Showing posts with label NITYOTSAVA (ನಿತ್ಯೋತ್ಸವ ಗೀತೆ). Show all posts
Showing posts with label NITYOTSAVA (ನಿತ್ಯೋತ್ಸವ ಗೀತೆ). Show all posts

ಜಯ ಭಾರತ ಜನನಿಯ ತನುಜಾತೆ SONG LYRICS | ರಾಷ್ಟ್ರಕವಿ ಕುವೆಂಪು | JAYA BHARATHA JANANIYA TANUJAATE |

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ರಾಷ್ಟ್ರಕವಿ ಕುವೆಂಪು

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ ||


ಭೂದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂದನರವತರಿಸಿದ
 ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ||


ಜನನಿಯ ಜೋಗುಳ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೇ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ
  ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ||


ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ
 ಭಾರತ ಜನನಿಯ ತನುಜಾತೆ
                                        ಜಯ ಹೇ ಕರ್ನಾಟಕ ಮಾತೆ ||                      
           
ತೈಲಪ ಹೊಯ್ಸಳರಾಳಿದ ನಾಡೇ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ
 ಭಾರತ ಜನನಿಯ ತನುಜಾತೆ
                                        ಜಯ ಹೇ ಕರ್ನಾಟಕ ಮಾತೆ ||                                 

ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ
  ಭಾರತ ಜನನಿಯ ತನುಜಾತೆ
             ಜಯ ಹೇ ಕರ್ನಾಟಕ ಮಾತೆ  ||

..............................................................................................................................................

ಹೊತ್ತಿತೋ ಹೊತ್ತಿತು ಕನ್ನಡದ ದೀಪ SONG LYRICS | HOTHITHO HOTHITHU KANNADA DA DEEPA |

 

ಸಾಹಿತ್ಯ : ಡಾ.ಸಿದ್ದಯ್ಯ ಪುರಾಣಿಕ

ಶಕ್ತಿ ಮೂಲವು ನಿನಗೆ ಕನ್ನಡದ ಪ್ರೇಮ
ಕನ್ನಡಿಗ ನೀನಾಗು ಕನ್ನಡದ ಧೀಮ
ಉಸಿರಾಗು ಕನ್ನಡದ ತೇಜ ಸ್ವರೂಪ
ಕನ್ನಡಿಗರೆದೆ ಬೆಳಗೆ ಕನ್ನಡವೇ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ ಹೊತ್ತಿತೋ ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ



ಕಣ್ಣು ಕುಕ್ಕಿಸುವಂತೆ ಧೇವಿದ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ.......... ಕನ್ನಡದ ಮಾನ......
ಕನ್ನಡದ ಪ್ರಾಣ... ಕನ್ನಡದ ಮಾನ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||1||

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರೂ ಬೇಕಿದನು ನಿಡುಬತ್ತಿಯಾಗಿ
ಧರಿಸುವವರು ಬೇಕಿದನು ಸಿರಿಹಣತೆಯಾಗಿ
ತನ್ನ ಉಸಿರಾಗಿ.........ಧರ್ಮಕ್ಕೆ ಬಾಗಿ......
ತನ್ನ ಉಸಿರಾಗಿ ಧರ್ಮಕ್ಕೆ ಬಾಗಿ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||2||

ಚಿರಕಾಲ ಬೆಳಗಲಿ ಕನ್ನಡದ ದೀಪ
ಜಗಕ್ಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬವಾಗಿ ಭವ್ಯ ಪ್ರದೀಪ
ಕಳೆಯುತ್ತಾ ತಾಪ............ ಬೆಳೆಸುತ್ತಾ ಸೈಪ
ಕಳೆಯುತ್ತಾ ತಾಪ .....ಬೆಳೆಸುತ್ತಾ ಸೈಪ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||3||

..............................................................................................................................................

ಕರುನಾಡೇ ಕೈ ಚಾಚಿದೆ ನೋಡೆ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ SONG LYRICS | ರಚನೆ: ಸು ರಂ ಎಕ್ಕುಂಡಿ | KANNADA NAADINA KARAVALI SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)

 ರಚನೆ:  ಸು ರಂ ಎಕ್ಕುಂಡಿ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ


 ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ

ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ

ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಜಗಕೆಲ್ಲ ಒಬ್ಬನೆ ಅ೦ಬಿಗನಣ್ಣ

ನಾವೆಲ್ಲ ಅವನನ್ನೆ ನ೦ಬಿದೆವಣ್ಣ

ನಾವೆಲ್ಲ ಅವನನ್ನೆ ನ೦ಬಿದೆವಣ್ಣ ||1||


 ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ

ಸಹ್ಯಾದ್ರಿ ವನಗಳ ಸು೦ದರ ಭೂದೇವಿ

ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ

ಸಹ್ಯಾದ್ರಿ ವನಗಳ ಸು೦ದರ ಭೂದೇವಿ

ಧರ್ಮವ ಸಾರುವ ಧರ್ಮಸ್ಠಳ

ಉಡುಪಿಯೇ ವೈಕು೦ಠ …..ಗೋಕರ್ಣ ಕೈಲಾಸ ||2||

 

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು

ಸಾವಿರ ಸ೦ಸಾರ ಬದುಕಿಗೆ ಹೊನ್ನು

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು

ಸಾವಿರ ಸ೦ಸಾರ ಬದುಕಿಗೆ ಹೊನ್ನು

ಮ೦ಗೇಶರಾಯರು ಗೋವಿ೦ದ ಪೈಗಳು

ಜನಿಸಿದ ಕವಿಗಳ ಸಿರಿನಾಡು

ದಾಸರ ವಾಣಿಯ ಮ೦ಗಳ ಬೀಡು ||3||

  

ಯಕ್ಷಗಾನ ಮೇಳದ ನಾಟ್ಯ ತರ೦ಗ

ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ

ಯಕ್ಷಗಾನ ಮೇಳದ ನಾಟ್ಯ ತರ೦ಗ

ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ

ಶರಾವತಿ ……..ನೇತ್ರಾವತಿ

ಪಾವನ ನದಿಗಳ ಸಾಗರ ಸ೦ಗಮ  ||4||

.......................................................................................................................................

ಶತ ಶತಮಾನಗಳೇ ಉರುಳಲಿ SONG LYRICS | KANNADA RAJYOTSAVA SONGS |SHATHA SHATHAMAANAGAlE URULALI SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಡಿ. ರಮೇಶ್ ಗುರುದೇವ್

 

ಶತ ಶತಮಾನಗಳೇ ಉರುಳಲಿ ನಾನಳಿದರೂ ನೀನಳಿದರೂ

 ಕೊನೆಗೊಬ್ಬ ಕನ್ನಡಿಗನು ಉಳಿದರೂ

ಕನ್ನಡಮಯವಾಗುವುದು ಕನ್ನಡ ನಾಡೆಲ್ಲಾ

ಆ ಒಬ್ಬ ಕನ್ನಡಿಗ ನೀನಾಗು ಬಾ

ಈ ತಾಯಿಯ ಋಣವಾ ತೀರಿಸು ಬಾ  ||

 

ಕನ್ನಡವೇ ಸತ್ಯ ಕನ್ನಡವೇ ನಿತ್ಯ

 

ಕನ್ನಡವೆಂದರೆ ಬರಿ ನುಡಿಯಲ್ಲ

ಧಮನಿ ಧಮನಿಯಲಿ ಹರಿಯುವ ರಕುತ

ಕನ್ನಡವೆಂದರೆ ಬರಿ ಭಾಷೆಯಲ್ಲ

ಹೃದಯ ಹೃದಯಗಳ ಸಂಗಮ

ಕನ್ನಡನೆಂದರೆ ಬರಿ ನಡೆಯಲ್ಲ

ಹೆಜ್ಜೆ ಹೆಜ್ಜೆಗಳು ಸಾಗಿದ ಗುರುತು

ಕನ್ನಡವೆಂದರೆ ಇತಿಹಾಸವಲ್ಲ

ಇಂದು ನಾಳೆಗಳ ಚಿರಬೆಸುಗೆ

ಕನ್ನಡವೆಂದರೆ ಜನ ಜಾತಿಯಲ್ಲ

ಸರ್ವರನು ಕೈಬೀಸಿ ಕರೆಯುವ ಮಾತೆ ||1||

 

ಕನ್ನಡವೆಂದರೆ ಬಿಳಿ ಮೋಡವಲ್ಲ

ಆಗುಂಬೆಯ ನಿತ್ಯ ವರ್ಷಧಾರೆ

ಕನ್ನಡವೆಂದರೆ ನಿಂತ ನೀರಲ್ಲ

ನಿರಂತರ ಹರಿಯುವ ಅಮೃತಕಾವೇರಿ

ಕನ್ನಡವೆಂದರೆ ಕಲ್ಲುಮನಸಲ್ಲ

ಕರಗಿದ ಬಾದಾಮಿಯ ಮೇಣ ಬಸದಿ

ಕನ್ನಡವೆಂದರೆ ಬರಿ ಧ್ವನಿಯಲ್ಲ

ಪ್ರತಿಧ್ವನಿಸುವ ಗೋಲಗುಮ್ಮಟ

ಕನ್ನಡವೆಂದರೆ ಕೊಂಪೆಯಲ್ಲ

ಗತಕಾಲದ ಸುವರ್ಣ ಹಂಪಿ ||2||

 

ಕನ್ನಡವೆಂದರೆ ನೀಲಾಕಾಶವಲ್ಲ

ಅದರಾಚೆಗೂ ಚಾಚುವ ಅನಂತ ದೂರ

ಕನ್ನಡವೆಂದರೆ ಬರಿ ಪ್ರಪಾತವಲ್ಲ

ಭಾವನೆಗಳ ಆಳಕ್ಕಿಳಿಯುವ ಜೋಗ ಜಲಪಾತ

ಕನ್ನಡವೆಂದರೇ ಬೇರೇ ಏನೂ ಅಲ್ಲ

ಅದು ನನ್ನೊಳಗೂ ಅದು ನಿನ್ನೊಳಗೂ

ಕಣಕಣದೊಳಗೂ ಬೆರೆತಿರುವ ಉಸಿರು

ಕನ್ನಡವೆಂದರೆ ಕೊನೆಯಾಗುವುದಲ್ಲ

ಅದು ಒಬ್ಬನಿಂದ ಕೋಟಿ ಕೋಟಿ ಜೀವ ಜೀವದಲಿ

ಸಂಚರಿಸುವ ಚೇತನ ,ಸಂಚರಿಸುವ ಚೇತನ,ಸಂಚರಿಸುವ ಚೇತನ ||3||

............................................................................................................................................................

ಕರುನಾಡೇ ಕೈ ಚಾಚಿದೆ ನೋಡೆ SONG LYRICS |RAVICHANDRAN SONGS | KARUNAADE KAI CHAACHIDE SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕರುನಾಡೇ……ಕೈ ಚಾಚಿದೆ ನೋಡೆ
ಹಸಿರುಗಳೇ……ಆ ತೋರಣಗಳೇ

ಬೀಸೋ ಗಾಳಿ ಚಾಮರ ಬೀಸಿದೆ  ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

ಕರುನಾಡೇ ಎದೆ ಹಾಸಿದೆ ನೋಡೆ
ಹೂವುಗಳೇ ಶುಭ ಕೋರಿವೆ ನೋಡೆ ||

 

ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ

ಸಂಪಿಗೆ  ಸಂಪಿಗೆ ಕೆಂಡಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ

ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ……. ||1||

 

ಮೂಡಣ ಸೂರ್ಯನೇ ಅರಿಶಿಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ

ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ

ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ……||2||

........................................................................................................................................

ಎನಿತು ಇನಿದು ಈ ಕನ್ನಡ ನುಡಿಯು SONG LYRICS | ಬೆಟಗೇರಿ ಕೃಷ್ಣಶರ್ಮ| ENITHU INIDU EE KANNADA NUDIYU SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಬೆಟಗೇರಿ ಕೃಷ್ಣಶರ್ಮ

 

ಎನಿತು ಇನಿದು ಈ ಕನ್ನಡ ನುಡಿಯು

ಮನವನು ತಣಿಸುವ ಮೋಹನ ಸುಧೆಯು

 

 ಗಾನವ ಬೆರೆಯಿಸಿ ವೀಣೆಯ ದನಿಯೊಳು

 ವಾಣಿಯು ನೇವುರ ನುಡಿಸುತಲಿ

ವಾಣಿಯು ನೇವುರ ನುಡಿಸುತೆ ಕುಣಿಯಲು

 ಮಾಣದೆ ಮೆರೆಯುವ ಮಂಜುಲ ರವವೋ ||1||

 

ರಂಗನ ಮುರಳಿಯ ಹಿಂಗದ ಸ್ವರದಲಿ

 ಹೆಂಗಳೆಯರು ಬೆಳದಿಂಗಳಲಿ

 ಹೆಂಗಳೆಯರು ಬೆಳದಿಂಗಳ ಇರುಳಲಿ

 ಸಂಗೀತವನೊರೆದಂಗವಿದೇನೋ ||2||

 

ಗಿಳಿಗಳು ಉಲಿಯುವ ಮೆಲುಮಾತುಗಳೋ

 ಕಳಕಂಠಗಳಾ ಚೆಲುವಿನ ಕುಕಿಲೋ

 ಅಳಿಗಳ ಬೆಳಗಿನ ಉಲಿಯೋ ಉಲಿಯೋ

 ಮನವನು ತಣಿಸುವ ಮೋಹನ ಸುಧೆಯೋ ||3||

.....................................................................................................................................................

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ SONG LYRICS | ONDE ONDE ONDE KARNATAKA ONDE SONG LYRICS | ದ. ರಾ. ಬೇಂದ್ರೆ

ಹಾಡಲು ಕಲಿಯಿರಿ(CLICK HERE TO LEARN THIS SONG) 


ರಚನೆ: ದ. ರಾ. ಬೇಂದ್ರೆ

 

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ

ಹಿಂದೆ ಮುಂದೇ ಎಂದೇ ಕರ್ನಾಟಕ ಒಂದೇ||


 ಹಿಂದೆ ಮುಂದೆ ಎಂದೇ ಕರ್ನಾಟಕ ಒಂದೇ

ಜಗದೇಳಿಗೆಯಾಗುವುದಿದೆ  ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ
ಒಂದೇ ಜಗವು ಮನವು ಕನ್ನಡಿಗರು ಎಂದೆ
ಕುಲವೊಂದೇ…. ಸ್ಥಳವೊಂದೇ ನೀತಿಯ ನೆಲೆಯೊಂದೇ
ಹೀಗೆನ್ನದ ಹೆರವರು, ಅವರಿದ್ದರು ಒಂದೇ, ಇರದಿದ್ದರೂ ಒಂದೇ
ಕನ್ನಡವೆಂದು ಒಪ್ಪದು.. ಕರ್ನಾಟಕ ನಿಂದೆ||1||

ಕನ್ನಡ ಮಾತೆ ಮಾತೆಯೂ, ಕರ್ನಾಟಕ ಒಂದೇ
ಅದು ದೈವತ, ಅದು ಜೀವಿತ, ಒಪ್ಪಿಹೆವದು ಎಂದೆ
ನಮ್ಮದು ನಿಮ್ಮದು ಅವರದು, ಆಸ್ತಿ ಪಾಸ್ತಿ
ನಾಡಿನ ತಾಯಿಗೆ ಸೇರಿದೆ, ಬೇರೆಯ ಮನೆ ನಾಸ್ತಿ
ಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ
ಇದನೊಪ್ಪದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ
ಕರ್ನಾಟಕ ಹಿತವಿಹಿತವು, ಕನ್ನಡ ಕುಲದಿಂದೆ ||2||

ಕನ್ನಡವು ಭಾರತವು ಜಗವೆಲ್ಲವು ಒಂದೇ
ತುಂಬಿದೆ ಕನ್ನಡ ಕುಲವನ್ನು ಒಪ್ಪುವ ಕುಲದಿಂದೇ

ಕನ್ನಡ ಧೀಕ್ಷೆಯ ಹೊಂದಿದ ಪ್ರತಿಯೊಬ್ಬನು ಆರ್ಯ
ಕನ್ನಡ ತೇಜವು ಸಾರಲಿ ಕನ್ನಡಿಗರ ಕಾರ್ಯಾ
ಕನ್ನಡ ನಡೆ ಇರದವರೇ ಶೂದ್ರರು ಅನಿವಾರ್ಯ

ಇಂತರಿಯದ ಹೆರವರು ಅವರಿದ್ದರು ಒಂದೇ, ಇರದಿದ್ದರೂ ಒಂದೇ
ಉಗ್ಗಡಿಸಿರಿ ನಾಸ್ತಿಗೆ ಜಯ ಜಯ ಜಯವೆಂದೆ ||3||

...............................................................................................................................................

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...