Showing posts with label EMOTIONAL SONGS(ಭಾವಗೀತೆಗಳು). Show all posts
Showing posts with label EMOTIONAL SONGS(ಭಾವಗೀತೆಗಳು). Show all posts

ತೂಗಿ ತೂಗಿ ಮರಗಳೇ | ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್ | ಪರಿಸರ ಗೀತೆ | environmental song in kannada |TOOGI TOOGI MARAGALE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್

 

ತೂಗಿ ತೂಗಿ ಮರಗಳೇ ಇಳೆಗೆ ಇಳಿದೆ ವರಗಳೇ

ನೆಲದ ಮಧುರ ಗಾನದಲ್ಲಿ ಮೂಡಿ ಬಂದ ಸ್ವರಗಳೇ ॥

ಆ ಆ ಆ ಆ ಆ .. ಆ ಆ ಆ ಆ..  ಆ ಆ ಆ ಆ ಆ .. ಆ ಆ ಆ ಆ

 

ಮಾತಾಡದೆ ದುಡಿಯುವ ಪ್ರೀತಿ ಪಡೆದ ಕರಗಳೇ

ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವ ನೆಲೆಗಳೇ

ಸಾಲು ಹಸಿರ ಮಾಲೆಯೇ ಜೀವ ರಸದ ನಾಲೆಯೇ

ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೆ ॥೧॥

 

ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ

ಮೈಯ ತುಂಬ ಚಿಗುರಿನ ರೋಮಾಂಚನವ ತಳೆವಿರಿ

ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ

ಔದಾರ್ಯದ ಒಡಲಾಗಿ ಹೂವು ಹಣ್ಣು ಸುರಿವಿರಿ ॥೨॥

---------------------------------------------------------------------------------------------------------------

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು | ಕುವೆಂಪು | MUCCHU MARE YILLADEYE | KANNADA BHAVAGEETHE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕುವೆಂಪು

 

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

ಬಿಚ್ಚಿಡುವೆ ಹೇ ಗುರುವೆ ಅಂತರಾತ್ಮ ।

ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೆ ಅಂತರಾತ್ಮ ॥

 

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು

ಪಾಪ ತಾನುಳಿಯುವುದೆ ಪಾಪವಾಗಿ

ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ

ನರಕ ತಾನುಳಿಯುವುದೆ ನರಕವಾಗಿ ॥೧॥

 

ಶಾಂತ ರೀತಿಯಲೊಮ್ಮೆ ಕದಡಿರುವುದೆನ್ನಾತ್ಮ

ನಾಂತ ರೀತಿಯು ಅದೆಂತೋ ಓ ಅನಂತ ।

ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ

ನಿನ್ನ ನೀತಿಯ ಬೆಳಕಿನಾನಂದಕೈ ॥೨॥

----------------------------------------------------------------------------


ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು |DEVA NINNA MAAYEGANJI | ಕನ್ನಡ ಭಾವಗೀತೆ | ಕೆ ಎಸ್ ನರಸಿಂಹಸ್ವಾಮಿ

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕೆ ಎಸ್ ನರಸಿಂಹಸ್ವಾಮಿ

ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು

ನಿನ್ನ ಇಚ್ಛೆಯಂತೆ ನಡೆವೆ ನಡ್ದಿ ಮಾಡೆನು ॥

 

ಮುಕ್ತಿ ಮುಕ್ತಿ ನನ್ನ ನಾನು ತಿಳಿದುಕೊಳ್ವುದೋ

ಸಾವಿಗಂಜಿ ನಿನ್ನಡಿಯಲಿ ಅಡಗಿಕೊಳ್ವುದೋ ।

ಶಕಿಯಿತ್ತೆ ಮುಕ್ತಿಯನ್ನು ಗಳಿಸಿಕೊಳ್ಳಲು

ನೀರನೆರೆದೆ ಬಳ್ಳಿಯನ್ನು ಬೆಳೆಸಿಕೊಳ್ಳಲು ॥೧॥

 

ಜ್ಞಾನ ರವಿಯನಿತ್ತೆ ಎದೆಯ ನೋಡಿಕೊಳ್ಳಲು

ಗೀತೆಯನ್ನು ಕೊಟ್ಟೆ ಕೊಳಲನೂದಿಕೊಳ್ಳಲು ।

ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ

ಜಗವನೆನಗೆ ಬಿಟ್ಟಿರುವೆ ಏಕೆ ಕಾಡಲಿ ॥೨॥

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು SONG LYRICS | NINNOLUMEYINDALE BAALU SONG LYRICS | ರಚನೆ: ಕೆ ಎಸ್ ನರಸಿಂಹಸ್ವಾಮಿ

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ: ಕೆ ಎಸ್ ನರಸಿಂಹಸ್ವಾಮಿ 

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೇ? ||

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನನ್ನ ಕನಸುಗಳೆಲ್ಲಾ ಕೈಗೊಳುವ ಯಾತ್ರೆಯಲಿ
ಸಿದ್ದಿಸುವ ಧನ್ಯತೆಯು ನೀನೇನೇ ||1||

ನಿನ್ನಕಿರುನಗೆಯಿಂದ ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೇ ||2||
....................................

ನೀರ ತೊರೆದ ಮೀನಿನಂತೆ SONG LYRICS | NEERA TOREDA MEENINANTHE SONG LYRICS | KANNADA BHAVAGEETHE LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ರವಿ ಶಿವರಾಯಗೊಳ

                            ನೀರ ತೊರೆದ ಮೀನಿನಂತೆ ನರಳಬೇಡ ಬಾಳೆ

 ಒಲವ ಮಳೆಯ ಆಸೆಯಲ್ಲಿ ಬದುಕಬೇಕು ನಾಳೆ

 

ನೂರು ಕನಸು ಹೊತ್ತ ಮನಸು ತುಡಿಯುತಿರಲಿ ನನಸಿಗೆ

ಆಸೆ ಮರೆತು ಸೋತ ಬದುಕು ತೊರೆಯದಿರಲಿ ನಂಬಿಗೆ

ನಿತ್ಯ ಜ್ಯೋತಿ ಬೆಳಗುತಿರಲಿ ಆತ್ಮ ಶುದ್ದ ಬಾಳಿಗೆ

ನಡುಗದಿರಲಿ ನಂದದಿರಲಿ ಸೋಲು ಎಂಬ ಗಾಳಿಗೆ ||1||

 

ದೂರ ತೀರ ಪಯಣವಿದು ದಣಿಯದಿರಲಿ ಕಾಲು

ಸೋಲು ಗೆಲುವು ಸಹಜವಿಲ್ಲಿ ಸ್ವೀಕರಿಸು ಪಾಲು

ಮೂರು ದಿನದ ಸಂತೆಯೊಳಗೆ ಜಾರದಿರಲಿ ಹೃದಯ

ಜಾತ್ರೆ ಮುಗಿದ ಬಯಲಿನೊಳಗೆ ಏಕಾಂತವೆ ಗೆಳೆಯಾ ||2||

..........................................................................................................................................................

ನೀಲ ನಭಕೆ ನೂಲ ಏಣಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ SONG LYRICS | ONDU MUNJAVINALI SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ :ಚನ್ನವೀರಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು

ಅದಕೆ ಹಿಮ್ಮೇಳವನೆ ಸೂಸಿಪಹ ಸುಳಿ ಗಾಳಿ

ತೆಂಗು ಗರಿಗಳ ನಡುವೆ ನುಸುಳುತಿತ್ತು ||

 

 ಎಳೆವೆಣ್ಣು ಮೈದೊಳೆದು ಮಕರಂದ ಅರಿಶಿನದಿ

 ಹೂ ಮುಡಿದು ಮಧು ಮಗಳ ಹೋಲುತಿತ್ತು

 ಮೂಡಣದಿ ನೇಸರನ ನಗೆಮೊಗದ ಶ್ರೀ ಕಾಂತಿ

 ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು||1||

 

 ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು

 ಸೊಡರಿನಲಿ ಆರತಿಯ ಬೆಳಗುತಿತ್ತು

 ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ

 ಶುಭಮಸ್ತು ಶುಭಮಸ್ತು ಎನ್ನುತಿತ್ತು||2||

 

 ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ

 ದುಂಬಿಗಳ ಓಂಕಾರ ಹೊಮ್ಮುತಿತ್ತು

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂದಳದಿ

ಚಿಟ್ಟೆ ವೆಂಗಣ ಕುಣಿತ ಹಾಕುತಿತ್ತು||3||

 

 ಉಷೆಯ ನುಂಗದಿಬೆದಲಿ ಹರ್ಷ ಪಾರ್ಶ್ವಗಳಂತೆ

 ಮರದ ಹನಿ ತಟ ಪಟನೆ ಉದು ರುತಿತ್ತು

 ಸೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ

 ಹೊಸಬಾಳ ಸವಿಗನಸು ನೆನೆಯುತಿತ್ತು||4||

.......................................................................................................................................................

ನೀಲ ನಭಕೆ ನೂಲ ಏಣಿ SONG LYRICS | NEELA NABHAKE NOOLA ENI SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಬಾಗೂರು ಮಾರ್ಕಾಂಡೇಯ

ನೀಲ ನಭಕೆ ನೂಲ ಏಣಿ ಕಣ್ಣಂಚಲಿ ಬಿಗಿದೆಯಾ

ನೀಲ ಮೇಘ ಶಾಮನನ್ನು ಮಧುಮಂಚಕೆ ಕರೆದೆಯಾ ||

 

ಬರುವನೆಂಬ ಯಾವ ಸುಳಿವು ತೇಲಿಸಿದೆ ರಾಧೆಯ

ಕಂಪೊಡಲಿನ ಮಧುರ ಮಾತು ತಂದಿತೇನೋ ಸುದ್ಧಿಯಾ||1||

 

ಚೈತ್ರನೊಲುಮೆ ಸ್ವರದ ಸಾಲು ಕುಹೂ ಕುಹೂ ಎಂದಿದೆ

ಎತ್ತ ನೋಡಲು ಸೊಬಗಿನೊಡಲು ಚಿತ್ರವಾಗಿ ಮೂಡಿದೆ ||2||

 

ಕಾಣುವೆದೆಗೆ ಮುದವ ಸುರಿದು ಪ್ರಣಯ ಗೀತೆ ಸೃಜಿಸಿದೆ

ಸುತ್ತ ಭಾವ ಸೆರೆಯ ಬಿಗಿದು ಶಾಮನೆದೆಯಲಿ ಹುದುಗಿದೆ ||3||

..................................................................................................................................................................


ಅಂತರಂಗದ ಮೃದಂಗ ಅಂತು ತೊಂ ತನಾನ |ANTHARANGA DA MRADANGA SONG LYRICS |DA RA BENDRE SONGS

 

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ತಾನ, ತೊಂತನನ ತಾನ,
ತೊಂತನನ ತಾನ ತಾನ

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂದದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ||

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ||

ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ||
.....................................................................................................


ರಾಗದಲೆಗೆ ಭಾವ ಬೆಸುಗೆ ಸೇರಬೇಕು ಗೀತೆಗೆ SONG LYRICS | RAGADALEGE BHAVA BESUGE SONG LYRICS


ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:ಷಡಕ್ಷರಿ ಸುಗ್ಗನಹಳ್ಳಿ 

ರಾಗದಲೆಗೆ ಭಾವ ಬೆಸುಗೆ ಸೇರಬೇಕು ಗೀತೆಗೆ

ನಾಭಿಯಿಂದ ಹೊಮ್ಮಿ ಸ್ವರವು ಹಾಯ ಬೇಕು ಕೊರಳಿಗೆ…||

 

 ಸಪ್ತಸಾಗರದಾಳದಲ್ಲಿದೆ ನಾದ ಬಿಂದುವಿನಾಲಯ

 ಈಜಿ ತಲುಪುವರೆಷ್ಟು ಮಂದಿ ಪಡೆಯಲದರ ಸಿದ್ಧಿಯ ||1||

 

 ಶೃಂಗ ಗಿರಿಗಳ ತುತ್ತತುದಿಯಲಿ ಎಲ್ಲೋ ಒಂದೆಡೆ ಲಯವಿದೆ

 ತಲುಪಬಹುದು ಅಲ್ಲಿಗೊಮ್ಮೆ ನಿರತ ಇದ್ದರೆ ಸಾಧನೆ  ||2||

 

ದೇಹಿ ಎನ್ನುವ ಭಾವ ಬೇಕು ನಾದರಾಣಿಯ ಅಡಿಯೊಳು

ಎಂದೋ ಒಮ್ಮೆ ಕರುಣೆ ಬಂದು ಇನಿತೆ ಇನಿತು ಕೊಡುವಳು ||3||

.................................................................................

ಶತಶತಮಾನಗಳೆ ಉರುಳಲಿ

ಭಾಮಾ ರಮಣನ ದೀಪ ಮೆರೆಗೆ ದೀಪಲಕ್ಷ್ಮಿ SONG LYRICS | ಪು ತಿ ನರಸಿಂಹ ಆಚಾರ್ SONGS | BHAMA RAMANANA DEEPA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ :ಪು ತಿ ನರಸಿಂಹ ಆಚಾರ್

ಭಾಮಾ .......ರಮಣನ  ದೀಪ.... ಮೆರೆಗೆ.... ದೀಪ ಲಕ್ಷ್ಮಿ 


ಒಳ ಇರುಳ ತುಳಿತುಳಿದು ಒಳ ಇರುಳನು ತುಳಿತುಳಿದು 

ಬೇರೆ ಬಗೆಯ ತೆರೆದು, ಮೆರೆಯುತಿಹ ದೀಪ ಮೆರೆಗೆ ದೀಪಲಕ್ಷ್ಮಿ ||


ಹರಿಭವ ತರುವೊಳಗರಳಿಸುವರಳು 

ಇರವನು ರಸದೆಡೆ ಗೆಸೆಯುವ ಸರಳು 

ಮೃತ್ಯು ವೊಳಮೃತದ ಸೆಲೆಹಿನ ...ಕುರುಹೋ.... ಏನೆ

 ಮೆರೆಯುತಿಹ ದೀಪ, ಒಸಗೆ ....ದೀಪಲಕ್ಷ್ಮಿ ||


ಇಲ್ಲಮೆಯಿಂದಿರವಿಗೆನಡೆಸೆ ಎಂಬ

  ಪುಲ್ಲಮೆ ಇಲ್ನಲ್ಮೆ ಗೇರಿಸು ಎಂಬ

ಬಲ್ಲವರೆರಕೆಯ ಸಲಿಸುವ ದೀಪ ಲಕ್ಷ್ಮಿ||

..........................................................................................................................

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ SONG LYRICS | K S NARASIMHASWAMY | AKKI AARISUVAAGA SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕೆ.ಎಸ್. ನರಸಿಂಹಸ್ವಾಮಿ

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ
ಸಿಂಗಾರ ಕಾಣದಾ ಹೆರಳು
ಬಂಗಾರವಿಲ್ಲದಾ ಬೆರಳು ||

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು ||1||

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ

ಝಲ್ಲೆನ್ನುವಾ ಬಳೆಯ ಸದ್ದು
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣುಬಿದ್ದು 
ಬಂಗಾರವಿಲ್ಲದ ಬೆರಳು ||2||

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೇ ಇವಳು
ಚಿತ್ರದಲಿ ತಂದಂತೆ ಇಹಳು
ಬೇಸರಿಯ ಕಿರಿಮುತ್ತು ನುಚ್ಚಿನಲಿ ನುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದಾ ಬೆರಳು ||3||

……………………………………………………………………...............

ಯಾ ದೇವಿ ಸರ್ವ ಭೂತೇಷು 

ಮುಗಿಲ ಮಾರಿಗೆs ರಾಗರತಿಯ SONG LYRICS | MUGILA MAARIGE RAAGA RATIYA SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)

 ರಚನೆ: ದ. ರಾ. ಬೇಂದ್ರೆ

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
-ಆಗ- ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಗಾಳಿಗೆ ಮೇಲಕೆದ್ದಿತ್ತs||

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ|
ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ ||1||

ಬೊಗಸಿ ಕಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ |
ಕಾಮಿ ಬೆಕ್ಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ ||2||

ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತ್ತ ಮತ್ತ ಬೆಡಗಿಲೆ ಬಿಡತಿತ್ತ|
ಒಂದ ಮದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮ ಮರತಿತ್ತ||3||
....................................

ದೇವಿ ನಮ್ಮ ದ್ಯಾವರು ಬಂದರು

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು SONG LYRICS | K S NARASIMHA SWAMY SONGS |ONDIRULU KANASINALI |MYSURU MALLIGE MOVIE SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚಂದ ನಿನಗಾವುದೆಂದು |
ನಮ್ಮುರು ಹೊನ್ನೂರು ನಿಮ್ಮೂರು ನವಿಲೂರು
ಚಂದ ನಿನಗಾವುದೆಂದು ||

ನಮ್ಮೂರು ಚಂದವೊ ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ ||

ನಮ್ಮೂರು ಚೆಂದವೊ ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ ಎಂದಳಾಕೆ ||

ತವರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ |
ಮಲ್ಲಿಗೆಯ ಮೊಗ್ಗುಗಳು ಮುಳ್ಳ ಬೇಲಿಯ ಬರಿಸಿ
ಬಳಕುತಿವೆ ಕಂಪ ಸೂಸಿ ||

ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನುರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ ||

ನಮ್ಮೂರು ಚೆಂದವೊ ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ ಎಂದಳಾಕೆ ||

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ

ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
 ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ ||

ನಮ್ಮೂರು ಚೆಂದವೊ ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ ಎಂದಳಾಕೆ ||

……………………………………………………………………………..................

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ


ಏನೀ ಮಹಾನಂದವೇ ಓ ಭಾಮಿನೀ SONG LYRICS| D V G SONGS LYRICS| ENI MAHANANDAVE SONGS

 

ರಚನೆ: ಡಿ ವಿ ಗುಂಡಪ್ಪ (ಅಂತ:ಪುರ ಗೀತೆಗಳು)

ಏನೀ ಮಹಾನಂದವೇ ಓ ಭಾಮಿನೀ

ಏನೀ ಸಂಭ್ರಮದಂದವೇ ಬಲು ಚೆಂದವೇ।

ಏನೀವೃತಾಮೋದ ಎನೀ ಮುರಜನಾದ

ಏನೀ ಜೀವೋನ್ಮಾದ ಏನೀ ವಿನೋದ॥

 

ಢಕ್ಕೆಯ ಶಿರ ಕೆತ್ತಿ ತಾಳಗೋಲಿಂ ತಟ್ಟಿ

ತಕ್ಕಿಟ ಧಿಮಿಕಿಟ ತಕಝೆಣುರೆನ್ನಿಸಿ।

ಕುಕ್ಕುತೆ ಚರಣವ ಕುಲುಕುತೆ ಕಾಯವ

ಸೊಕ್ಕಿದ ಕುಣಿತವ ಕುಣಿವೆ ನೀನೆಲೆ ಬಾಲೆ॥1||

 

ಆರು ನಿನ್ನಯ ಹೃದಗಾರದೆ ನರ್ತಿಸಿ

ಮಾರ ಶೂರತೆಯ ಪ್ರಕಾಶಿಸುತಿರ್ಪನ್।

ಸ್ಮೇರ ವದನ ನಮ್ಮ ಚೆನ್ನಕೇಶವರಾಯ

ಓರೆಗಣ್ಣಿಂ ಸನ್ನೆ ತೋರುತಲಿಹನೇನೆ॥2||

..........................................................................................................


ಬಾನಲ್ಲಿ ಓಡೋ ಮೇಘಾ AMERICA AMERICA MOVIE SONG LYRICS| BAANALLI ODO MEGHA

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ: ಹೆಚ್ ಎಸ್ ವೆಂಕಟೇಶಮೂರ್ತಿ

ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ 
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ ||


ಮುಗಿಲೊಂದು ಮನಸಿನ ಬಿಂಬಾ
ಮುತ್ತಿನಾ ಮಣಿಗಳೆ ತುಂಬಾ
ಎಲ್ಲೋ ದೂರದ ಚುಕ್ಕಿ
ಅದರತ್ತ ಗಿರಿಮುಗಿಲಾ ಹಕ್ಕಿ ||1||


ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲು ||2||


ಬಾನಲ್ಲೇ ಓಡಿದರೂ ಮೇಘಾ
ಮಳೆಗೂ ಮಣ್ಣಲೇ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದ ನಡುವೇ ಮಾತು ||3||

..........................................



ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...