Showing posts with label LORD LAKSHMI(ಲಕ್ಷ್ಮಿಯ ಹಾಡುಗಳು). Show all posts
Showing posts with label LORD LAKSHMI(ಲಕ್ಷ್ಮಿಯ ಹಾಡುಗಳು). Show all posts

ದೇವೀ ಲಕ್ಷ್ಮೀ ಮಾಂ ಪಾಹಿ SONG LYRICS | LORD LAKSHMI SONG LYRICS | DEVI LAKSHMI MAAM PAHI |

CLICK HERE TO LEARN THIS SONG 

ದೇವೀ ಲಕ್ಷ್ಮೀ ಮಾಂ ಪಾಹಿ

ದೀನ ದಯಾಪರಿ ಮಾಂ ಪಾಹಿ।

ಕ್ಷೀರಾಭ್ದಿ ತನಯೆ ಮಾಂ ಪಾಹಿ 

ಸರ್ವಮಂಗಲೇ ಮಾಂ ಪಾಹಿ

ವಿಷ್ಣು ವಿಲೋಲೆ ಮಾಂ ಪಾಹಿ 

ಸರಸಿಜ ನಯನೇ ಮಾಂ  ಪಾಹಿ॥


Devi Lakshmi Maam pahi Deena dayapari Maam pahi Ksheerabdhi tanaye mam pahi Sarva Magale Maam pahi Vishnu vilole maam pahi sarasija nayane maam pahi

.......................................................................

ಯಾಕೆ ನಿರ್ದಯನಾದೆ ಎಲೊ ದೇವನೆ

ನಮಸ್ತೇ ವಿಮಲೆ ಕೋಮಲೆ SONG ON LORD LAKSHMI LYRICS IN KANNADA | LORD LAKSHMI SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ನಮಸ್ತೇ ವಿಮಲೆ ಕೋಮಲೆ ರಮಾದೇವಿ
ನಮಸ್ತೇ ನಮಸ್ತೇ||

ತರುಣಿ ಶಿರೋಮಣಿ ನಿನ್ನ ಶೀಲಸೌಂದರ್ಯವನು
ಧರೆಯೊಳಗೆ ವರ್ಣಿಸುವ ಕವಿಯದಾವ|
ಸ್ವರಮಣನೆಂದೆನಿಪ ರಮಣನುರದೊಳೆಂದೆಂದು
ಅರಮನೆಯ ಮಾಡಿ ಮೆರೆವ ಭಾಪುರೆ ದೇವಿ||

ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ
ನಿನ್ನ ತಾರುಣ್ಯ ಲಾವಣ್ಯಗಳನು|
ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ ಜಗ-
ನ್ಮಾನ್ಯೆ ಚೈತನ್ಯೆ ಬಹು ಗುಣಗಣಸದನೆ||

ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು
ಅನಂತ ಕರ ನೇತ್ರ ವಕ್ತ್ರಗಳನು|
ಪೂರ್ಣ ಹಯವದನ ಕೈಕೊಂಡ ನಿನ್ನಯ ಗಂಡ
ಸ್ವರ್ಣಸಮವರ್ಗೆ ಕರ್ಣಾಯತಾಕ್ಷಿ ದೇವಿ||

..............................................................................................


ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ SONG LYRICS IN KANNADA| ADILAKSHMI DEVIGE SONG LYRICS|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ

ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ

ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ llPll

 

ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ

ಭಾಗ್ಯದಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ

ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ

ಧನ ಧಾನ್ಯವ ಕೊಟ್ಟುs ಸಂತಾನ ಕರುಣಿಸಮ್ಮ ll1ll

 

ಕ್ಷೀರಾಬ್ದಿತನಯೇ ಆನಂದನಿಲಯೆ ವಿಷ್ಣುಪ್ರಿಯೆ ಬಾರೆ

ಕಮಲನಯನೆ ನಿಜ ಕಮಲವದನೆ ಕಮಲಾಕ್ಷ ವಲ್ಲಭೆ ಬಾರೆ

ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ

           ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ll2ll


....................................................................................

ಕಮಲದ ಮೊಗದೋಳೆ | Kamalada Mogadole Song Lyrics in Kannada

                                                                                              

ಕಮಲದ ಮೊಗದೋಳೆ ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲಾನಾಭನ ಹೃದಯ ಕಮಲದಲಿ ನಿಂತೋಳೆ

ಕಮಲಿನೀ ಕರಮುಗಿವೆ ಬಾಮ್ಮಾ

ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ ||


ಕಾವೇರಿ ನೀರ ಅಭಿಷೇಕಕಾಗಿ

ನಿನಗಾಗಿ ನಾ ತಂದೆನಮ್ಮ

ಕಂಪನ್ನು ಚೆಲ್ಲೊ ಸುಮರಾಶಿಯಿಂದ

ಹೂಮಾಲೆ ಕಟ್ಟಿರುವೆನಮ್ಮ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವಾ ತುಂಬುವಂತೆ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವ ತುಂಬುವಂತೆ 

ನಲಿಯುತ ಕುಣಿಯುತ ಒಲಿದು ಬಾ 

ನಮ್ಮ ಮನೆಗೆ ಬಾ || ೧ ||


ಶ್ರೀದೇವಿ ಬಾಮ್ಮ ಧನಲಕ್ಷ್ಮೀ ಬಾಮ್ಮ

ಮನೆಯನ್ನು ಬೆಳಕಾಗಿ ಮಾಡು

ದಯೆತೋರಿ ಬಂದು ಮನದಲ್ಲಿ ನಿಂತು

ಸಂತೋಷ ಸೌಭಾಗ್ಯ ನೀಡು

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಕರವನು ಮುಗಿಯುವೆ

ಆರತಿ ಈಗ ಬೆಳಗುವೆ || ೨ ||


 CLICK HERE TO LEARN THIS SONG 

...................................................................................

Also See:

BASAVANNA VACHANA(ಬಸವಣ್ಣನವರ ವಚನಗಳು)

ಅಂಜನಾ ನಂದನ ಆಂಜನೇಯ ನಮೋ ನಮೋ (ANJANA NANDANA AANJANEYA )SONG LYRICS IN KANNADA AND ENGLISH


ಶ್ರೀ ತುಳಸಿ ಶ್ಲೊಕಗಳು:SHLOKAS ON LORD TULASI (LYRICS, HOW TO SING) IN KANNADA

 

ಶ್ರೀ ತುಳಸಿ ಶ್ಲೊಕಗಳು

 

ನಮ: ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೇ

ನಮೋ ಮೋಕ್ಷ ಪ್ರದೇ ದೇವಿ ನಮ: ಸಂಪತ್ ಪ್ರದಾಯಿನಿ||

 

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ

ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ||

 

ತುಳಸಿ ಶ್ರೀಸಖೀ ಶುಭೇ ಪಾಪಹಾರಿಣಿ ಪುಣ್ಯದೇ

ನಮಸ್ತೇ ನಾರದಾ ನುತೇ ನಾರಾಯಣ ಮನಪ್ರಿಯೇ||

 

ಜಗಧಾತ್ರಿ ನಮಸ್ತುಭ್ಯಂ ವಿಷ್ಣೋಶ್ಚ ಪ್ರಿಯ ವಲ್ಲಬೇ

ಯತೋ ಬ್ರಹ್ಮಾದಯೋ ದೇವ: ಸೃಷ್ಟಿ ಸ್ಥಿತ್ಯಂತ ಕಾರಿಣ: ||

 

ಪುತ್ರ೦ ದೇಹಿ ಧನ೦ ದೇಹಿ ಸೌಭಾಗ್ಯ೦ ದೇಹಿ ಸೂರ್ವತೇ

ಅನ್ಯಾಶ್ಚ ಸರ್ವ ಕಾಮಾಶ್ಚ ವಹಿದೇ ವಿವರಪ್ರದೇ||

 

ತುಳಸಿ ಪಾತುಮಾಂ ನಿತ್ಯಂ ಸರ್ವಾಪದ್ಯೋಪಿ ಸರ್ವದಾ

ಕೀರ್ತಿತಾಪಿ ಸ್ಮೃತಾವಾಪಿ ಪವಿತ್ರಯತಿ ಮಾನವ೦||

.....................................................

ಹಾಡಲು ಕಲಿಯಿರಿ(LEARN HOW TO SING THIS SONG)

Also see:

lord-saraswati-shloka-lyrics-in-kannada(ಸರಸ್ವತಿ ದೇವಿಯ ಶ್ಲೋಕಗಳು)

bhagavadgita shlokas-with-meaning-in-kannada(ಭಗವದ್ಗೀತೆ ಶ್ಲೋಕಗಳು - 1)

subhashitas-with-kannada-meaning-2(ಸರಳ ಸುಭಾಷಿತಗಳು – 2)



ಭಾಗ್ಯದ ಲಕ್ಷ್ಮಿ ಬಾರಮ್ಮ (BHAGYADA LAKSHMI BAARAMMA)SONG LYRICS IN KANNADA


 

ಭಾಗ್ಯದ ಲಕ್ಷ್ಮಿ ಬಾರಮ್ಮ 

 

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ

ಸೌಭಾಗ್ಯದ ಲಕ್ಷ್ಮಿ ಬಾರಮ್ಮ||


 ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ

ಗೆಜ್ಜೆ ಕಾಲ್ಗಳ ನಾದವ ತೋರುತ

ಸಜ್ಜನ ಸಾಧು ಪೂಜೆಯ ವೇಳೆಗೆ

ಮಜ್ಜಿಗೆಯೊಳಗಿನ ಬೆಣ್ಣೆಯಂತೆ ||1||

 

ಕನಕ ವೃಷ್ಟಿಯ ಕರೆಯುತ ಬಾರೆ

ಮನಕಾಮನೆಯ ಸಿದ್ಧಿಯ ತೋರೆ

ದಿನಕರ ಕೋಟಿ ತೇಜದಿ ಹೊಳೆಯುವ

ಜನಕರಾಯನ ಕುಮಾರಿ ಬಾರೆ||2||

 

ಅತ್ತಿತ್ತಗಲದೆ ಭಕ್ತರ ಮನೆಯಲಿ

ನಿತ್ಯ ಮಹೋತ್ಸವ ನಿತ್ಯ ಸುಮಂಗಲ

ಸತ್ಯಕೆ ತೋರುವ ಸಾಧು ಸಜ್ಜನರ

ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ||3||

 

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು

ಕಂಕಣ ಕೈಯ ತಿರುವುತ ಬಾರೆ

ಕುಂಕುಮಾಂಕಿತೆ ಪಂಕಜಲೋಚನೆ

ವೆಂಕಟರಮಣನ ಬಿಂಕದ ರಾಣಿ||4||

 

ಸಕ್ಕರೆ ತುಪ್ಪದ ಕಾಲುವೆ ಹರಿಸಿ

ಶುಕ್ರವಾರದ ಪೂಜೆಯ ವೇಳೆಗೆ

ಅಕ್ಕರೆಯುಳ್ಳ ಅಳಗಿರಿ ರಂಗನ

ಚೊಕ್ಕ ಪುರಂದರ ವಿಠಲನ ರಾಣಿ||5||



ಕಣ್ಣುಗಳೆರಡು ಸಾಲದಮ್ಮ_ KANNUGALERADU SAALADAMMA LYRICS IN KANNADA


ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲು



ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲು
ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲು
ಯಾವ ಭಾವದಿ ಯಾವ ರಾಗದಿ ಪಾಡಿ ಹಾಡಲಿ ನಿನ್ನಯ ತಾಯಿ||

ಶರಣಾಗತ ವರದೇ ವರ ದೇವಿ ಕರುಣ ಸದಯೇ
ಸುರವರ ಪೂಜಿತೆಯೇ ಕರವೀರ ಪುರಾನಿಲಯೇ
ದುರಿತ ನಿವಾರಿಣಿ ಭವ ಭಯ ಹಾರಿಣಿ
ಮಂಗಳದಾಯಿನಿ ನಾರಾ...ಯಣಿ||1||

ಪನ್ನಗ ಫಣಿ ವೇಣಿ ಪದ್ಮಾಸಿನಿ ಹರಿ ರಾಣಿ
ಪದ್ಮ ಗದಾ ಪಾಣಿ ಪರಮ ಗುಣಾ ಸುಗುಣಿ
ಇಂದಿರ ನಯನೇ ಚಂದಿರ ವದನೇ
ಅನುಪಮ ಸುಂದರಿ ನಾರಾ...ಯಣಿ||2||

ಧನ ಕನಕವ ಕೊಡುವ ಧನ ಲಕ್ಷ್ಮಿಯು ನೀನಾಗಿ
ಧರೆಯಲಿ ನೆಲೆಸಿರುವೆ ದೀನರ ರಕ್ಷಿಸಲು
ಸಂಕಟ ಹರಿಸುವ ವೆಂಕಟ ರಮಣಿ
ಆರ್ದ ಪರಾಯಣಿ ನಾರಾ...ಯಣಿ||3||


Also See:


ಮಹಾಲಕ್ಷ್ಮಿಯಷ್ಟಕಮ್: Mahalakshmi ashtakam



ಮಹಾಲಕ್ಷ್ಮಿಯಷ್ಟಕಮ್

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೆ
 ಶಂಖ ಚಕ್ರ ಗದಾ ಹಸ್ತೆ ಮಹಾಲಕ್ಷ್ಮಿ ನಮೋಸ್ತುತೇ ||||

ನಮಸ್ತೆ ಗರುಡಾರೂಡೇ ಕೋಲಾಸುರ ಭಯಂಕರಿ
ಸರ್ವಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ||||

ಸರ್ವಜ್ಞೆ ಸರ್ವವರದೆ ಸರ್ವ ದುಷ್ಟ ಭಯಂಕರಿ
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ||||

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ
ಮಂತ್ರಮೂರ್ತೆ ಸದಾದೇವಿ ಮಹಾಲಕ್ಷ್ಮಿ ನಮೋಸ್ತುತೇ ||||

ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ
ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತುತೇ ||||

ಸ್ಥೂಲ ಸೂಕ್ಷ್ಮ ಮಹಾರೌದ್ರೆ ಮಹಾಶಕ್ತಿ ಮಹೋದರೆ
ಮಹಾಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || ೬||

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ
ಪರಮೇಶಿ ಜಗನ್ಮಾತೆ ಮಹಾಲಕ್ಷ್ಮಿ ನಮೋಸ್ತುತೇ || ೭||

ಶ್ವೇತಾಮ್ಬರಧರೆ ದೇವಿ ನಾನಾಲಂಕಾರ ಭೂಷಿತೆ
ಜಗಸ್ಥಿಥೆ ಜಗನ್ಮಾತೆ ಮಹಾಲಕ್ಷ್ಮಿ ನಮೋಸ್ತುತೇ || ೮||

.................................................................


Aravindalaye Thaaye: ಅರವಿಂದಾಲಯೇ ತಾಯೇ (Lord lakshmi)




ಅರವಿಂದಾಲಯೇ ತಾಯೇ

ಅರವಿಂದಾಲಯೇ ತಾಯೇ  ಅರವಿಂದಾಲಯೇ ತಾಯೇ 

ಸಿರಿ ರಮಣನ ಪ್ರಿಯೇ ಜಗನ್ಮಾತೆ ||


ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲೆ ಶೋಭಿತೇ

ಕಮನೀಯ ಪಾದೆ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು ||||


ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಗರ್ವದಿ ಮೆರೆಯದಿರೆ

ನಿರತ ನಿನ್ನಯ ಮುದ್ದು ಪುರಂದರವಿಠ್ಠಲನ ಚರಣಕಮಲವ ತೋರಿಸೆ||೨||


ಹಾಡಲು ಕಲಿಯಿರಿ(LEARN HOW TO SING THIS SONG)

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...