Showing posts with label STOTRAS (ಸ್ತೋತ್ರಗಳು). Show all posts
Showing posts with label STOTRAS (ಸ್ತೋತ್ರಗಳು). Show all posts

ಜಗಜ್ಜಾಲಪಾಲಂ ಶ್ರೀ ಹರಿ ಸ್ತೋತ್ರಂ LYRICS IN KANNADA |jagajjala palam shri hari stotra lyrics

ಹಾಡಲು ಕಲಿಯಿರಿ(CLICK HERE TO LEARN THIS SONG) 

ಶ್ರೀ ಹರಿ ಸ್ತೋತ್ರಂ (ಜಗಜ್ಜಾಲಪಾಲಂ)

ಜಗಜ್ಜಾಲಪಾಲಂ ಕನತ್ಕಂಠಮಾಲಂ
ಶರಚ್ಚಂದ್ರಫಾಲಂ ಮಹಾದೈತ್ಯಕಾಲಮ್
ನಭೋನೀಲಕಾಯಂ ದುರಾವಾರಮಾಯಂ
ಸುಪದ್ಮಾಸಹಾಯಂ ಭಜೇಽಹಂ ಭಜೇಽಹಮ್ 1

ಸದಾಂಭೋಧಿವಾಸಂ ಗಲತ್ಪುಷ್ಪಹಾಸಂ
ಜಗತ್ಸನ್ನಿವಾಸಂ ಶತಾದಿತ್ಯಭಾಸಮ್
ಗದಾಚಕ್ರಶಸ್ತ್ರಂ ಲಸತ್ಪೀತವಸ್ತ್ರಂ
ಹಸಚ್ಚಾರುವಕ್ತ್ರಂ ಭಜೇಽಹಂ ಭಜೇಽಹಮ್ 2

ರಮಾಕಂಠಹಾರಂ ಶ್ರುತಿವ್ರಾತಸಾರಂ
ಜಲಾಂತರ್ವಿಹಾರಂ ಧರಾಭಾರಹಾರಮ್
ಚಿದಾನಂದರೂಪಂ ಮನೋಜ್ಞಸ್ವರೂಪಂ
ಧೃತಾನೇಕರೂಪಂ ಭಜೇಽಹಂ ಭಜೇಽಹಮ್ 3

ಜರಾಜನ್ಮಹೀನಂ ಪರಾನಂದಪೀನಂ
ಸಮಾಧಾನಲೀನಂ ಸದೈವಾನವೀನಮ್
ಜಗಜ್ಜನ್ಮಹೇತುಂ ಸುರಾನೀಕಕೇತುಂ
ತ್ರಿಲೋಕೈಕಸೇತುಂ ಭಜೇಽಹಂ ಭಜೇಽಹಮ್ 4

ಕೃತಾಮ್ನಾಯಗಾನಂ ಖಗಾಧೀಶಯಾನಂ
ವಿಮುಕ್ತೇರ್ನಿದಾನಂ ಹರಾರಾತಿಮಾನಮ್
ಸ್ವಭಕ್ತಾನುಕೂಲಂ ಜಗದ್ವೃಕ್ಷಮೂಲಂ
ನಿರಸ್ತಾರ್ತಶೂಲಂ ಭಜೇಽಹಂ ಭಜೇಽಹಮ್ 5

ಸಮಸ್ತಾಮರೇಶಂ ದ್ವಿರೇಫಾಭಕೇಶಂ
ಜಗದ್ಬಿಂಬಲೇಶಂ ಹೃದಾಕಾಶವೇಶಮ್
ಸದಾ ದಿವ್ಯದೇಹಂ ವಿಮುಕ್ತಾಖಿಲೇಹಂ
ಸುವೈಕುಂಠಗೇಹಂ ಭಜೇಽಹಂ ಭಜೇಽಹಮ್ 6

ಸುರಾಲೀಬಲಿಷ್ಠಂ ತ್ರಿಲೋಕೀವರಿಷ್ಠಂ
ಗುರೂಣಾಂ ಗರಿಷ್ಠಂ ಸ್ವರೂಪೈಕನಿಷ್ಠಮ್
ಸದಾ ಯುದ್ಧಧೀರಂ ಮಹಾವೀರವೀರಂ
ಭವಾಂಭೋಧಿತೀರಂ ಭಜೇಽಹಂ ಭಜೇಽಹಮ್ 7

ರಮಾವಾಮಭಾಗಂ ತಲಾಲಗ್ನನಾಗಂ
ಕೃತಾಧೀನಯಾಗಂ ಗತಾರಾಗರಾಗಮ್
ಮುನೀಂದ್ರೈಸ್ಸುಗೀತಂ ಸುರೈಸ್ಸಂಪರೀತಂ
ಗುಣೌಘೈರತೀತಂ ಭಜೇಽಹಂ ಭಜೇಽಹಮ್ 8

ಫಲಶ್ರುತಿ
ಇದಂ ಯಸ್ತು ನಿತ್ಯಂ ಸಮಾಧಾಯ ಚಿತ್ತಂ
ಪಠೇದಷ್ಟಕಂ ಕಂಠಹಾರಂ ಮುರಾರೇಃ
ವಿಷ್ಣೋರ್ವಿಶೋಕಂ ಧ್ರುವಂ ಯಾತಿ ಲೋಕಂ
ಜರಾಜನ್ಮಶೋಕಂ ಪುನರ್ವಿಂದತೇ ನೋ 9

ಇತಿ ಶ್ರೀ ಪರಮಹಂಸಸ್ವಾಮಿ ಬ್ರಹ್ಮಾನಂದವಿರಚಿತಂ ಶ್ರೀಹರಿಸ್ತೋತ್ರಮ್

-------------------------------------------------------------------------------------------

ಶಿವ ಅಪರಾಧಕ್ಷಮಾಪಣಾ ಸ್ತೋತ್ರ ಕನ್ನಡ ಅನುವಾದ | ರಚನೆ:ಮಧು ಕೋಡನಾಡು | SHIVA APARADHA KSHAMAPANA STOTRA KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ:ಮಧು ಕೋಡನಾಡು

ಪೂರ್ವ ಕರ್ಮದ ಫಲವ ಹೊತ್ತು, ಅಮ್ಮನುದರದಿ ಜನಿಸಿದೆ

ಅಲ್ಲಿ ಕಲ್ಮಶದಲ್ಲಿ ಹೊರಳುತ, ಜಠರಾಗ್ನಿಲಿ ದಹಿಸಿದೆ

ಕಷ್ಟದಲಿ ನಾ ಬಿದ್ದು ಎದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧ ||


ಬಾಲ್ಯದಲಿ ನಾ ದುಃಖದಿಂದಲಿ, ಸ್ತನ್ಯಪಾನಕೆ ತಪಿಸಿದೆ 

ದೇಹದಲಿ ನಾ ತ್ರಾಣವಿಲ್ಲದೇ, ಜಂತುಬಾಧೆಯ ಸಹಿಸಿದೆ

ರೋಗ ರುಜಿನದಿ ನರಳುತಿದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೨ ||


ಪ್ರೌಢನಾದೊಡೆ ಪಂಚ ಮೋಹದಿ, ವಿಷಯ ಲಂಪಟ ಎನಿಸಿದೆ

ಹೆಣ್ಣು, ಹೊನ್ನು, ಪುತ್ರ ಮೋಹವು, ಎನ್ನ ಬುದ್ಧಿಯ ಭ್ರಮಿಸಿದೆ

ಸ್ವಾರ್ಥ ಲೋಭ ಗರ್ವದಿಂದಲಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೩ ||


ಮುಪ್ಪು ಅಡರಲು ಮನದ ಒಳಗೆ, ಮತ್ತೆ ಮತಿ ಗತಿ ತಪ್ಪಿದೆ

ರೋಗ ರುಜಿನ ವಿಯೋಗದಿಂದ, ದೇಹ ತಪಿಸುತ ಬತ್ತಿದೆ 

ಸುಳ್ಳು ಮೋಹದ ಭ್ರಮೆಗೆ ಸಿಲುಕಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೪ ||


ಜೀವನದ ಪ್ರತಿ ಹೆಜ್ಜೆಯಲ್ಲೂ, ಅಡ್ಡಿ ಎದುರಿಸಿ ನಿಂತೆನು

ದ್ವಿಜನೇ ಆದರೂ ಬ್ರಹ್ಮ ಕರ್ಮವ, ಮಾಡಲಾರದೆ ಹೋದೆನು

ಶ್ರವಣ ಮನನವ ಮಾಡದೇ ನಾ, ಮಾಡಲೆಂತೋಪಾಸನೇ ? 

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೫ ||


ಉಷೆಯಲೆದ್ದು ನಿನ್ನ ಪೂಜೆಗೆ, ಗಂಗೆ ತಾರದೇ ಹೋದೆನು 

ನಿನ್ನ ಅರ್ಚನೆಗೊಂದು ಬಿಲ್ವದ, ದಳವ ತಂದುದ ಕಾಣೆನು

ಪುಷ್ಪ ಮಾಲಿಕೆ, ಗಂಧಲೇಪನ, ಕೆರೆಯ ಕಮಲವ ತಾರದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೬ ||


ಹಾಲು, ಮೊಸರು, ಜೇನು, ತುಪ್ಪ, ಶರ್ಕರಂಗಳ ತಾರದೇ

ಚಂದನಾದಿ ಸುಗಂಧ ದ್ರವ್ಯದಿ, ನಿನಗೆ ಲೇಪನ ಗೈಯದೇ

ಧೂಪ ದೀಪದ ಜೊತೆಗೆ ಮರೆತೆ, ಹಣ್ಣು ಭಕ್ಷ ನಿವೇದನೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೭ ||


ಮನದಿ ಶಿವನನು ನೆನೆದು ದ್ವಿಜರಿಗೆ, ದಾನ ಧರ್ಮವಗೈಯದೇ

ಬೀಜಮಂತ್ರದ ಸಹಿತ ಅಗ್ನಿಗೆ, ಲಕ್ಷ ಹೋಮವ ಮಾಡದೇ

ಗಂಗೆ ತಟದಲಿ ನಿನ್ನ ಜಪಿಸಿ, ವ್ರತವಗೈಯದೇ ಹೋದೆನು

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೮ ||


ನಾಸಿಕಾಗ್ರದಿ ದೃಷ್ಟಿಯುಳ್ಳವ, ತ್ರಿಗುಣ ರಹಿತನೇ ಏಕನೇ,

ಸರ್ವಶುದ್ಧನೇ ನಿನ್ನ ದರುಶನ, ನಾನು ಮಾಡದೇ ಹೋದೆನು

ಏಕಚಿತ್ತದಿ ನಿನ್ನ ಸ್ಮರಣೆಯ, ಮಾಡದಾದೆನು ಶಂಕರ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ನಿರಂತರ || ೯ ||


ಪದ್ಮಾಸನದಲಿ ಕುಳಿತು ಪ್ರಣವ, ಮಂತ್ರೋಚ್ಚಾರಣೆ ಗೈಯದೇ

ಅಂತರಂಗದ ಒಳಗೆ ನಿನ್ನನು, ಲಿಂಗರೂಪದಿ ನಿಲಿಸದೇ

ಜ್ಯೋತಿರೂಪನೆ ಬ್ರಹ್ಮರೂಪನೇ, ನಿನ್ನ ಧ್ಯಾನವ ಗೈಯದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೦ ||


ಹೃತ್ಪ್ರಕಾಶನೇ ಹೃದಯವಾಸನೇ, ಸಕಲ ವೇದದಿ ವೇದ್ಯನೇ

ಮುನಿಗಳರಿವಿಗೆ ಮಾತ್ರ ತಿಳಿಯುವ, ಸತ್ಯ ಶಾಂತ ಸ್ವರೂಪನೇ

ನಿದಿರೆ ಎಚ್ಚರ ಸ್ವಪ್ನದಲ್ಲೂ  ತ್ರಿಗುಣ ರಹಿತನ ಸ್ಮರಿಸದಾ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೧ ||


ಮನ್ಮಥನ ಸಂಹರಿಸಿದವನೇ, ನಿಟಿಲ ನೇತ್ರದ ರುದ್ರನೇ

ಶಿರದಿ ಗಂಗೆ ಚಂದ್ರ ಧರಿಸಿದ, ಸರ್ಪಭೂಷಿತ ದೇವನೇ

ಗಜದ ಚರ್ಮವ ಧರಿಸಿ ನಿಂದಿಹ, ಮೂರು ಲೋಕದ ಒಡೆಯನೆ

ಮೋಕ್ಷ ಮಾರ್ಗಕೆ ನನ್ನ ಮನವನು, ನಿನ್ನಲಿರಿಸು ಶಂಭುವೇ || ೧೨ ||


ವಸ್ತು ವಾಹನ ರಾಜ್ಯ ಮೋಹ, ಧನ ಕನಕಗಳ ಮೋಹದಿ

ಬಂಧು ಬಾಂಧವ ಪಶುಗಳಿಂದ, ಎನಿತು ಲಾಭವು ಆತ್ಮಕೆ?

ನೀರ ಮೇಲಿನ ಗುಳ್ಳೆಯಂತಹ, ಕ್ಷಣಿಕ ಆಸೆಯ ಬಿಡಿಸುತ

ಗುರುವ ನೆನೆದು ಪಾರ್ವತಿ ಪತಿ, ನಿನ್ನ ಭಜನೆಯ ಮಾಡಿಸು || ೧೩ ||


ದಿನವು ಕಳೆದೊಡೆ ಆಯು ಯವ್ವನ, ಕೊಂಚ ಕೊಂಚವೇ ಕಳೆವುದು

ಕಳೆದು ಕಣ್ಮರೆಯಾದ ಜೀವನ, ಮತ್ತೆ ಹಿಂದಕೆ ಬಾರದು

ಧನವು ಅಲೆಗಳ ಏರು ಇಳಿತದ, ಹಾಗೆ ಎಂದಿಗೂ ನಶ್ವರ

ಮಿಂಚಿನಂತೆ ಕ್ಷಣಿಕ ಜೀವನ, ರಕ್ಷಿಸೆನ್ನನು ಈಶ್ವರ || ೧೪ ||


ವಿಶ್ವಕಾರಣ ಸ್ವಪ್ರಕಾಶನೇ, ಪಾರ್ವತೀ ಪತಿ ವಂದನೆ

ಸರ್ಪಭೂಷಣ ಜಗದ ಸಕಲ, ಜೀವದೊಡಯನೇ ವಂದನೆ 

ಸೂರ್ಯ ಚಂದ್ರ ಅಗ್ನಿ ನೇತ್ರನೇ, ವಿಷ್ಣು ಪ್ರಿಯನೇ ವಂದನೆ

ಭಕ್ತ ಪೋಷಣೆಗೈವ ಶಿವನೇ, ಶಂಕರನೇ ನಿನಗೊಂದನೆ  || ೧೫ ||


ಶ್ವೇತ ದಂತನೆ, ಮಂದಸ್ಮಿತನೇ, ಶ್ವೇತ ಭಸ್ಮದ ಲೇಪನೇ

ಶ್ವೇತವರ್ಣದ ಕರ ಕಪಾಲ, ಶೂಲ ಕುಂಡಲ ಧಾರನೇ

ಶಿರದ ಚಂದಿರ, ಕುಳಿತ ನಂದಿ, ಜಟೆಯ ಗಂಗಾ ಜಲದಲಿ

ಶ್ವೇತವರ್ಣದಿ ಶೋಭೆಗೈವನೇ, ಕ್ಷಮೆಯ ಮಳೆಯನೇ ಸುರಿಸು ನೀ  || ೧೬ ||


ಪೌರೋಹಿತ್ಯ, ರಜನಿ ಚರಿತ, ಮಠದ ಅಧಿಪತಿ ಕಾರ್ಯವ,

ಗ್ರಾಮ ಪ್ರತಿನಿಧಿ, ಸುಳ್ಳು ಸಾಕ್ಷ, ದುರ್ಜನಂಗಳ ಸಂಘವ,

ಬ್ರಹ್ಮ ದ್ವೇಷ, ಭಿಕ್ಷಾ ವೃತ್ತಿ, ಪಶುಗಳಲ್ಲಿ ನಿರ್ದಯ,

ಇಂತ ದುಸ್ಥಿತಿ ಜನ್ಮ ಜನ್ಮಕೂ ನೀಡಬೇಡವೋ ಪಶುಪತೇ  || ೧೭ ||


ಕರದಿ ಚರಣದಿ, ಮಾತು, ಶ್ರವಣದಿ, ಮಾಡಿದೆನ್ನಪರಾಧವ

ತಿಳಿದೋ ತಿಳಿಯದೋ, ಗೈದ, ಗೈಯದ, ಎನ್ನ ಸಾವಿರ ಪಾಪವ

ಕರುಣಾ ಸಾಗರನಾದ ದೇವನೇ, ಕ್ಷಮಿಸು ಎಲ್ಲವನಿಂದು ನೀ

ಜಯತು ಜಯತು, ಜಯತು ದೇವನೆ ಜಯತು ಶಂಭೋ ಶಂಕರ || ೧೮ ||

ಓಂ ನಮ: ಶಿವಾಯ್ ಓಂ ನಮ: ಶಿವಾಯ್ OM NAMA SHIVAY SONG LYRICS IN KANNADA |LORD SHIVA STOTRA LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 


ಓಂ ನಮ: ಶಿವಾಯ್ ಓಂ ನಮ: ಶಿವಾಯ್ 

ಹರ ಹರ ಭೋಲೇ ನಮ: ಶಿವಾಯ್

ಓಂ ನಮ: ಶಿವಾಯ್ ಓಂ ನಮ: ಶಿವಾಯ್

 ಹರ ಹರ ಭೋಲೇ ನಮ: ಶಿವಾಯ್

 

ಮಹಾ ಕಾಲೇಶ್ವರಾಯ್ ಮಹಾ ಕಾಲೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್

ಮಹಾ ಕಾಲೇಶ್ವರಾಯ್ ಮಹಾ ಕಾಲೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್ ||1||

 

ಓಂ ಸೋಮೇಶ್ವರಾಯ್ ಶಿವ ಸೋಮೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್

ಓಂ ಸೋಮೇಶ್ವರಾಯ್ ಶಿವ ಸೋಮೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್ ||2||

 

ಜಟಾಧರಾಯ್ ಶಿವ ಜಟಾಧರಾಯ್

 ಹರ ಹರ ಭೋಲೇ ನಮ: ಶಿವಾಯ್

ಜಟಾಧರಾಯ್ ಶಿವ ಜಟಾಧರಾಯ್

 ಹರ ಹರ ಭೋಲೇ ನಮ: ಶಿವಾಯ್ ||3||

............................................................................................... 

 


ಮಂತ್ರವರಿಯೆ ನಾ ಯಂತ್ರವರಿಯೆ - ದೇವೀ ಅಪರಾಧ ಕ್ಷಮಾಪಣ ಸ್ತೋತ್ರ (ದ ರಾ ಬೇಂದ್ರೆ) LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ದೇವೀ ಅಪರಾಧ ಕ್ಷಮಾಪಣ ಸ್ತೋತ್ರ (ದ ರಾ ಬೇಂದ್ರೆ)

 

ಮಂತ್ರವರಿಯೆ ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।

ಆಹ್ವಾನವರಿಯೆ ನಾ ಧ್ಯಾನವರಿಯೆ ನಾನರಿಯೆ ಶ್ರುತಿಯ ಕಥೆಯಾ।।

ಮುದ್ರೆಗಿದ್ರೆಗಳ ಅರಿಯೆ ನಾನು ಕೂಸಾಗಿ ತೆರೆವೆ ಬಾಯಿ|

ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ||1||

 

ಗೊತ್ತಿಲ್ಲ ವಿಧಿಯು ಮೈಗಳ್ಳ ನಾನು ಕೈಯ್ಯಲ್ಲಿ ಕಾಸು ఇల్ల

ನಡೆಯಲಾರೆ ಒಳಗಾಗಿ ಚರಣ ಕೈಬಿಟ್ಟು ಜಾರಿತಲ್ಲ

ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ

ಹುಟ್ಟಬಹುದಲಾ ಕೆಟ್ಟಮಗುವು  ಇರಲಾಸ ಕೆಟ್ಟ ತಾಯಿ||2||

 

ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |

ವಿರಲತರಲ ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ|

 ಬಿಡಬೇಡ ಕೈಯ ಅದು ತಕ್ಕುದಲ್ಲ ಕೇಳವ್ವ ಶಿವನ ಜಾಯೆ।

ಕೆಟ್ಟ ಮಗುವು ಹೋ! ಹುಟ್ಟಬಹುದು ಇರಬಹುದೆ ಕೆಟ್ಟ ತಾಯಿ?||3||

 

ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ ।

ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ

ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ

ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ ಇವಳೆ ತಾಯೆ 4||

 

ಎಷ್ಟಂತ ಪೂಜೆ ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ

ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ|

 ಓ ತಾಯಿ ನಿನ್ನ ಕೃಪೆ ಸಾಕು ಉಳಿದವರು ಹಿಡಿಯಲೆನ್ನ ಬಿಡಲಿ

ಆಧಾರವಿರದೆ ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ||5||

 

ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ|

ಬಾಯಿಬಡಕ ನಾಯಡಗತಿಂಬ ಜನವಾಣಿ ಅಮೃತಧಾಮ|

 ರಂಕ ಕೂಡ ಆತಂಕವಿರದೆ ತಾ ಕೋಟಿ ಕನಕ ಪಡೆವ

 ಜನನಿ ನಿನ್ನ ಜಪ ಮಹಿಮೆಯರಿಯದವ ಹೌದು ತೀರ ಬಡವll6||

 

ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ

ಜಡೆಯ ಕಟ್ಟಿ ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ

ತಲೆಯ ಬುರುಡೆ ಕೈಯಲ್ಲಿ  ಭೂತಗಣ ಸುತ್ತಿಕೊಂಡೆ ಇರುವ

ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ||7||

 

ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ

ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ|

 ಅಂತೆ ನಿನ್ನ ಬೇಡುವೆನು ನಾನು ಆಮರಣ ತಪಿಸುತಿರಲಿ

 ಓ ಭವಾನಿ ರುದ್ರಾಣಿ ಶಿವೆಶಿವೇ ಎಂದು ಜಪಿಸುತಿರಲಿ||8||

 

ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ|

ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ|

ಓ ಶ್ಯಾಮೆ  ನೀನೆ ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ

 ಅದು ನಿನಗೆ ಸಹಜ ಇದು ನನಗೆ ಸಹಜ ಕರುಣೆಯನೆ ಬೇಡುತಿರುವೆ||9||

 

ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ

ಹೇ ದುರ್ಗೆ ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ

ಇದು ಢೋಂಗು ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ।

ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ?10||

 

ಜಗದಂಬೆ ಬೇರೆ ವೈಚಿತ್ರ್ಯ ಬೇಕೆ ಕರುಣೆಯಲಿ ಮಾಡು ಎಲ್ಲ

ಅಪರಾಧವೆಷ್ಟೆ ಮಾಡಿದರು ಮಗುವು  ತಾಯೇನೂ ಬಿಡುವದಿಲ್ಲ

ಪಾಪಘ್ನಿ ನಿನ್ನ ಸಮರಿಲ್ಲ ಪಾಪದಲಿ ನನಗೆ ಇಲ್ಲ ಜೋಡು |

ಮಹದೇವಿ ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು ||11||

 ...................................................................................................................


ಗರುಡ ಗಮನ ತವ GARUDA GAMANA TAVA |POPULAR SONG ON LORD VISHNU lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)

ಗರುಡ ಗಮನ ತವ ಚರಣಕಮಲಮಿಹ

ಮನಸಿ ಲಸತು ಮಮ ನಿತ್ಯಂ |

ಗರುಡ ಗಮನ ತವ ಚರಣಕಮಲಮಿಹ

ಮನಸಿ ಲಸತು ಮಮ ನಿತ್ಯಂ |

ಮನಸಿ ಲಸತು ಮಮ ನಿತ್ಯಂ |

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಜಲಜನಯನ ವಿಧಿನಮುಚಿಹರಣಮುಖ

ವಿಬುಧ ವಿನುತ ಪದಪದ್ಮ |

ಜಲಜನಯನ ವಿಧಿನಮುಚಿಹರಣಮುಖ

ವಿಬುಧ ವಿನುತ ಪದಪದ್ಮ |

ವಿಬುಧ ವಿನುತ ಪದಪದ್ಮ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಭುಜಗಶಯನ ಭವ ಮದನಜನಕ ಮಮ

ಜನನಮರಣಭಯಹಾರಿ |

ಭುಜಗಶಯನ ಭವ ಮದನಜನಕ ಮಮ

ಜನನಮರಣಭಯಹಾರಿ |

ಜನನಮರಣಭಯಹಾರಿ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಶಂಖಚಕ್ರಧರ ದುಷ್ಟದೈತ್ಯಹರ

ಸರ್ವಲೋಕಶರಣ |

ಶಂಖಚಕ್ರಧರ ದುಷ್ಟದೈತ್ಯಹರ

ಸರ್ವಲೋಕಶರಣ |

ಸರ್ವಲೋಕಶರಣ |


ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಅಗಣಿತಗುಣಗಣ ಅಶರಣಶರಣದ

ವಿದಳಿತಸುರರಿಪುಜಾಲ |

ಅಗಣಿತಗುಣಗಣ ಅಶರಣಶರಣದ

ವಿದಳಿತಸುರರಿಪುಜಾಲ |

ವಿದಳಿತಸುರರಿಪುಜಾಲ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಭಕ್ತವರ್ಯಮಿಹ ಭೂರಿಕರುಣಯಾ

ಪಾಹಿ ಭಾರತೀತೀರ್ಥಂ |

ಭಕ್ತವರ್ಯಮಿಹ ಭೂರಿಕರುಣಯಾ

ಪಾಹಿ ಭಾರತೀತೀರ್ಥಂ |

ಪಾಹಿ ಭಾರತೀತೀರ್ಥಂ |

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

..........................................................................................................................

 


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...