Showing posts with label FOLK SONGS(ಜಾನಪದ ಗೀತೆ). Show all posts
Showing posts with label FOLK SONGS(ಜಾನಪದ ಗೀತೆ). Show all posts

ತವರೂರ ಮನೆ ನೋಡ ಬಂದೆ KANNADA FOLK SONG LYRICS |TAVAROORA MANE NODA BANDE

 

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ|


ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿಹಿಂದೆ

ಮುತ್ತಿನಂತೆ ಜೋಪಾನವಾಗಿ ಬಾಳಿದೆ

ಅದು ಎತ್ತ ಹೋದರೂ ಕನಸಾಗಿದೆ ||

ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲ್ಲಿ
ಅದು ಮರೆಯದು ಈ ಬಾಳಿನಲ್ಲಿ ||

ಅತ್ತಿಗೆ ಕೈ ಗೊಂಬೆ ಅಣ್ಣ
ಎತ್ತಿ ಮುದ್ದಾಡಿದ ತಂಗಿ ಮರೆತ
ಅಣ್ಣ ಕಣ್ಣೆತ್ತಿ ಸಹ ನೋಡಬಾರದೇ
ತಂಗಿ ಬಾರಮ್ಮ ಇತ್ತ ಎನ್ನಬಾರದೆ|

ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣ ಮಾತನಾಡಿಸದವಳ ಸೇರಿದ
ತನ್ನ ಸಿರಿಯಲ್ಲೇ ತಾನೊಡಗೂಡಿದ||

ಶಿವನೆ ನಾ ಕೈ ಮುಗಿದು ಬೇಡುವೆ
ಸಿರಿ ಸಂಪತ್ತು ಕೊಡು ನಮ್ಮಣ್ಣಗೆ
ತಾಯಿ ಜಗದಂಬೆ ಕೈಮುಗಿದು ಬೇಡುವೆ
ಕಾಯಿ ಕರ್ಪುರದಾರತಿ ಬೆಳಗುವೆ

.............................................................................................................

ಆಲದ ನೆಳಲಾಗು ಅಶ್ವತ್ಥ ನೆಳಲಾಗು KANNADA FOLK SONG LYRICS |AALADA NELALAAGU ASHVATHA NELALAAGU

 

ಆಲದ ನೆಳಲಾಗು ಅಶ್ವತ್ಥ ನೆಳಲಾಗು

ಗೋಕರ್ಣದ ಗೋಳಿ ನೆಳಲಾಗು

ಕಂದಯ್ಯ ನೆಳಲಾಗು ನಮ್ಮ ಮನೆಗೆಲ್ಲ॥

 

ಆರೋಗ್ಯ ಹೆಚ್ಚಲಿ ಅಪಮೃತ್ಯು ತೊಲಗಲಿ

ಯಾರೂ ಕಂಡರೂ ಹರಸ..ಲಿ

ಕಂದಯ್ಯಗೆ ದೀರ್ಘಾಯುಸ್ಸೆಂಬ ಹರಕೇಯ॥

 

ಯಾರೂ ಇಲ್ಲದ ಕಷ್ಟ ದಾರಿಯ ಮನೆ ಕಷ್ಟ

ದಾರಿದ್ರ್ಯ ದು:ಖ ಬಹುಕಷ್ಟ।

ಕಂದಯ್ಯ ಇವು ಮೂರು ಬಾರಾದಿರಲಿ ನಿನ್ನ ಬಳಗಕ್ಕೆ॥

 

ಮಕ್ಕಳಿಗೆ ತಾಯಾಸೆ ಪಕ್ಷಿಗೆ ಗೂಡಾಸೆ

ಬಿತ್ತಿದ ಬೆಳೇಗೆ ಮಳೆಯಾಸೆ

ಕಂದಯ್ಯ ನಿನ್ನಾಸೆ ನಮ್ಮ ಬಳಗಕ್ಕೆ॥

 

ಪ್ರೀತಿಯ ಮಗನಾಗು ನೀತೀಲಿ ಗುರುವಾಗು

ಖ್ಯಾತೀಲಿ ಧರ್ಮಜನಾಗು।

ಕಂದಯ್ಯ ಜ್ಯೋತಿಯಾಗಿ ಮನೆಯ ಬೆಳಗಯ್ಯ॥

 

ಮುದ್ದು ನೀ ಅಳದೀರು ಎದಾಗ ಉಣಬಹುದು

ನಿದ್ದೆ ಬಂದಾಗ ಪವಡೀಸು|

ಕಂದಯ್ಯ ಶ್ರೀಕೃಷ್ಣ ದೇವರು ಬುದ್ದಿ ಕೊಟ್ಟಗ ನಡೆದಾಡು॥

 

ಆಯುಷ್ಯಳ್ಳ ಈ ಪಟ್ಟೇಯ ಯಾರುಕೊಟ್ರು ಕಂದಯ್ಯಗೆ

ದೇವೇಂದ್ರ ಕೊಟ್ಟ ಶಿವ ಕೊಟ್ಟಾ

ಈ ಪಟ್ಟೇಯ ಕಾರು ಕೇಳಿದರೂ ಕೊಡದೀರು॥

 

ಯಾರು ಇದ್ದರು ಮಗುವೆ ತಾಯಿ ಇದ್ದಾಗಲ್ಲ

ಹತ್ತಿದ ಕೊಲ್ಲಿ ಒಲೆಯೊಳಗೆ ಉರಿದರೆ

ದೀವಿಗೆ ಉರಿದಷ್ಟು ಬೆಳಕಲ್ಲ॥

 

ನೆಳಲಾಗು ಮಲ್ಲಿಗೆ ನೆಳಲಾಗು ಸಂಪಿಗೆ

ನೆಳಲಾಗು ಬಾಗಿಲಶ್ವತ್ಥ

ಕಂದಯ್ಯ ಕೇಳಿದರೆ ಮುತ್ತ ಕಟ್ಟಿಸುವೆ ಎಲೆಗೊಂದ॥

 

ತಾಯಿ ಇದ್ರೆ ತವರೂರು ನೀರಿದ್ರೆ ಕೆರೆ ಬಾವಿ

ಆನೆ ಕಟ್ಟಿದರೆ ಅರಮನೆ

ಕಂದಯ್ಯ ರಾಜ್ಯವಾಳಿದರೆ ದೊರೆತಾನ॥

 

………………………………………………………………...............................................

 


ಚನ್ನಪ್ಪ ಚನ್ನೆಗೌಡ (ಜಾನಪದ ಗೀತೆ) CHENNAPPA CHENNEGOWDA SONG LYRICS IN KANNADA |KANNADA SAVIGANA

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಚನ್ನಪ್ಪ ಚನ್ನೆಗೌಡ | ಕುಂಬಾರ ಮಾಡಿದ ಕೊಡನವ್ವ

ಚೆಂದಕೆ ತಂದೇನ ತಂಗಿ | ನೀರಿಗೆ ಬಂದೇನ || ||

 

ಬಾಳೀಯ ಬನದಾಗ  ನಾ  ಹೆಂಗ ಬಾಗಿ ಬರಲೆವ್ವ

ಬಾಳೀಯ ಗೊನೆ ಬಾಗಿ ನನ್ನ ಬೆನ್ನು ತಾಕಿತ್ತ||

ಆರು ಮೂರು ಒಂಭತ್ತು | ಒಂಭತ್ತು ಚಿತ್ರದ ಕೊಡನವ್ವ

ಚೆಂದಕ ತಂದೇನ ತಂಗಿ | ನೀರಿಗೆ ಬಂದೇನ ||1||

 

ನಿಂಬಿಯ ಬನದಾಗ ನಾ ಹೆಂಗ ನಂಬಿ ಬರಲೆವ್ವ

ಮುಳ್ಳು ತಾಕಿತ್ತ ತಂಗಿ ಸೆರಗು ಹರಿದಿತ್ತ ||

ಅಣ್ಣಿಗೆರೆ ಕೆರೆಯಾಗ ತೆರೆ ಹೊಡ್ದು ನೀರು ತರುವಾಗ

ಕಲ್ಲು ತಾಕಿತ್ತ ತಂಗಿ ಬಿಂದಿಗೆ ಒಡೆದಿತ್ತ||

ಅವ್ವಾ ಇವನ್ಯಾರ ಮಂಚದ ಮ್ಯಾಲ ಮಲಗ್ಯಾನ

ಗೊತ್ತಿಲ್ಲೇನವ್ವಾ ತಂಗಿ ಶಿಶುನಾಳ ಶರೀಫಜ್ಜ||2||

 

..............................................................................................................................................

ನಿಂಬಿಯ ಬನಾದ ಮ್ಯಾಗಳ SONG LYRICS IN KANNADA|KANNADA SAVIGANA LYRICS| NIMBIYA BANADA MYAGALA| FOLK SONG|

 ಹಾಡಲು ಕಲಿಯಿರಿ(CLICK HERE TO LEARN THIS SONG)

ನಿಂಬಿಯ ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ

ನಿಂಬಿಯ ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ

ನಿಂಬಿಯ ………||

ಎದ್ದೋನೆ ನಿಮಗ್ಯಾನ ಏಳುತಲೇ ನಿಮಗ್ಯಾನ
ಸಿದ್ಧರ ಗ್ಯಾನ ಶಿವುಗ್ಯಾನ ನಿಂಬಿಯ |
ಸಿದ್ದರ….ನೇ ಗ್ಯಾನ  ಶಿವುಗ್ಯಾನ ಮಾಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ, ನಿಂಬಿಯ….||1||

ಆರೇಲೆ ಮಾವಿನ ಬೇರಾಗೆ ಇರುವೋಳೆ
ವಾಲ್ಗದ ಸದ್ದಿಗೆ ಒದಗೋಳೆ, ನಿಂಬಿಯ…|
ವಾಲ್ಗದ ಸದ್ದಿಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡರ ಬಿಡಿಸವ್ವ, ನಿಂಬಿಯ….||2||

ಎಂಟೆಲೆ ಮಾವಿನ ದಂಟಾಗೆ ಇರುವೋಳೆ
ಗಂಟೆ ಸದ್ದಿಗೆ ಒದಗೋಳೆ, ನಿಂಬಿಯ
ಗಂಟೆಯ ಸದ್ದಿಗೆ ಒದಗೋಳೆ ಸರಸತಿಯೆ
ನಮ್ ಗಂಟಲ ತೊಡರ ಬಿಡಿಸಮ್ಮ, ನಿಂಬಿಯ…. ||3||

ರಾಗಿ ಬೀಸೋ ಕಲ್ಲೆ ರಾಜರ ಅಡಿಗಲ್ಲೇ
ರಾಯ ಅಣ್ಣಯ್ಯನ ಅರಮನೆ, ನಿಂಬಿಯ
ರಾಯ ಅಣ್ಣಯ್ಯನ ಅರಮನೆ ರಾಗಿಕಲ್ಲೆ
ನೀ ರಾಜಬೀದಿಗೆ ದಣಿ ದೊರೆ, ನಿಂಬಿಯ…||4||

ಕಲ್ಲವ್ವ ಮಾತಾಯಿ ಮೆಲ್ಲವ್ವ ರಾಗಿಯ
ಜಲ್ಲ ಜಲ್ಲನೆ ಉದುರವ್ವ, ನಿಂಬಿಯ
ಜಲ್ಲನೆ ಜಲ್ಲನೆ ಉದುರವ್ವ ನಾ ನಿನಗೆ
ಬೆಲ್ಲದಾರತಿಯ ಬೆಳಗೇನು, ನಿಂಬಿಯ…||5||

 

…………………………………………………………………………..


ಮೂಡಲ್ ಕುಣಿಗಲ್ ಕೆರೆ (ಜಾನಪದ ಗೀತೆ) LYRICS IN KANNADA | MOODAL KUNIGAL KERE SONG LYRICS |FOLK SONG

 ಹಾಡಲು ಕಲಿಯಿರಿ(CLICK HERE TO LEARN THIS SONG)

ಓ.... ಓ.....ಓ.....ಓ , ಆ.....ಆ........ಆ........ ಆ

ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂದೈಭೋಗ
ಮೂಡಿ ಬರ್ತಾನೆ ಚಂದಿರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಾಮ|
ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ||

ಓ.... ಓ.....ಓ.....ಓ , ಆ.....ಆ........ಆ........ ಆ



ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲ್ ಕೆರೆ
ಭಾವ ತಂದಾವ್ನೆ ಬಣ್ಣದ್ ಸೀರೆ
ತಾನಂದನೋ ಭಾವ ತಂದಾವ್ನೆ ಬಣ್ಣದ್ ಸೀರೆ
ನಿಂಬೆಯ ಹಣ್ಣೀನಂತೆ ತುಂಬಿ ಕುಣಿಗಲ್ ಕೆರೆ
ಅಂದಾ ನೋಡಲು ಶಿವ ಬಂದ್ರು
ತಾನಂದನೋ ಅಂದಾ ನೋಡಲು ಶಿವ ಬಂದ್ರು||

ಅಂದಾವ ನೋಡಲು ಶಿವ ಬಂದ್ರು ಶಿವಮೊಗ್ಗಿ
ಕಬ್ಬಕ್ಕಿ ಬಾಯ ಬೀಡುತಾವೆ
ತಾನಂದನೋ ಕಬ್ಬಕ್ಕಿ ಬಾಯ ಬೀಡುತಾವೆ
ಕಬ್ಬಕ್ಕಿನೆ ಬಾಯಿ ಬೀಡುತಾವೆ ಇಬ್ಬೀಡ
ಗಬ್ಬಾದ್ ಹೊಂಬಾಳೆ ನಡುಗ್ಯಾವೆ
ತಾನಂದನೋ ಗಬ್ಬಾದ್ ಹೊಂಬಾಳೆ ನಡುಗ್ಯಾವೆ ||1||

ಹಾಕಾಕ್ಕೊಂದ್ ಆರೆಗೋಲು ನೂಕಾಕ್ಕೊಂದ್ ಊರುಗೋಲು
ಬೊಬ್ಬೆ ಹೊಡೆದಾವೆ ಬಾಳೆಮೀನು
ತಾನಂದನೋ ಬೊಬ್ಬೆ ಹೊಡೆದಾವೆ ಬಾಳೆಮೀನು
ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗ
ಗುಬ್ಬಿ ಸಾರಂಗ ನಗುತಾವೆ
ತಾನಂದನೋ ಗುಬ್ಬಿ ಸಾರಂಗ ನಗುತಾವೆ ||2||
.....................................................................................

ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ SONG LYRICS IN KANNADA| TAVAROORA DAARILI SONG LYRICS| KANNADA FOLK SONG LYRICS|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ

ಸಾಸಿವೆಯಷ್ಟು ಮರಳಿಲ್ಲ

ಸಾಸಿವೆಯಷ್ಟು ಮರಳಿಲ್ಲ ಬಾನಲ್ಲಿ

ಬಿಸಿಲಿನ ಬೇಗೆ ಸುಡಲಿಲ್ಲ ||

 

ನೀರ ಮೇಲೆ ನೀರು ನೀರಾಚೆ ತಾವರೆ

ತಾವರೆ ಆಚೆ ತವರೂರು |

ತಾವರೆ ಆಚೆ ತವರೂರು ಹೋದರೆ

ತಿರುಗಿ ಬರುವುದಕ್ಕೆ ಮನಸ್ಸಿಲ್ಲ ||1||

 

ಕಣ್ಣಿಗೆ ಕಪ್ಪಾಸೆ ಬಣ್ಣಕ್ಕೆ ಸೆರಗಾಸೆ

ಹೆಣ್ಣು ಮಕ್ಕಳಿಗೆ ತವರಾಸೆ, |

ಹೆಣ್ಣು ಮಕ್ಕಳಿಗೆ ತವರಾಸೆ ತಾಯವ್ವ

ನಿನ್ನಾಸೆ ನಮಗೆ ಅನುಗಾಲ ||2||

 

ಯಾರಾದರೂ ಹೆತ್ತ ತಾಯಂತೆ ಆದಾರೆ

ಸಾವಿರ ಸೌದೆ ಒಲೆಯಲ್ಲಿ |

ಸಾವಿರ ಸೌದೆ ಒಲೆಯಲ್ಲಿ ಉರಿದಾರು

ದೀವಿಗೆಯಂತೆ ಬೆಳಕುಂಟೆ ||3||

 

ಒಬ್ಬರಿರುವ ಮನೆಗೆ ಹಬ್ಬದಿರು ಮಲ್ಲಿಗೆ

ಒಬ್ಬಳೇ ಕೂತು  ಮುಡಿಲಾರೆ |

ಒಬ್ಬಳೇ ಕೂತು  ಮುಡಿಲಾರೆ ಮಲ್ಲಿಗೆ

ಹಬ್ ಹೋಗು ನನ್ನ ತವರಿಗೆ ||4||

 

ತಾಯಿ ನನ ಹಡೆದವ್ವ ಜೀವೆಲ್ಲ ನನ್ನ ಮ್ಯಾಲ

ಕಡಿ ಹಾಕು ರಾಯ ಕುದುರೇಗೆ |

ಕಡಿ ಹಾಕು ರಾಯ ಕುದುರೇಗೆ ಸಂಗಾತ

ಆಳಾಕಳು ಅರಸ ಐನೋರು ||5||

...............................................................

 


ಕುರುಡು ಕಾಂಚಾಣ ಕುಣಿಯುತಲಿತ್ತುSONG LYRICS IN KANNADA | KURUDU KANCHANA SONG LYRICS

 

ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು
ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು
ಕುರುಡು ಕಾಂಚಾಣ... ಕುರುಡು ಕಾಂಚಾಣ
ಕುರುಡು ಕಾಂಚಾಣ... ಕುರುಡು ಕಾಂಚಾಣ

 

ಬಾಣಂತಿಯೆಲುಬ ಸಾ ಬಾಣದ ಬಿಳುಪಿನ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ
ಸಣ್ಣ ಕಂದಮ್ಮಗಳ ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ ||

ಬಡವರ ಒಡಲಿನ ಬಡಬಾನೆಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತೋ
ಕಂಬನಿ ಕುಡಿಯುವ ಹುಂಬ ಬಾಯಿಲೆ
ಮೈದುಂಬಿದಂತಧೊ ಉಧೊ ಎನ್ನುತ್ತಲಿತ್ತೋ ||

ಕೂಲಿ ಕುಂಬಳಿಯವರ ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೋ
ಗುಡಿಯೊಳಗೆ ಗಣಣ ಮಹಡಿಯೊಳಗೆ ತನನ

ಅಂಗಡಿಯೊಳಗ ಝಣಣಣ ನುಡಿಗೊಡುತ್ತಿತ್ತೋ ||

ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲ್ಲಿ ಎತ್ತೋ
ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲ್ಲಿ ಎತ್ತೋ ||

...................................................................................................


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ KANNADA FOLK SONG LYRICS, GHALLU GHALLENUTHA GEJJE

 ಹಾಡಲು ಕಲಿಯಿರಿ(CLICK HERE TO LEARN THIS SONG)


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ ,ಗೆಜ್ಜೆ ಘಲ್ಲು ತಾಜೆಣುತಾ

ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ ,

ನಮ್ ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ || ||

 

ಅರೆದರು ಅರಿಶಿಣವ ಅದಕೆ ಬೆರೆಸ್ಯಾರು ಸುಣ್ಣಾವ , ಅದಕೆ ಬೆರೆಸ್ಯಾರು ಸುಣ್ಣಾವ

ಅಂದವುಳ್ಳ ರಂಗನ ಮ್ಯಾಲೆ ಚೆಲ್ಲಿದರೋಕುಳಿಯೊ,

ನಮ್ ಅಂದವುಳ್ಳ ರಂಗನ ಮ್ಯಾಲೆ ಚೆಲ್ಲಿದರೋಕುಳಿಯೊ  ||1||

 

ಹಾಲಿನೋಕುಳಿಯೋ ಒಳ್ಳೆ ನೀಲಾದೋಕುಳಿಯೊ, ಒಳ್ಳೆ ನೀಲಾದೋಕುಳಿಯೊ

ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ,

ನಮ್ ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ ||2||

 

ತುಪ್ಪದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ , ಒಳ್ಳೆ ಒಪ್ಪದೋಕುಳಿಯೋ

ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ,

ನಮ್ ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ ||3||

 

ಗಂಧದೋಕುಳಿಯೋ ಒಳ್ಳೆ ಚೆಂದದೋಕುಳಿಯೋ, ಒಳ್ಳೆ ಚೆಂದದೋಕುಳಿಯೋ

ಅಂದವುಳ್ಳ ರಂಗನ ಮೇಲೆ ಗಂಧದೋಕುಳಿಯೋ,

ನಮ್ ಅಂದವುಳ್ಳ ರಂಗನ ಮೇಲೆ ಗಂಧದೋಕುಳಿಯೋ ||4||

...................................................................................................


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...