ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ಚಲನಚಿತ್ರ ಗೀತೆ, ಶಾಲಾ ಪ್ರಾರ್ಥನೆ, ಭಾವನಾತ್ಮಕ ಹಾಡುಗಳು, ಶ್ಲೋಕಗಳು ಮತ್ತು ಸುಭಾಷಿತಗಳು ಸೇರಿದಂತೆ ಎಲ್ಲಾ ರೀತಿಯ ಕನ್ನಡ ಹಾಡುಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಬ್ಲಾಗ್ ಉಪಯುಕ್ತವಾಗಿದೆ. ಹೆಚ್ಚಿನ ಹಾಡುಗಳ ಸಾಹಿತ್ಯದ ಕೊನೆಯಲ್ಲಿ ಹಾಡನ್ನು ಕಲಿಯಲು ಅನೂಕೂಲವಾಗುವಂತೆ, ಯು ಟ್ಯೂಬ್ ಲಿಂಕ್ ಅನ್ನು ಕೊಡಲಾಗಿದೆ.
ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ | mella mellane bandane song lyrics | purandara dasa |
ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS
ಹಾಡಲು ಕಲಿಯಿರಿ(CLICK HERE TO LEARN THIS SONG)
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ
ವಿಠೋಬನೆಂಬ ದೊಡ್ಡ ಸಾಹುಕಾರ ||
ಪ ||
ವಿಠೋಬನಿರುವದು ನದಿ ತೀರ
ಅಲ್ಲಿ ಪಂಢರೀಭಜನೆ ವ್ಯಾಪಾರ ||ಅ.ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
...................................................................................
ದುಗ್ಗಾಣಿ ಎಂಬುವುದು ದುರ್ಜನರ ಸಂಗ SONG LYRICS | PURANDARA DASA SONGS | DUGGANI EMBUVUDU DURJAN SANGA |
ದುಗ್ಗಾಣಿ ಎಂಬುವುದು
ದುರ್ಜನರ ಸಂಗ
ದುಗ್ಗಾಣಿ ಬಲು
ಕೆಟ್ಟದ್ದಣ್ಣಾ ॥
ಆಚಾರ ಹೇಳೋದು
ದುಗ್ಗಾಣಿ ।ಬಹು।
ನೀಚರನೊಲಿಸೋದು
ದುಗ್ಗಾಣಿ
ನಾಚಿಕೆಯಿಲ್ಲದೆ ಮನೆ
ಮನೆ ತಿರುಗಿಸಿ
ಛೀ ಛೀ ಎನಿಸೋದು
ದುಗ್ಗಾಣಿ ॥೧॥
ನೆಂಟತನ ಹೇಳೋದು
ದುಗಾಣಿ । ಬಹು ।
ನೆಂಟರನೊಲಿಸೋದು
ದುಗ್ಗಾಣಿ
ಒಂಟೆ ಹಾಂಗೆ ಮೋರೆ
ಮೇಲಕ್ಕೆ ಸೆಳಕೊಂಡು
ಕುಂಟನೆನಿಸೋದು
ದುಗ್ಗಾಣಿ ॥೨॥
ಮಾನವಾಗಿರಿಸೋದು
ದುಗ್ಗಾಣಿ ।ಬಹು ।
ಮಾನ ಹದಗೆಡಿಸೋದು
ದುಗ್ಗಾಣಿ
ಬಹುಮಾನ ನಿಧಿ ಶ್ರೀ
ಪುರಂದರ ವಿಠಲನ
ಕಾಣಿಸದಿರುವುದು
ದುಗ್ಗಾಣಿ ॥೩॥
------------------------------------------------------------------------------------
ರಾಮ ರಾಮ ರಾಮ ರಾಮ ರಾಮ ಎನ್ನಿರೋ | RAMA RAMA RAMA SEETHA RAMA ENNIRO SONG LYRICS IN KANNADA |LORD RAMA
ಹಾಡಲು ಕಲಿಯಿರಿ(CLICK HERE TO LEARN THIS SONG)
ರಾಗ: ತಿಲಂಗ್
ರಾಮ ರಾಮ ರಾಮ ರಾಮ ರಾಮ ಎನ್ನಿರೋ |ಸೀತಾ|
ಅಮರಪತಿಯ ದಿವ್ಯ ನಾಮ ಅಂದಿಗೊದಗಿ ಬಾರದೊ
ಭರದಿ ಯಮನ ಭಟರು ಬಂದು ಹೊರಡಿರೆಂದು ಮೆಟ್ಟಿ ಮುರಿಯೆ
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದೋ ||
ಶ್ವಾಸೋಛ್ವಾಸವೆರಡು ಕಂಠ ವಾಸವಾಗಿ ಸಿಲುಕಿದಾಗ
ವಾಸುದೇವ ಕೃಷ್ಣನ ನಾಮ ಆ ಸಮಯಕೊದಗದೋ ||
ಶೃಂಗಾರದ ದೇಹವೆಲ್ಲ ಅಂಗಬಡಿದು ಮುರಿದು ಬಿದ್ದು
ಕಂಗಳಿಗಾತ್ಮ ಸೇರಿದಾಗ
ರಂಗನ ನಾಮ ಒದಗದೋ ||
ಕಲ್ಲು ಮರನಂತೆ ಜೀವ ನಿಲ್ಲದಂತೆ ಮರಣ ವ್ಯಾಳೆ
ಫುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದೋ||
ಶ್ರೇಷ್ಠ ಜನ್ಮದಲ್ಲಿ ಹುಟ್ಟಿ ದುಷ್ಟ ಮಾಡಿ ದೇಹ
ಬಿಟ್ಟು ಹೋಗುವಾಗ ಪುರಂದರ ವಿಠ್ಠಲ ನಾಮ ಬಾರದೋ||
ಪುರಂದರ ದಾಸರು – ಕವಿ ಕಾವ್ಯ ಪರಿಚಯ | Purandara Dasa – Kavi Kavya Parichaya
ಪೂರ್ವ ನಾಮ :
ಶ್ರೀನಿವಾಸ ನಾಯಕ /ನವಕೋಟಿ ನಾರಾಯಣ (ಬಿರುದು)
ಕಾಲ : 1484
- 1564
ಜನ್ಮಸ್ಥಳ : ಆರಗ,
ತೀರ್ಥಹಳ್ಳಿ ತಾಲ್ಲೂಕು ,ಶಿವಮೊಗ್ಗ ಜಿಲ್ಲೆ
ತಂದೆ : ವರದಪ್ಪ ನಾಯಕ
ತಾಯಿ: ಲಕ್ಷ್ಮೀದೇವಿ
ಹೆಂಡತಿ : ಸರಸ್ವತೀ
ಪೂರ್ವಕಸುಬು : ಹಣದ
ಲೇವಾದೇವಿ
ಅಂಕಿತ :ಪುರಂದರ ವಿಠಲ
ಬಿರುದು: ಕರ್ಣಾಟಕ
ಸಂಗೀತ ಪಿತಾಮಹ
ಪ್ರಮುಖ ಕೃತಿಗಳು:
ಜಗದೊದ್ಧಾರನ, ಕೃಷ್ಣಾ ನೀ ಬೇಗನೆ
ಬಾರೊ, ಭಾಗ್ಯದ ಲಕ್ಷ್ಮಿ ಬಾರಮ್ಮ
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ | NEE MAAYEYOLAGO NINNOLU MAAYEYO | KANAKADASA SONG
ಹಾಡಲು ಕಲಿಯಿರಿ(CLICK HERE TO LEARN THIS SONG)
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೂ ನಿನ್ನೊಳು ದೇಹವೊ ಹರಿಯೆ |ಪ|
ಬಯಲೊಳಗೆ ಆಲಯವೂ ಆಲಯದಿ ಬಯಲೊ
ಬಯಲು ಆಲಯವೆರಡು ನಯನದೊಳಗೂ
ನಯನ ಬುದ್ಧಿಯವೊಳಗೂ ಬುದ್ಧಿ ನಯನದೊಳಗೂ
ನಯನ ಬುದ್ಧಿಗಳೆರಡೂ ನಿನ್ನೊಳಗೊ ಹರಿಯೆ |1|
ಸವಿಯು ಸಕ್ಕರೆಯೊಳಗೂ ಸಕ್ಕರೆಯು ಸವಿಯೊಳಗೂ
ಸವಿಯು ಸಕ್ಕರೆ ಎರಡು ಜೀಹ್ವೆಯೊಳಗೂ
ಜೀಹ್ವೆ ಮನಸಿನವೊಳಗೋ ಮನಸು ಜೀಹ್ವೆಯವೊಳಗೂ
ಜೀಹ್ವೆ ಮನಸುಗಳೆರಡೂ ನಿನ್ನೊಳಗೊ ಹರಿಯೆ |2|
ಕುಸುಮದಲಿ ಗಂಧವೋ ಗಂಧದಲಿ ಕುಸುಮವೊ
ಕುಸುಮ ಗಂಧಗಳೆರಡು ಆಗ್ರಾಣದೊಳಗೂ
ಅಸಮಭವ ಕಾಗಿನೆಲೆ ಆದಿಕೇಶವರಾಯ
ಉಸುರಲೆನ್ನೊಳವಲ್ಲ ಎಲ್ಲ ನಿನ್ನೊಳಗೊ ಹರಿಯೆ
...............................................................................................................
ಬಾ ರಂಗ ಎನ್ನ ನಾಲಿಗೆಯಲಿ ಸದಾ BAA RANGA ENNA NALIGEYALI SADA | LORD VISHNU SONG LYRICS |PURANDARA DASA
ಹಾಡಲು ಕಲಿಯಿರಿ(CLICK HERE TO LEARN THIS SONG)
ಬಾ ರಂಗ ಎನ್ನ
ನಾಲಿಗೆಯಲಿ ಸದಾ
ಹರಿ ನಾರಾಯಣ ನಾಮದ
ಸ್ಮರಣೆ
ಬಾ ರಂಗ ಶ್ರೀ ರಂಗ ||
ಕುಳಿತಿರುವಾಗಲು
ನಿಂತಿರುವಾಗಲು
ಹಾಡುವಾಗಲು
ನಲಿದಾಡುವಾಗಲು
ಕೇಡುಗ ತನದಿಂದ ನೋಡಿದ
ಭಾವದೊಳ್
ನಾ ಮಾಡಿದಾ ಪಾಪ ಓಡುವ
ಹಾಗೆ ||1||
ಕನಸಿನೊಳಾಗಲಿ
ಮನಸಿನೊಳಾಗಲಿ
ಕನಸು ಮನಸಿನಲಿ ನಿನ್ನ
ನೆನಪಿರಲಿ
ಸಂತಸ ವರದ ಶ್ರೀ
ಪುರಂದರ ವಿಠಲನೆ
ಅಂತ್ಯಕಾಲಕು ನಿನ್ನ
ಚಿಂತಿಸುವ ಹಾಗೆ ||2||
....................................................................................................
ಜಯ ಜಯ ಮೃತ್ಯುಂಜಯ ಮಹದೇವ SONG LYRICS IN KANNADA | ಪ್ರಸನ್ನ ವೇಂಕಟದಾಸರು | JAYA JAYA MRATYUNJAYA SONG | LORD SHIVA
ರಚನೆ: ಪ್ರಸನ್ನ
ವೇಂಕಟದಾಸರು
ಜಯ ಜಯ ಮೃತ್ಯುಂಜಯ
ಮಹದೇವ
ಕಾಯೋ ಕರುಣದಿ
ಮಹಾನುಭಾವ॥
ಜಯ ಜಯ ಜಯ ಜಯ ಶಿವ
ಶಿವ ಶಿವ ಶಿವ
ಹರ ಹರ ಹರ ಹರ ಶಿವ
ಶಿವ ಶಿವ ಶಿವ
ಫಾಲ ನಯನ ಕಪಾಲೀ ಶೂಲಿ
ಮಲ್ಲಿಕಾಜಯ ಮಹಾಲಯ
ಮೌಲಿ।
ಫುಲ್ಲನಾಭನ ಬಲ್ಲಿದ
ಭಕುತಗೆ
ಒಲ್ಲೆನದೇ ಒಲಿವ ಅತಿ
ಸುಲಭಾ॥೧॥
ಜಯ ಜಯ ಜಯ ಜಯ ಶಿವ
ಶಿವ ಶಿವ ಶಿವ
ಹರ ಹರ ಹರ ಹರ ಶಿವ
ಶಿವ ಶಿವ ಶಿವ
ಮದನ ಮರ್ದನ
ಪಂಚಾಕ್ಷರಿ ಕೈಲಾಸ
ಸದನ ಸದಾಶಿವ ಸಾಂಬ
ರಮಣ ।
ದುರ್ದಶಾದಕ ಮರ್ದಕ
ಶಿವ ಶಿವ
ಸ್ವರ್ದುಣಿ ಸಹಿತ
ಕಪರ್ದಿತ ಪೂರ್ಣ ॥೨॥
ಜಯ ಜಯ ಜಯ ಜಯ ಶಿವ
ಶಿವ ಶಿವ ಶಿವ
ಹರ ಹರ ಹರ ಹರ ಶಿವ
ಶಿವ ಶಿವ ಶಿವ
ಓಂಕಾರ ಭುಜಗಾಲಂಕಾರ
ಗೌರೀ ವರ
ಶಂಕರ ಸಕಲ ಸಂಕಟ ಹರ
ಹರ ಹರ
ಕಿಂಕರ ಮನೋಹರ
ವಾಂಛಿತಾನ್ವರ
ಸಂಕರುಷಣ
ಪ್ರಸನ್ವೆಂಕಟ ಪ್ರೀಯ॥೩॥
ನಾರಾಯಣನೆಂಬ ನಾಮವೇ ಮೂಲಮಂತ್ರ SONG LYRICS | VADIRAJA SONGS | NARAYANANEMBA NAMAVE SONG LYRICS
ನಾರಾಯಣನೆಂಬ ನಾಮವೇ ಮೂಲಮಂತ್ರ
ಓರಂತೆ ಜಪಿಸುವೆನು ಶ್ರೀಹರಿ ಹರಿ ||ಪ||
ಆರ ಬಿಡುವೆನು ಮತ್ತಾರ ಕೂಡುವೆನು
ಆರಾರಿಗೊಡಲನೀವೆ
ಆರಂಘ್ರಿಗೆರಗುವೆ ಆರಾರ ಮನ್ನಿಸುವೆ
ಆರಿಂದ ಉದರ ಪೂರ್ತಿ ||1||
ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆ
ಹಬ್ಬವಾವನ ಕಂಡರೆ
ಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆ
ಅಭ್ಯಕ್ಷ ಹಯವದನ ||2||
....................................................................
ಯಾಕೆ ನಿರ್ದಯನಾದೆ ಎಲೋ ದೇವನೇ SONG LYRICS | PURANDARA DASA SONG LYRICS| YAKE NIRDAYANAADEYO |
ಯಾಕೆ ನಿರ್ದಯನಾದೆ ಎಲೋ ದೇವನೇ
ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ॥
ಕಂಗೆಟ್ಟು ಕಂಬದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ ।
ಮಂಗಳಾ ಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನೋ ಪೇಳೋ ಹರಿಯೆ ॥೧॥
ಸಿರಿದೇವಿಗ್ ಹೇಳದೇ ಸೆರಗು ಸಂವರಿಸಿದೆ
ಗರುಡನ ಮೇಲೆ ಗಮನವ ಮಾಡಿದೆ
ಭರದಿಂದ ನೀ ಬಂದು ಕರಿಯನುದ್ದರಿಸಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ॥೨॥
ಅಜಮಿಳನು ಅಣ್ಣನೆ ವಿಬೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ ।
ಭಜನೆಗವರೇ ಹಿತರೇ ನಾ ನಿನಗೆ ಅನ್ಯನೇ
ತ್ರಿಜಗ ಪತಿ ಸಲಹಯ್ಯ ಪುರಂದರ ವಿಠಲ ॥೩॥
......................................................................................
ತಲ್ಲಣಿಸದಿರು ಕಂಡ್ಯ ತಾಳು ಮನವೇ SONG LYRICS | TALLAnISADIRU KANDYA SONG LYRICS |
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ : ಕನಕದಾಸರು
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ SONG LYRICS | ಕನಕದಾಸರು |BAGILANU TEREDU SONG LYRICS IN KANNADA
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ಕನಕದಾಸರು
ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ SONG LYRICS | SADA ENNA HRADAYADALLI SONG LYRICS |
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ : ವಿಜಯದಾಸರು
ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS
ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥ ವಿಘ್ನ ವಿನಾಶಕ ಬುದ್ಧಿಪ್ರ...
-
ಕಮಲದ ಮೊಗದೋಳೆ ಕಮಲದ ಕಣ್...
-
ಹಾಡಲು ಕಲಿಯಿರಿ(CLICK HERE TO LEARN THIS SONG) ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ || ...
-
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ ಬಾಳಿಗೆ ಒಂದೆ ಮನೆ ಬಾಳೆಗೆ ಒಂದೆ ಗೊನೆ ಭೂಮಿಗೆ ದೈವ ಒಂದೇನೆ...