Showing posts with label EASY SHLOKAS(ಸರಳ ಶ್ಲೋಕಗಳು). Show all posts
Showing posts with label EASY SHLOKAS(ಸರಳ ಶ್ಲೋಕಗಳು). Show all posts

DIFFERENT TYPES OF NAMASKARAS | ಪಂಚಾಂಗಕ & ಸಾಷ್ಟಾಂಗ ನಮಸ್ಕಾರ ಶ್ಲೋಕ | PANCHANGAKA NAMASKARA , SASHTANGA NAMASKARA

 

CLICK HERE TO LEARN THIS SHLOKA WITH MEANING

ಸ್ತ್ರೀಯರ ಪಂಚಾಂಗಕ ನಮಸ್ಕಾರ

ಬಾಹುಭ್ಯಾಂ ಅಥ ಜಾನುಭ್ಯಾಮ್ ಶಿರಸಾ ಮನಸಾ ಧಿಯಾ ।

ಪಂಚಾಂಗಕ: ಪ್ರಣಾಮ: ಸ್ಯಾತ್ ಸ್ತ್ರೀಣಾಂ ನಮನಲಕ್ಷಣಮ್ ॥

ಎರಡೂ ಕೈಗಳಿಂದ, ಎರಡೂ ಮಂಡಿಗಳಿಂದ,ತಲೆ, ಮನಸ್ಸು ಮತ್ತು ಬುದ್ಧಿ , ಹೀಗೆ ಸ್ತ್ರೀಯರು ಪಂಚ ಅಂಗಗಳಿಂದ ಕೂಡಿಕೊಂಡು ನಮಸ್ಕಾರವನ್ನು ಮಾಡಬೇಕು.

 


ಸಾಷ್ಟಾಂಗ ನಮಸ್ಕಾರ

 

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ

ಪದ್ಭ್ಯಾಂ ಕರಾಭ್ಯಾಂ ಕರ್ಣಾಭ್ಯಾಂ ಪ್ರಣಾಮ ಅಷ್ಟಾಂಗ ಉಚ್ಯತೇ॥

ಹೊಟ್ಟೆಯನ್ನು ನೆಲಕ್ಕೆ ತಾಗಿಸಿ, ತಲೆಯನ್ನೂ ನೆಲಕ್ಕೆ ತಾಗುವಂತೆ ಮಾಡಿ,ಎರಡೂ ಕಣ್ಣುಗಳನ್ನು ಮುಚ್ಚಿ,ಕಾಲುಗಳನ್ನು ಉದ್ದಕ್ಕೆ ನೀಡುತ್ತ, ಎರಡೂ ಕೈಗಳನ್ನು ಜೋಡಿಸಿಕೊಂಡು ಎರಡೂ ಕಿವಿಗಳನ್ನು ನೆಲಕ್ಕೆ ತಾಗಿಸಿ , ಮನಸ್ಸಿನಲ್ಲಿ ಭಕ್ತಿ ಭಾವನೆಯನ್ನು ತುಂಬಿಕೊಂಡು , ಬಾಯಿಯಿಂದ ಸ್ತುತಿಸುತ್ತಾ ನಮಸ್ಕರಿಸಬೇಕು.



.......................................................................................................................................................

ಶ್ಲೋಕ- ಪದಚ್ಛೇದ-ಅರ್ಥ सरस्वति नमस्तुभ्यम् ಸರಸ್ವತಿ ನಮಸ್ತುಭ್ಯಮ್ |sanskrit learning through kannada

 

सरस्वति नमस्तुभ्यम्

वरदे कामरूपिणि |

विद्यारंभं करिष्यामि

सिद्दिर्भवतु मे सदा ||

ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ

ಪದಚ್ಛೇದ

सरस्वति नम: तुभ्यम् वरदे, काम-रुपिणिविद्या-आरम्भं करिष्यामि सिद्दि: भवतु मे सदा |

ಅನ್ವಯ

सरस्वति, वरदे, काम-रुपिणि,तुभ्यम् नम: |  विद्या-आरम्भं करिष्यामि मे सदा सिद्दि: भवतु   |


सरस्वति = ಹೇ ಸರಸ್ವತಿ

वरदे = ವರಗಳನ್ನು ಕೊಡುವವಳೇ

काम-रुपिणि= ಇಷ್ಟಬಂದಂತಹ ರೂಪಗಳನ್ನು ಧರಿಸುವವಳೇ

तुभ्यम् = ನಿನಗೆ

 नम: =ನಮಸ್ಕಾರ

विद्या-आरम्भं =ವಿದ್ಯೆ ಕಲಿಯುವ ಆರಂಭ

करिष्यामि =ಮಾಡಲಿದ್ದೇನೆ

मे =ನನಗೆ

सदा =ಯಾವಾಗಲೂ

सिद्दि: = ಯಶಸ್ಸು

भवतु = ಸಿಗಲಿ/ಆಗಲಿ

ಹೇ ಸರಸ್ವತಿ, ಬೇಡಿದ ವರಗಳನ್ನು ಕೊಡುವವಳೇ,  ಇಷ್ಟಬಂದ ರೂಪಗಳನ್ನು ಧರಿಸುವವಳೇ, ನಿನಗೆ ನಮಸ್ಕಾರ.

 ವಿದ್ಯೆಯನ್ನು ಕಲಿಯಲು ಪ್ರಾರಂಭಿಸುತ್ತಿರುವ ನನಗೆ  ಯಾವಾಗಲೂ ಯಶಸ್ಸು ಸಿಗಲಿ ಎಂದು ಆಶೀರ್ವದಿಸು.

..........................................................................................................................................................


ಸರ್ಪಾಪಸರ್ಪ ಭದ್ರಂ ತೇ | ಸರ್ಪ ಭಯ ನಿವಾರಣೆಗೆ ಶ್ಲೋಕ with meaning in kannada - shloka

 CLICK HERE FOR EXPLANATION FOR THIS SHLOKA

सर्पापसर्प भद्रं ते गच्छ सर्प महाविष।

जनमेजययज्ञान्तॆ आस्तीकवचनं स्मर॥

ಸರ್ಪಾಪಸರ್ಪ ಭದ್ರಂ ತೇ ಗಚ್ಛ ಸರ್ಪ ಮಹಾವಿಷ।

ಜನಮೇಜಯ ಯಜ್ಞಾಂತೇ ಆಸ್ತೀಕ ವಚನಂ ಸ್ಮರ॥

ಮಹಾವಿಷವುಳ್ಳ ಮಹಾಸರ್ಪವೇ , ಅತ್ತ ಸರಿ. ಇಲ್ಲಿಂದ ಹೊರಟು ಹೋಗು. ನಿನಗೆ ಮಂಗಳವಾಗಲಿ. ಜನಮೇಜಯನು ಮಾಡಿದ ಸರ್ಪ ಯಾಗದ ಅಂತ್ಯದಲ್ಲಿ ಮಹಾಮಹಿಮನಾದ ಆಸ್ತೀಕನು ನಿನ್ನ ಪೂರ್ವಜರನ್ನು ಕುರಿತು ಏನು ಹೇಳಿದ್ದನೆಂಬುದನ್ನು ಸ್ಮರಿಸು.

                                                 -------ಮಹಾಭಾರತ-ಆದಿಪರ್ವದ ಆಸ್ತೀಕ ಪರ್ವವೆಂಬ ಉಪಪರ್ವ

ಆಸ್ತೀಕಸ್ಯ ವಚ:  ಶ್ರುತ್ವಾ ಯ:ಸರ್ಪೋ ನ ನಿವರ್ತತೇ।

ಶತಧಾ ಭಿದ್ಯತೇ ಮೂರ್ಧ್ನೀ ಶಿಂಶವೃಕ್ಷಫಲಂ ಯಥಾ॥

ಆಸ್ತೀಕನು ಹೇಳಿದ ಮಾತುಗಳನ್ನು ಜ್ಞಾಪಕಕ್ಕೆ ತಂದಮೇಲೂ ಯಾವ ಸರ್ಪವು ತನ್ನ ಪಾಡಿಗೆ ತಾನು ಹೊರಟು ಹೋಗುವುದಿಲ್ಲವೋ ಅಂತಹ ಸರ್ಪದ ತಲೆಯು ಶಿಂಶವೃಕ್ಷದ ಫಲದಂತೆ ನೂರಾರು ಹೋಳಾಗುತ್ತದೆ.

……………………………………………………………………………

ಜರತ್ಕಾರೋಜರತ್ಕಾರ್ವಾಂ ಸಮುತ್ಪನ್ನೋ ಮಹಾಶಯಾ:।

ಆಸ್ತೀಕ ಸತ್ಯಸಂಧೋ ಮಾಂ ಪನ್ನಗೆಭ್ಯೋSಭಿರಕ್ಷತು॥

ಜರತ್ಕಾರುವಿನಿಂದ ಜರತ್ಕಾರುವಿನಲ್ಲಿ ಸಮುತ್ಪನ್ನನಾದ ,ಮಹಾಶಯನಾದ ಸತ್ಯಸಂಧನಾದ ಆಸ್ತೀಕನು ಹಾವುಗಳಿಂದ ನನ್ನನ್ನು ಸಂರಕ್ಷಿಸಲಿ.

-ಸಂಧ್ಯಾವಂದನೆಯ ಉಪಸ್ಥಾನದಲ್ಲಿ ಹೇಳುವ ಮಂತ್ರ

…………………………………………………………………………


ವಿಶೇಷ ಶ್ಲೋಕಗಳು(special shlokas) |Lyrics in kannada and Sanskrit| Kannada savigana lyrics|


ಹಾಡಲು ಕಲಿಯಿರಿ(CLICK HERE TO LEARN THESE SHLOKAS)

1.  ಉತ್ತಮ ಪತಿ ಪ್ರಾಪ್ತಿಗೆ


हॆ गौरि ! शङ्करार्धाङ्गि ! यथा त्वं शङ्करप्रिये।

तथा मां कुरु कल्याणि, कान्तकान्तां सुदुर्लभम्॥

 

ಹೇ ಗೌರಿ , ಶಂಕರಾರ್ಧಾಂಗಿ, ಯಥಾ ತ್ವಂ ಶಂಕರಪ್ರಿಯೇ।

ತಥಾ ಮಾ೦ ಕುರು ಕಲ್ಯಾಣಿ, ಕಾಂತಕಾಂತಾಂ ಸುದುರ್ಲಭಮ್

ಅರ್ಥ : ಹೇ ಗೌರಿಶಂಕರ ಅರ್ಧಾಂಗಿ,ಮಂಗಳೇ, ನೀನು ಹೇಗೆ ಶಂಕರನಿಗೆ ಪ್ರಿಯಳೋ ಹಾಗೆಯೇ, ನನ್ನನ್ನೂ ಅಪರೂಪದ ವರನಿಗೆ ಇಷ್ಟಳಾದ ಪತ್ನಿಯನ್ನಾಗಿ ಮಾಡು

( ಅಪರೂಪದ, ನನಗಿಷ್ಟವಾದ ಪತಿಯನ್ನು ದಯಪಾಲಿಸು)

…………………………………………………………………………………

2.  ಉತ್ತಮ ಪತ್ನಿ ಪ್ರಾಪ್ತಿಗೆ


पत्नीं मनोरमां दॆहि ! मनोवृत्तानुसारिणीं।

तारिणीं दुर्गसंसार सागरस्य कुलोद्भवाम्॥

ಪತ್ನೀಂ ಮನೋರಮಾಂ ದೇಹಿ ಮನೊವೃತ್ತಾನುಸಾರಿಣೀಂ

ತಾರಿಣೀಂ ದುರ್ಗಸಂಸಾರ ಸಾಗರಸ್ಯ ಕುಲೋದ್ಭವಾಮ್

ಇದು ದುರ್ಗಾ ಸಪ್ತಶತಿಯಲ್ಲಿ ಬರುವ ಮಂತ್ರ.

ಹೇ ದುರ್ಗೆ, ನನಗೆ ಸುಂದರಿಯಾದ, ನನ್ನ ಮನದಿಚ್ಛೆಯನ್ನು ಅನುಸರಿಸುವ, ದುರ್ಗಮವಾದ ಸಂಸಾರ ಸಾಗರವನ್ನು ದಾಟಲು ನನಗೆ ಸಹಾಯ ಮಾಡುವ, ಉತ್ತಮ ಕುಲದಲ್ಲಿ ಜನಿಸಿದ ಪತ್ನಿಯನ್ನು  ಕೊಡು.

………………………………………………………………………………

3.  ಸೌಭಾಗ್ಯ ವರ್ಧನೆಗೆ


जीवयामास भर्तारं मृतं सत्या हि मृत्युहा।

मृत्युञ्जय: सुयॊगीन्द्र: सौभाग्यं मे प्रयच्छतु॥

ಜೀವಯಾಮಾಸ ಭರ್ತಾರಂ

ಮೃತಂ ಸತ್ಯಾ ಹಿ ಮೃತ್ಯು ಹಾ।

ಮೃತ್ಯುಂಜಯ: ಸುಯೋಗೀಂದ್ರ:

ಸೌಭಾಗ್ಯಂ ಮೇ ಪ್ರಯಚ್ಛತು

…………………………………………………………………….

4.  ಸುಖ ಪ್ರಸವಕ್ಕೆ


अस्ति गोदावरी तीरॆ जम्भला नाम राक्षसी।

तस्या: स्मरण मात्रेण विशल्या गर्भिणी भवेत्॥

ಅಸ್ತಿ ಗೋದಾವರೀ ತೀರೇ ಜಂಭಲಾ ನಾಮ ರಾಕ್ಷಸೀ।

ತಸ್ಯಾ: ಸ್ಮರಣ ಮಾತ್ರೇಣ ವಿಶಲ್ಯಾ ಗರ್ಭಿಣೀ ಭವೇತ್॥

हिमवत्युत्तरॆ पार्श्वे चपला नाम यक्षिणे।

तस्या: नूपुर शब्दॆन विशल्या गर्भिणी भवेत्॥

ಹಿಮವತ್ಯುತ್ತರೇ ಪಾರ್ಶ್ವೇ ಚಪಲಾ ನಾಮ ಯಕ್ಷಿಣೀ

ತಸ್ಯಾ: ನೂಪುರ ಶಬ್ದೇನ ವಿಶಲ್ಯಾ ಗರ್ಭಿಣೀ ಭವೇತ್

………………………………………………………………………….

5.  ಔಷಧ ಸೇವಿಸುವಾಗ


शरीरे जर्झरीभूते व्याधिग्रस्ते कलेवरे।

औषधं जाह्नवीतॊयं वैद्यो नारायणो हरि:

ಶರೀರೇ ಜರ್ಝರೀ ಭೂತೇ ವ್ಯಾಧಿಗ್ರಸ್ತೇ ಕಲೇವರೇ।

ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿ:

………………………………………………………………………………….

6. ಸುಖ ಪ್ರಯಾಣಕ್ಕೆ.


कुङ्कुमाङ्कित वर्णाभ कुन्दॆन्दु धवलाय च।

विष्णुवाह नमस्तुभ्यं पक्षि राजायते नम:

ಕುಂಕುಮಾಂಕಿತ ವರ್ಣಾಭ ಕುಂದೇಂದು ಧವಲಾಯ ಚ।

ವಿಷ್ಣು ವಾಹ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮ:

……………………………………………………………………………

7.ತೀರ್ಥ ಕುಡಿಯುವಾಗ


अकालमृत्युहरणं सर्व व्याधि निवारणम्।

समस्त पाप शमनं दॆव पादॊदकं शुभम्॥

ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಮ್।

ಸಮಸ್ತ ಪಾಪ ಶಮನಂ ದೇವ ಪಾದೋದಕಂ ಶುಭಮ್

…………………………………………………………………………

8. ಊಟ ಮಾಡುವ ಮುನ್ನ


ब्रह्मार्पणं ब्रह्महवि: ब्रह्माग्नौ भर्म्णाहुतम्।

ब्रह्मैव तॆन गन्तव्यं ब्रह्म कर्म समाधिना॥

ಬ್ರಹ್ಮಾರ್ಪಣಂ ಬ್ರಹ್ಮಹವಿ: ಬ್ರಹ್ಮಾಗ್ನೌ ಬ್ರಹ್ಮಣಾಹುತಂ।

ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಾ

…………………………………………………………..

9. ಅಪರಾಧ ಕ್ಷಮಾಪಣೆ


अपराध सहस्राणि क्रियन्तॆSहर्निशं मया।

दासोSयमिति मां मत्वा क्षमस्व परमेश्वर॥

ಅಪರಾಧ ಸಹಸ್ರಾಣಿ ಕ್ರಿಯಂತೇSಹರ್ನಿಶಂ ಮಯಾ।

ದಾಸೋSಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ

………………………………………………………………………

10. ಲೋಕ ಪ್ರಾರ್ಥನೆ


स्वस्ति प्रजाभ्यां परिपालयन्तां

न्यायेन मार्गॆण महीं महीषा:

गोब्राह्मणेभ्य: शुभमस्तु नित्यं

लोका: समस्ता: सुखिनो भवन्तु॥

ಸ್ವಸ್ತಿ ಪ್ರಜಾಭ್ಯಾ: ಪರಿಪಾಲಯಂತಾಂ

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾ:

ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ಯಂ

ಲೋಕಾ: ಸಮಸ್ತಾ: ಸುಖಿನೋ ಭವಂತು

.........................................................................................


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...