

Also See:

ಗುರು ಅಷ್ಟಕಂ (ಆದಿ ಶಂಕರಾಚಾರ್ಯ): ಶರೀರಂ ಸುರೂಪಂ | lyrics in Kannada| Guru Ashtakam by Adi Shankaracharya|

ಪ್ರೀತ್ಸೆ ಅಂತ ಪ್ರಾಣ ತಿನ್ನೊ SONG LYRICS IN KANNADA| PREETSE ANTA PRANA TINNO SONG| EXCUSE ME MOVIE SONG\KANNADA SAVIGANA

ಶಾಲಾ ಪ್ರಾರ್ಥನೆ : ಯಂ ಶೈವಾ ಸಮುಪಾಸತೇ (SCHOOL PRAYER: YAM SHAIVA SAMUPASATE LYRICS)

     ಶಾಲಾ ಪ್ರಾರ್ಥನೆ ಯಂ ಶೈವಾ ಸಮುಪಾಸತೇ


ಯಂ ಶೈವಾ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನ:

ಬೌದ್ಧ ಬುದ್ಧ ಇತಿ ಪ್ರಮಾಣ  ಪಟವ: , ಕರ್ತೇತಿ ನೈಯಾಯಿಕಾ ||

ಅರ್ಹನ್ನಿತ್ಯಥ ಜೈನ ಶಾಸನ ರತಾ: , ಕರ್ಮೇತಿ ಮೀಮಾಂಸಕಾ:

ಸೋಯಂ ವೋ ವಿದಧಾತು ವಾಂಛಿತಫಲಂ, ತ್ರೈಲೋಕ್ಯನಾಥೋ ಹರಿ ||

 

ಅರ್ಥ:

ಶೈವರು ಶಿವನೆಂದು, ವೇದಾಂತಿಗಳು ಬ್ರಹ್ಮವೆಂದು, ಬೌದ್ಧರು ಬುದ್ಧನೆಂದು, ವಿಚಾರ ಪಟುಗಳಾದ ನೈಯಾಯಿಕರು  ಕರ್ತೃವೆಂದು, ಜೈನ ಶಾಸನವನ್ನು ಅನುಸರಿಸುವವರು ಅರ್ಹತ್ ಎಂದು, ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸಿಸುವರೋ ಅಂತಹ ತ್ರೈಲೋಕ್ಯ ನಾಥನಾದ ಹರಿಯು ನಿಮ್ಮ ಇಷ್ಟ ಫಲಗಳನ್ನು ನೀಡಲಿ.


.......................................................................

ಹಾಡಲು ಕಲಿಯಿರಿ(LEARN HOW TO SING THIS SONG)


YAM SHAIVA SAMUPAASATE SHIVA ITHI
BRAHMETI VEDAANTINAHA
BOWDHA BUDHA ITHI PRAMAANA PATAVAHA
KARTHETI NAIYAAYIKAAHA

ARHANNITHYATHA JAINA SHAASANA RATHAA
KARMETI MEE MAAMSAKAA
SOYAM VO VIDHDHAATU VAANCHITHA PHALAM
TRAILOKYA NAATHO HARIHI||

......................................................................................................

Also see:


ಸರಸ್ವತಿ ದೇವಿಯ ಶ್ಲೋಕಗಳು(LORD SARASWATI SHLOKA LYRICS IN KANNADA)

 

ಸರಸ್ವತಿ ದೇವಿಯ ಶ್ಲೋಕಗಳು

 

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ

ವಿದ್ಯಾರಂಭಮ್ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ||

  

ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರ ವಾಸಿನಿ

ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ದೇಹಿ ಮೇ||

 

ಯಾಕುಂದೇಂದು ತುಷಾರಹಾರಧವಲಾ ಯಾ ಶುಭ್ರವಸ್ತ್ರಾನ್ವಿತಾ

ಯಾ ವೀಣಾ ವರದಂಡ ಮಂಡಿತ ಕರಾ ಯಾ ಶ್ವೇತ ಪದ್ಮಾಸನಾ|

ಯಾ ಬ್ರಹ್ಮಾಚ್ಯುತ ಶಂಕರ ಪ್ರಭ್ರತಿಭಿ: ದೇವೈ ಸದಾ ಪೂಜಿತಾ

ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಯೇಷ ಜಾಡ್ಯಾಪಹಾ||


ಸರಸ್ವತಿ ಮಹಾಭಾಗೇ ವಿದ್ಯೇ ಕಮಲ ಲೋಚನೆ |

ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾಂ ಬುದ್ಧಿಂ ದೇಹಿ ಮೇ


ಹಾಡಲು ಕಲಿಯಿರಿ(LEARN HOW TO SING THIS SONG)

Also see :


ಜನ್ಮದಿನದ ಶುಭಾಶಯ: ಸಂಸ್ಕೃತ : HAPPY BIRTHDAY SONG IN SANSKRIT.

ಜನ್ಮದಿನದ ಶುಭಾಶಯ: ಸಂಸ್ಕೃತ

               (BIRTHDAY SONG IN SANSKRIT)


ಜನ್ಮದಿನಮಿದಂ ಅಯಿ ಪ್ರಿಯ ಸಖೇ

ಶಂತನೋತು ತೇ ಸರ್ವದಾ ಮುದಂ||

ಪ್ರಾರ್ಥಯಾಮಹೇ ಭವ ಶತಾಯುಷೀ

ಈಶ್ವರ ಸದಾ ತ್ವಾಂ ರಕ್ಷತು||

ಪುಣ್ಯ ಕರ್ಮಣಾ ಕೀರ್ತಿಮರ್ಜಯ

ಜೀವನಂ ತವ ಭವತು ಸಾರ್ಥಕಂ||

 

(ಓ ಪ್ರಿಯ ಬಂಧು/ಸಖ, ಈ ನಿನ್ನ ಜನ್ಮ ದಿನ ಯಾವಾಗಲು ಸಂತೋಷ , ಮಂಗಳವನ್ನು ತರಲಿ.

ನಿನ್ನ ದೀರ್ಘಾಯುಷ್ಯಕ್ಕಾಗಿ ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.

ದೇವರು ನಿನ್ನನ್ನು ಯಾವಾಗಲೂ ಕಾಪಾಡಲಿ.

ಯಾವಾಗಲೂ ಸತ್ಕಾರ್ಯಗಳನ್ನು ಮಾಡಿ, ಒಳ್ಳೆಯ ಕೀರ್ತಿ ಗಳಿಸುತ್ತಾ, ನಿನ್ನ ಜೀವನ ಸಾರ್ಥಕಗೊಳ್ಳಲಿ.)

 ………………………………………………………..

JANMA DINAMIDAM AYI PRIYA SAKHE

SHANTANOTU TE SARVADAA MUDAM

PRAARTHAYAAMAHE BHAVA SHATAAYUSHI |

ESHWARA SADAA TWAM CHA RAKSHATU

PUNYA KARMANA KIRTI MARJAYA

JIVANAM TAVA BHAVATU SAARTHAKAM||


....................................................................

ಹಾಡಲು ಕಲಿಯಿರಿ(LEARN HOW TO SING THIS SONG)


ಗುರುವೆ ನಾನು ಒಂದು ಸೊನ್ನೆ lyrics- GURUVE NAANU ONDU SONNE LYRICS IN KANNADA AND ENGLISH




ಗುರುವೆ ನಾನು ಒಂದು ಸೊನ್ನೆ


ಗುರುವೆ ನಾನು ಒಂದು ಸೊನ್ನೆ ಸೊನ್ನೆಗೆಲ್ಲಿ ಬೆಲೆಯಿದೆ (2 ಸಲ)
ಸೊನ್ನೆ ಹಿಂದೆ ಇದ್ದರಂಕಿ ಸೊನ್ನೆಗಾಗ ಬೆಲೆಯಿದೆ
ಸೊನ್ನೆಗಾಗ ಬೆಲೆಯಿದೆ||

ಗುರುವೆ ನೀವು ನನ್ನ ಹಿಂದೆ ಅಂಕಿಯಾಗಿ ಬನ್ನಿರಿ(2 ಸಲ)
ಸೊನ್ನೆಯಾದ ನನ್ನ ಬಾಳ್ಗೆ ಬೆಳಕ ತಂದು ತುಂಬಿರಿ(2 ಸಲ) ||1||

ನಿಮ್ಮನಳಿದ  ನನ್ನ ಬದುಕು ನಿಮ್ಮಾಣೆಗು ಶೂನ್ಯವು(2 ಸಲ)
ಅಲ್ಪ ಬುದ್ಧಿ ಅತಿಯಾಸೆ ಅಹಂಕಾರ ಭರಿತವು(2 ಸಲ) ||2||

ಅಂಕಿಯಿದ್ದರೇನೆ ಬೆಲೆಯಿಹುದು ಸೊನ್ನೆಗೆ(2 ಸಲ)
ಹಿಂದೆ ಗುರುವು ಇದ್ದರೇನೇ ಬೆಲೆಯು ನನ್ನ ಇರುವಿಗೆ(2 ಸಲ) ||3||


GURUVE NAANU ONDU SONNE SONNEGELLI BELEYIDE 
SONNE HINDE IDDARANKI SONNEGAAGA BELEYIDE
SONNEGAAGA BELEYIDE||

GURUVE NEEVU NANNA HINDE ANKIYAAGI BANNIRI
SONNEYAADA NANNA BAALGE BELAKA TANDU TUMBIRI||1||

NIMMANALIDA NANNA BADUKU NIMMAANEGU SHOONYAVU
ALPA BUDHI ATHI AASE AHANKAARA BHARITAVU||2||

ANKIYIDDDARENE BELEYIHUDU SONNEGE
HINDE GURUVU IDDARENE BELEYU NANNA IRUVIGE||3||
.....................................................................................................................

Also SEe:


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...