Showing posts with label PATRIOTIC SONGS(ದೇಶಭಕ್ತಿಗೀತೆಗಳು). Show all posts
Showing posts with label PATRIOTIC SONGS(ದೇಶಭಕ್ತಿಗೀತೆಗಳು). Show all posts

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ |ಕೆ ಎಸ್ ನಿಸಾರ್ ಅಹಮದ್| SADA URIYUTIRUVA HAAGE |PATRIOTIC SONG IN KANNADA

 CLICK HERE TO LEARN THIS SONG          CLICK HERE TO LEARN THIS SONG(SCHOOL POEM)

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ

 ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದ ಜನತೆ

 ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ||

 

 ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?

ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ

ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ.||1||

 

 ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ

 ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ;

ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ ||2||

 

ಸಾಗಿದಂತೆ ಸಲ್ಲುತಿರಲು ಸಾಧನೆಯೆಡೆ ಗಮನ

 ಪ್ರಾಣವನ್ನೇ ಪಗಡೆಯಾಡಿದವಿರಿಗೆಮ್ಮ ನಮನ;

ತಾಯಮುಡಿಗೆ ದಿನವು ಏರುತಿರಲಿ ಹೂವು ದವನ.||3||

---------------------------------------------------------------------------------

ವಿಶ್ವವಿನೂತನ ವಿಜಯ ಪತಾಕೆ SONG LYRICS |PATRIOTIC SONGS LYRICS | VISHWA VINOOTHANA VIJAYA PATAKE SONG LYRICS

 

ರಾಗ : ಮಾಯಾಮಾಳವಗೌಳ


ವಿಶ್ವವಿನೂತನ ವಿಜಯ ಪತಾಕೆ

ಹಿಮಗಿರಿ ಶಿಖರದಿ ನೆಟ್ಟವಳೇ

ನೇಹದ ನೂಪುರ ಹಿತ ಕಾಲುಂಗುರ

ಸೌಹಾರ್ದದ ಬಳೆ ತೊಟ್ಟವಳೆ

|| ರಿ ನಿ ಸ।ಸ॥

||ದನಿಸರಿ ಸನಿದಪ ಸನಿದಪ ಮಗರಿಸ।।

 

ಸತ್ಯ ಅಹಿಂಸಾ ಬೆಂಡೋಲೆಯ ಜೊತೆ

ಸಂಯಮಶೀಲವನುಟ್ಟವಳೆ

ಮಾನವ ಹೃದಯದಿ ಮಮತೆಯ ಬಿತ್ತುತ

ಅಮೃತೋಪಮ ಫಲ ಕೊಟ್ಟವಳೇ 1 ||

 

ಜಯ ಜಗದೀಶ್ವರಿ ಜಯ ರಾಜೆಶ್ವರಿ

ಜಯನುತ ಚಾರಿಣಿ ದಿವ್ಯನುತೆ।

ಸ್ವಾತಂತ್ರ್ಯೋದಯ ಪ್ರಥಮ ಪ್ರಭಾತದಿ

ಜಯ ಜಯ ಜಯ ಹೇ ಭಾರತ ಮಾತಾ॥2

........................................................................................................................

ಭಾರತಾಂಬೆಯೆ ನಿನ್ನಚರಣಕೆ patriotic songs lyrics in kannada| bharatambeye ninna charanake

 

ಭಾರತಾಂಬೆಯೆ ನಿನ್ನಚರಣಕೆ ನಾನು ನಮಿಸುವೆನು | |

ಅನ್ನವಿತ್ತಿಹೆ, ಬೆನ್ನ ಸವರಿಹೆ, ಮುನ್ನ ನೆನೆಸುವೆನು || ಅ ಪ ||

 

ಒಂದುತಾಯಿಯ ಮಕ್ಕಳೆಂಬುವ ಪಾಠ ಕಲಿಸುತಿರು

ಹಿಂದೆಬಾಳಿದ ಹಿರಿಯರೆಲ್ಲರ ಮಾರ್ಗ ಮರೆಸದಿರು |

ಹೊಂದಿಬಾಳುವ, ವೃಂದಮೆಚ್ಚುವ ಗುಣವ ಬಿತ್ತುತಿರು

ಕಂದ ನಿನ್ನವ, ನಾನು ಬೇಡುವೆ, ಇಲ್ಲವೆನ್ನದಿರು || ||

 

ಬೆರಗುಗೊಳಿಸುವ ಬಾಳ್ವೆಮಾಡಿದ ನಿನ್ನ ಪುತ್ರರನು

ಅರಿತುಕೊಳ್ಳುವ ವಿನಯಶಕ್ತಿಯ ನಿತ್ಯ ಬೆಳೆಸುತಿರು |

ಹಿರಿಯ ಸಾಧನೆ ಮಾಡಿ ಮೆರೆದಿಹ ನಿನ್ನ ಸಾಧಕರ

ನಿರತ ನೆನೆಯುತ ಗುರಿಯ ಸೇರುವೆ, ಸ್ಫೂರ್ತಿ ಕೊಡುತಲಿರು  || ||

 

ದಿನವು ಕನ್ನಡ ಭಾಷೆಯಾಡುವ ಬುದ್ಧಿಯನು ಕೊಡುತ

ಮನಸಿನಾಲಯದೊಳಗೆ ಭಾರತಿ ಮಾತೆಯನು ನಿಲಿಸು |

ಜನುಮವೆಷ್ಟೇ ಇರಲಿ ಎನಗೆ, ನೆಲೆಯ ಕರುಣಿಸುತ,

ವಿನಯಪೂರ್ವಕ ಭಕುತಿಯಿಂದಲಿ ಮಣಿಯುವೆನು ಪದಕೆ || ||

......................................................................................................


ಭಾರತ ಮಾತಾ ಬುಧ ಜನಗೀತಾ SONG LYRICS IN KANNADA| BHARATHA MATHA BUDHA JANA GEETHA

 

ಭಾರತ ಮಾತಾ ಬುಧ ಜನಗೀತಾ

ನಿರ್ಮಲ ಗಂಗಾ ಜಲಪೂತ

ಜಯ ಭಾರತ ಜನನಿ||

 

ಶಿರಸಿ ವಿರಾಜಿತ ಹಿಮಗಿರಿ ಮುಕುಟಂ

ಚರಣೆ ಹಿಂದು ಮಹೋಧದಿ ಸಲಿಲಂ

ಜಘನೆ ಸಸ್ಯ ಲತಾ ತರು ವಸನಂ

ಜಯ ಭಾರತ ಜನನಿ||

 

ಋಷಿ ವರ ಘೋಷಿತ ಮಂತ್ರ ಪುಲಕಿತ

ಕವಿ ವರ ಗುಂಪಿತ ಪಾವನ ಚರಿತ

ಧೀರವೀರ  ನೃಪ ಶೌರ್ಯ ಪಾಲಿತಾ

ಜಯ ಭಾರತ ಜನನಿ||

 

ಮನಸಿ ಮೇ ಸದಾ ತವಪದ ಯುಗಂ

 ಸಂಸ್ಕೃತ ಸಂಸ್ಕೃತಿ ಸತತ ಚಿಂತನಂ

ಭಾವರಾಗ ಲಯ ತಾಳಮೇಳನಂ

ಜಯ ಭಾರತ ಜನನಿ||

......................................................................


ಎಲೆಗಳು ನೂರಾರು ಭಾವದ ಎಳೆಗಳು ನೂರಾರು | ELEGALU NOORARU LYRICS IN KANNADA | PATRIOTIC SONG

 ಹಾಡಲು ಕಲಿಯಿರಿ(CLICK HERE TO LEARN THIS SONG)

ಎಲೆಗಳು ನೂರಾರು ಭಾವದ ಎಳೆಗಳು ನೂರಾರು 

ಎಲೆಗಳ ಬಣ್ಣ ಒಂದೇ ಹಸಿರು |

ಜಾತಿ, ಭಾಷೆ, ಪಂಥ ಹಲವು 

ಅವುಗಳ ಹಿಂದೆ ಮಾತ್ರ ಒಂದೇ ಒಲವು 

ಸಾಗೋಣ ಒಟ್ಟಿಗೆ ಸಾಗೋಣ , ನಾವು ನೀವು ಸೇರಿ ಒಂದಾಗಿ 

ನೀಗೋಣ ಭಿನ್ನತೆ ನೀಗೋಣ , ಸಾವಿರ ಹೆಜ್ಜೆ ಒಂದೇ ಗುರಿಗಾಗಿ ||

 

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು 

ಬೆಳಕಿನ ಪರಿಗೆ ಒಂದೇ ಹೆಸರು |

ಸೂರ್ಯ, ಚಂದ್ರ, ಲಾಂದ್ರ, ಹಣತೆ,

ಅವುಗಳ ಹಿಂದೆ ಮಾತ್ರ ಒಂದೇ ಘನತೆ 

ತೆರೆಯೋಣ ಹೃದಯ ತೆರೆಯೋಣ  , ನಾವು ನೀವು ಸೇರಿ ಒಂದಾಗಿ 

ಮರೆಯೋಣ ಭೇದ ಮರೆಯೋಣ , ನದಿಗಳು ಕೂಡಿದ ಪ್ರೀತಿಯ ಕಡಲಾಗಿ ||1||

 

ಪದಗಳು ನೂರಾರು ಬದುಕಿನ ಹದಗಳು ನೂರಾರು 

ಪದಗಳ ಹಿಂದೆ ಒಂದೇ ಉಸಿರು  |

ಅಕ್ಕರೆಯಿಂದ ಒಟ್ಟಿಗೆ ಬಾಳೋಣ 

ಭಾರತ ಮಾತೆಗೆ ನಮ್ಮ ಪ್ರೀತಿಯ ತೋರೋಣ 

ಕಟ್ಟೋಣ ನಾಡನು ಕಟ್ಟೋಣ,  ನಾವು ನೀವು ಸೇರಿ ಒಂದಾಗಿ 

ಮುಟ್ಟೋಣ ಬಾನನು  ಮುಟ್ಟೋಣ, ತಾರೆಗಳೇ  ನಾಡಿನ ಸೂರಾಗಿ ||2||

 .................................................................................................................................................


SANSKRIT SONG | LYRICS |ಸರ್ವೇಷಾಂ ನೋ ಜನನೀ ಭಾರತ | PATRIOTIC SONG | SARVESHAM NO JANANI

 

ಹಾಡಲು ಕಲಿಯಿರಿ(CLICK HERE TO LEARN THIS SONG)

सर्वेषां नो जननी भारतधरणी कल्पलतेयं

जननी-वत्सल-तनय-गणैस्तत् सम्यक् शर्म विधेयम् ॥ ध्रु॥

 हिमगिरि-सीमन्तित-मस्तकमिदं अम्बुधि-परिगत-पार्श्वं

अस्मज्जन्मदमन्नदमनिशं श्रौतपुरातनमार्षम् ॥ १॥

 विजनितहर्षं भारतवर्षं विश्वोत्कर्षनिदानं

भारतशर्मणि कृतमस्माभिः नवमिदमैक्यविधानम् ॥ २॥

 भारतहितसम्पादनमेव हि कार्यं त्विष्टविपाकं

भारतवर्जं न किमपि कार्यं निश्चितमित्यस्माकम् ॥ ३॥

 भारतमेका गतिरस्माकं नापरास्ति भुवि नाम ।

सर्वादौ हृदयेन च मनसा भारतमेव नमाम ॥ ४॥

 

      ಸರ್ವೇಷಾಂ ನೋ ಜನನೀ ಭಾರತ ಧರಣೀ ಕಲ್ಪಲತೇಯಂ

ಜನನೀ-ವತ್ಸಲ-ತನಯ-ಗಣೈಸ್ತತ್ ಸಮ್ಯಕ್ ಶರ್ಮ ವಿಧೇಯಮ್ ||

 

 ಹಿಮಗಿರಿ-ಸೀಮಂತಿತ-ಮಸ್ತಕಮಿದಂ ಅಂಬುಧಿ-ಪರಿಗತ-ಪಾರ್ಶ್ವಂ

ಅಸ್ಮಜ್ಜನ್ಮದಮನ್ನದಮನಿಶಂ ಶ್ರೌತಪುರಾತನಮಾರ್ಷಮ್ |

ವಿಜನಿತಹರ್ಷಂ ಭಾರತವರ್ಷಂ ವಿಶ್ವೋತ್ಕರ್ಷನಿದಾನಂ

ಭಾರತ ಶರ್ಮಣಿ ಕೃತಮಸ್ಮಾಭಿಃ ನವಮಿದಮೈಕ್ಯವಿಧಾನಮ್

 

ಭಾರತ ಹಿತ ಸಂಪಾದನಮೇವ ಹಿ ಕಾರ್ಯಂ ತ್ವಿಷ್ಟವಿಪಾಕಂ

 ಭಾರತವರ್ಜಂ ಕಿಮಪಿ ಕಾರ್ಯಂ ನಿಶ್ಚಿತಮಿತ್ಯಸ್ಮಾಕಮ್

ಭಾರತಮೇಕಾ ಗತಿರಸ್ಮಾಕಂ ನಾಪರಾಸ್ತಿ ಭುವಿ ನಾಮ

ಸರ್ವಾದೌ ಹೃದಯೇನ ಮನಸಾ ಭಾರತಮೇವ ನಮಾಮ

.......................................................................................................................


ಜಯ ವಿವೇಕಾನಂದ ಗುರುವರ | JAYA VIVEKANANDA GURUVARA SONG LYRICS |

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ ||

 ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ ||

 

 ಸುಪ್ತದೈವರೇ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ ||

ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ || 1||

 

ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ ||

ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು ||2||

..........................................................................



ಬನ್ನಿ ಹಿಂದೂ ವೀರರೆ ಮುಂದೆ ಸಾಗುವಾ(PATRIOTIC SONG )|BANNI HINDU VEERARE MUNDHE SAAGUVA LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)


ಬನ್ನಿ ಹಿಂದೂ ವೀರರೆ ಮುಂದೆ ಸಾಗುವಾ

ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು

ಧರೆಯೊಳು ಸಾರುವ ಮುಂದೆ ಸಾಗುವ||

 

ತಾಯ ಸೇವೆಗಾಗಿ ಬನ್ನಿ ಧ್ಯೇಯಕಾಗಿ ದುಡಿವ ಬನ್ನಿ

ನಿದ್ದೆ ತೊರೆಯುವ,ಎದ್ದು ನಿಲ್ಲುವ,ಸಿದ್ಧರಾಗುವ|

ಕತ್ತಲನ್ನು ಕಬಳಿಸುತ್ತ ಸುತ್ತ ಬೆಳಕನರಳಿಸುತ್ತ

ಮುಕ್ತ ರವಿಯು ಮೂಡುವ, ನೋಟ ನೋಡುವ||1||

 

ಭಗವಧ್ವಜ ಹಾರುತಿಹುದು ಮುಗಿಲ ಮೇಲೇರುತಿಹುದು

ಶುಭವ ಕೋರುತಾ,ಅಭಯವೀಯುತಾ,ಪ್ರಭೆಯ ಬೀರುತ|

ಭೋಗ ವಿಷಯ ರಾಗ ತ್ಯಜಿಸಿ ತ್ಯಾಗ ಭಾವ ಮನದಿ ನಿಲಿಸಿ

ಭಾಗ್ಯ ಪೂರ್ಣ ನಾಡಯೋಗ್ಯ ಮಕ್ಕಳೆನಿಸುವ||2||

 

ಮುಂದೆ ನಡೆಯೆ ಸ್ವರ್ಗ ದ್ವಾರ ಹಿಂದೆ ಸರಿಯೆ ನರಕ ಘೋರ

ಎಂದು ಸಾರುವ,ಮುಂದೆ ಸಾಗುವ, ವಿಜಯ ಗಳಿಸುವ|

ಮುಂದುವರಿಯೆ ತಡೆವರಾರು ? ಸಂಘಶಕ್ತಿಗೆದುರು ಯಾರು?

ಅಸುರ ಬಲವು ಬೆದರಿ ಜಾರುತಿಹುದ ಕಾಣುವ||3||

 

ಜಯ ಜಯ ಜಯ ಮಾತೃಭೂಮಿ ಮಂಗಳಕರ ಪುಣ್ಯಭೂಮಿ

ಎಂದು ಹಾಡುವ,ಘೋಷಗೈಯ್ಯುವ,ಹರ್ಷಗೊಳ್ಳುವ|

ಮಾತೃಭಕ್ತ ಹೃದಯವಿರಲು ಈಶನೊಲುಮೆ ಬಲವದಿರಲು

ಕಾಲ ಯಮನ ತಡೆಯುವ, ಧೀರರೆನಿಸುವ||4||

..........................................................................................................................................

Also See:

ನಾವಾಡುವ ನುಡಿಯೇ ಕನ್ನಡ ನುಡಿ|NAVADUVA NUDIYE SONG LYRICS IN KANNADA|ಕನ್ನಡ

SUBHASHITA: ಅಪಿ ಸ್ವರ್ಣಮಯೀ ಲಂಕಾ(ಯಾವುದು ಸ್ವರ್ಗಕ್ಕಿಂತಲೂ ಮಿಗಿಲಾದುದು?)|API SWARNAMAYI LANKA SHLOKA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

अपि स्वर्णमयी लङ्का मे लक्ष्मण रोचते |

जननी जन्म भूमिश्च स्वर्गादपि गरीयसि ||

 

ಅಪಿ ಸ್ವರ್ಣಮಯೀ ಲಂಕಾ ಮೇ ಲಕ್ಷ್ಮಣ ರೋಚತೇ।

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ॥

 

ಶ್ರೀ ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ: ಹೇ ಲಕ್ಷ್ಮಣ, ಲಂಕೆಯು ಸ್ವರ್ಣಮಯವಾಗಿದ್ದರೂ ನನಗೆ ಅದು ಇಷ್ಟವಾಗುವುದಿಲ್ಲ. ನನ್ನ ಜನನಿಯಾದ ಕೌಸಲ್ಯೆ ಹಾಗೂ ಜನ್ಮ ಭೂಮಿಯಾದ ಅಯೋಧ್ಯೆ ನನಗೆ ಸ್ವರ್ಗಕ್ಕಿಂತಲೂ ಮಿಗಿಲಾದುದು.

 

Sri Rama tells Lakshmana: Hey Lakshmana, though Lanka is golden, I do not like it. Kausalya, my mother and Ayodhya, the land of my birth, are more than heaven to me.

.............................................................................................................


ಶಕ್ತಿ ಸ೦ಭೃತ೦ ಯುಕ್ತಿ ಸ೦ಭೃತ೦ (ಸಂಸ್ಕೃತ ದೇಶಭಕ್ತಿ ಗೀತೆ) |SHAKTI SAMBRATAM-BHAVATU BHARATAM(PATRIOTIC SONG IN SANSKRIT LANGUAGE

 ಹಾಡಲು ಕಲಿಯಿರಿ(CLICK HERE TO LEARN THIS SONG)


ಶಕ್ತಿ ಸ೦ಭೃತ೦ ಯುಕ್ತಿ ಸ೦ಭೃತ೦ , ಶಕ್ತಿ ಸ೦ಭೃತ೦ ಯುಕ್ತಿ ಸ೦ಭೃತ೦

ಶಕ್ತಿ ಯುಕ್ತಿ ಸ೦ಭೃತ೦ ಭವತು ಭಾರತಂ, ಶಕ್ತಿ ಯುಕ್ತಿ ಸ೦ಭೃತ೦ ಭವತು ಭಾರತಂ|

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ಶಸ್ತ್ರ ಧಾರಕ೦ ಶಾಸ್ತ್ರ ಧಾರಕ೦ ಶಸ್ತ್ರ ಧಾರಕ೦ ಶಾಸ್ತ್ರ ಧಾರಕ೦

ಶಸ್ತ್ರಶಾಸ್ತ್ರ ಧಾರಕ೦ ಭವತು ಭಾರತಂ, ಶಸ್ತ್ರಶಾಸ್ತ್ರ ಧಾರಕ೦ ಭವತು ಭಾರತಂ |

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ರೀತಿ ಸಂಸ್ಕೃತ೦ ನೀತಿ ಸಂಸ್ಕೃತ೦, ರೀತಿ ಸಂಸ್ಕೃತ೦ ನೀತಿ ಸಂಸ್ಕೃತ೦,

ರೀತಿ-ನೀತಿ ಸಂಸ್ಕೃತ೦ ಭವತು ಭಾರತಂ, ರೀತಿ-ನೀತಿ ಸಂಸ್ಕೃತ೦ ಭವತು ಭಾರತಂ

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ಕರ್ಮ ನಷ್ಟಿಕ೦ ಧರ್ಮ ನೈಷ್ಟಿಕ೦ ಕರ್ಮ ನಷ್ಟಿಕ೦ ಧರ್ಮ ನೈಷ್ಟಿಕ೦

ಕರ್ಮ ಧರ್ಮ ನೈಷ್ಟಿಕ೦ ಭವತು ಭಾರತಂ ಕರ್ಮ ಧರ್ಮ ನೈಷ್ಟಿಕ೦ ಭವತು ಭಾರತಂ|

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ಭಕ್ತಿ ಸಾಧಕಂ ಮುಕ್ತಿ ಸಾಧಕಂ, ಭಕ್ತಿ ಸಾಧಕಂ ಮುಕ್ತಿ ಸಾಧಕಂ

 ಭಕ್ತಿ ಮುಕ್ತಿ ಸಾಧಕಂ ಭವತು ಭಾರತಂ ಭಕ್ತಿ ಮುಕ್ತಿ ಸಾಧಕಂ ಭವತು ಭಾರತಂ|

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

..............................................................................................................................

शक्ति संभ्र्तं युक्ति संभ्र्तं , शक्ति संभ्र्तं युक्ति संभ्र्तं

शक्ति युक्ति संभ्र्तं भवतु भारतं, शक्ति युक्ति संभ्र्तं भवतु भारतं |

 भारतं भारतं भवतु भारतं , भारतं भारतं भवतु भारतम् ||

 

शस्त्रधारकं शास्त्रधारकं , शस्त्रधारकं शास्त्रधारकं

शस्त्रशास्त्रधारकं भवतु भारतं, शस्त्रशास्त्रधारकं भवतु भारतम्||

भारतं भारतं भवतु भारतं , भारतं भारतं भवतु भारतम् ||

 

रीति सम्स्कृतं नीति सम्स्कृतं, रीति सम्स्कृतं नीति सम्स्कृतं,

रीतिनीति सम्स्कृतं भवतु भारतम्, रीतिनीति सम्स्कृतं भवतु भारतम्,|

भारतं भारतं भवतु भारतं , भारतं भारतं भवतु भारतम् ||

 

कर्म नैष्ठिकं धर्म नैष्ठिकं, कर्म नैष्ठिकं धर्म नैष्ठिकं, 

कर्म धर्म नैष्ठिकं भवतु भारतम्, कर्म धर्म नैष्ठिकं भवतु भारतम् |

भारतं भारतं भवतु भारतं , भारतं भारतं भवतु भारतम् ||

 

भक्ति साधकं मुक्ति साधकं, भक्ति साधकं मुक्ति साधकं

भक्तिमुक्ति साधकं भवतु भारतम्, भक्तिमुक्ति साधकं भवतु भारतम्,|

भारतं भारतं भवतु भारतं , भारतं भारतं भवतु भारतम् ||

....................................................................................................................................

 

संभ्र्तम् (ಸ೦ಭೃತ೦) = ಚೆನ್ನಾಗಿ ಪೋಷಿಸಲ್ಪಟ್ಟ

नैष्ठिकम्( ನೈಷ್ಟಿಕ೦) =ನಿಷ್ಠಾವಂತ

भवतु (ಭವತು) = ಆಗಲಿ, ಇರಲಿ

..................................................................................................

Also SEe:

ಮುನಿವರ ವಿಕಸಿತ ಕವಿವರ ವಿಲಸಿತ|मुनिवर विकसित कविवर विलसित| MUNIVARA VIKASITA|SANSKRIT SONG LYRICS

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...