Showing posts with label ENVIRONMENTAL SONGS(ಪರಿಸರ ಗೀತೆಗಳು). Show all posts
Showing posts with label ENVIRONMENTAL SONGS(ಪರಿಸರ ಗೀತೆಗಳು). Show all posts

ತೂಗಿ ತೂಗಿ ಮರಗಳೇ | ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್ | ಪರಿಸರ ಗೀತೆ | environmental song in kannada |TOOGI TOOGI MARAGALE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್

 

ತೂಗಿ ತೂಗಿ ಮರಗಳೇ ಇಳೆಗೆ ಇಳಿದೆ ವರಗಳೇ

ನೆಲದ ಮಧುರ ಗಾನದಲ್ಲಿ ಮೂಡಿ ಬಂದ ಸ್ವರಗಳೇ ॥

ಆ ಆ ಆ ಆ ಆ .. ಆ ಆ ಆ ಆ..  ಆ ಆ ಆ ಆ ಆ .. ಆ ಆ ಆ ಆ

 

ಮಾತಾಡದೆ ದುಡಿಯುವ ಪ್ರೀತಿ ಪಡೆದ ಕರಗಳೇ

ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವ ನೆಲೆಗಳೇ

ಸಾಲು ಹಸಿರ ಮಾಲೆಯೇ ಜೀವ ರಸದ ನಾಲೆಯೇ

ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೆ ॥೧॥

 

ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ

ಮೈಯ ತುಂಬ ಚಿಗುರಿನ ರೋಮಾಂಚನವ ತಳೆವಿರಿ

ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ

ಔದಾರ್ಯದ ಒಡಲಾಗಿ ಹೂವು ಹಣ್ಣು ಸುರಿವಿರಿ ॥೨॥

---------------------------------------------------------------------------------------------------------------

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ SONG LYRICS | ONDU MUNJAVINALI SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ :ಚನ್ನವೀರಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು

ಅದಕೆ ಹಿಮ್ಮೇಳವನೆ ಸೂಸಿಪಹ ಸುಳಿ ಗಾಳಿ

ತೆಂಗು ಗರಿಗಳ ನಡುವೆ ನುಸುಳುತಿತ್ತು ||

 

 ಎಳೆವೆಣ್ಣು ಮೈದೊಳೆದು ಮಕರಂದ ಅರಿಶಿನದಿ

 ಹೂ ಮುಡಿದು ಮಧು ಮಗಳ ಹೋಲುತಿತ್ತು

 ಮೂಡಣದಿ ನೇಸರನ ನಗೆಮೊಗದ ಶ್ರೀ ಕಾಂತಿ

 ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು||1||

 

 ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು

 ಸೊಡರಿನಲಿ ಆರತಿಯ ಬೆಳಗುತಿತ್ತು

 ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ

 ಶುಭಮಸ್ತು ಶುಭಮಸ್ತು ಎನ್ನುತಿತ್ತು||2||

 

 ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ

 ದುಂಬಿಗಳ ಓಂಕಾರ ಹೊಮ್ಮುತಿತ್ತು

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂದಳದಿ

ಚಿಟ್ಟೆ ವೆಂಗಣ ಕುಣಿತ ಹಾಕುತಿತ್ತು||3||

 

 ಉಷೆಯ ನುಂಗದಿಬೆದಲಿ ಹರ್ಷ ಪಾರ್ಶ್ವಗಳಂತೆ

 ಮರದ ಹನಿ ತಟ ಪಟನೆ ಉದು ರುತಿತ್ತು

 ಸೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ

 ಹೊಸಬಾಳ ಸವಿಗನಸು ನೆನೆಯುತಿತ್ತು||4||

.......................................................................................................................................................

ಯುಗ ಯುಗಾದಿ ಕಳೆದರೂ song lyrics in kannada |kannada savigana lyrics| yugadi song

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:ದ ರಾ ಬೇಂದ್ರೆ (ಅಂಬಿಕಾತನಯದತ್ತ)


ಯುಗ ಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ

 ಹೊಸ ವರುಷಕೆ ಹೊಸ ಹರುಷವ

 ಹೊಸತು ಹೊಸತು ತರುತಿದೆ llPll

 

ಹೊಂಗೆ ಹೂವ ತೊಂಗಳಲಿ  ಭೃಂಗದ ಸಂಗೀತ ಕೇಳಿ

ಮತ್ತೆ ಕೇಳ ಬರುತಿದೆ|

 ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ

ಜೀವಕಳೆಯ ತರುತಿದೆ ll1ll

 ಕಮ್ಮನೆ ಬಾಣಕ್ಕೆ ಸೋತು ಜುಮ್ಮನೆ ಮಾಮರವು ಹೂತು

ಕಾಮಗಾಗಿ ಕಾದಿದೆ|

ಸುಗ್ಗಿ ಸುಗ್ಗಿ ಸುಗ್ಗಿ ಎಂದು ಹಿಗ್ಗಿ ಗಿಳಿಯ ಸಾಲು ಸಾಲು 

ತೋರಣದುಳು ಕೋದಿದೆ||2||


ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ |

ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ

ನಮಗದಷ್ಟೇ ಏತಕೋ ll3ll

 

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದು?

ಎಲೆ ಸನತ್ಕುಮಾರ ದೇವ  ಎಲೆ ಸಾಹಸಿ ಚಿರಂಜೀವ

ನಿನಗೆ ಲೀಲೆ ಸೇರದೂ॥4॥

...................................................................................


ಹೂವಿನ ದಳಗಳ ತುಂಬಾ (HOOVINA DALAGALA TUMBA)| ಪರಿಸರ ಗೀತೆ | ರಚನೆ: ಡಾ॥ ಜಿ.ಎಸ್. ಶಿವರುದ್ರಪ್ಪ

ಹಾಡಲು ಕಲಿಯಿರಿ(CLICK HERE TO LEARN THIS SONG)


ರಚನೆ: ಡಾ॥ ಜಿ.ಎಸ್. ಶಿವರುದ್ರಪ್ಪ 


ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ಧೂಳು|

ನಿನ್ನ ಹೆರಳಿಗೂ ದೇವರ ಮುಡಿಗೂ ಹೇಗೆ ಮುಡಿಸಲೇ ಹೇಳು

ಅಮ್ಮ ಹೇಗೆ ಮುಡಿಸಲೇ ಹೇಳು ||

 

ಸುತ್ತಲೂ ಕಾಣುವ ಗಿಡ ಮರವೆಲ್ಲಾ ಯಾಕಿಷ್ಟೊಂದು ಬೋಳು?

 ಹಾಡುವ ಹಕ್ಕಿಗೆ ಅಲೆಯುವ ದುಂಬಿಗೆ ಸ್ಥಳವಿನ್ನೆಲ್ಲಿದೆ ಹೇಳು?

 ಅಮ್ಮಸ್ಥಳವಿನ್ನೆಲ್ಲಿದೆ ಹೇಳು? ||1||

 

ಜುಳು ಜುಳು ಹರಿಯುವ ಹೊಳೆ ಹಳ್ಳಗಳ ನೀರ್ಯಾಕಿಷ್ಟು ಕೊಳಕು ?

ಈಜುವ ಮೀನಿಗೆ ದಾಹದ ಬಾಯಿಗೆ ಇಲ್ಲವೇ ಬದುಕುವ ಹಕ್ಕು?

 ಅಮ್ಮ ಇಲ್ಲವೇ ಬದುಕುವ ಹಕ್ಕು? ||2||

 

ಹಗಲು ಇರುಳು ಯಾಕಿಷ್ಷ್ಟೊಂದು ಸಾವಿರ ಗಾಲಿಗಳುರುಳು?

  ಗದ್ದಲದೊಳು ಕೇಳಿಸದಾಗಿದೆ ನಿನ್ನ ಜೋಗುಳದ ಕೊರಳು

ಅಮ್ಮ ನಿನ್ನ ಜೋಗುಳದ ಕೊರಳು ||3||

..................................................................................................................


ಹೊಳೆ ಸಾಲಿನ ಮರಗಳೇ , ಸಿರಿ ಬನಗಳ ಗಿರಿಗಳೇ (ಸಾಹಿತ್ಯ) | Hole saalina Maragale song lyrics in Kannada

 ಹಾಡಲು ಕಲಿಯಿರಿ(CLICK HERE TO LEARN THIS SONG)


ಹೊಳೆ ಸಾಲಿನ ಮರಗಳೇ , ಸಿರಿ ಬನಗಳ ಗಿರಿಗಳೇ

ನಮ್ಮಾತ್ಮದೊಳಗೆ ಬೆರೆತ ಚೈತನ್ಯದ ಕುಡಿಗಳೆ

ನಿಮ್ಮ ಉದಾರ ನೀತಿಗೆ, ನಿಮ್ಮ ಅನನ್ಯ ಪ್ರೀತಿಗೆ

ನಿಮಗಿದೋ ವಂದನೆ ನಿಮಗೆ ನಮ್ಮ ವಂದನೆ||

 

ನದಿಯ ಪಾತ್ರ ಹಿಗ್ಗಿದಂತೆ ದಡದ ಮಣ್ಣು ಕುಸಿಯಲು

ಬೇರು ಕಳಚಿ ಬೀಳುತಿರುವ ಜಲವಾವೃತ ವಿಪಿನವೆ||1||

 

ಬಿಡೆವು ಕಾಡು ಕುಸಿಯಲು ಬೀಳದಂತೆ ಮರಗಳು

ಹತ್ತಾಳೆ ನೆಟ್ಟು ತಡೆವೆವು ನಿಮ್ಮ ಜೀವ ಕಾಯ್ವೆವು||2||

..........................................................................................................

Also See:

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ|EE BAANU EE CHUKKI EE HOOVU EE HAKKI SONG LYRICS IN KANNADA AND ENGLISH

ಸ್ವಾಮಿ ದೇವನೆ ಲೋಕ ಪಾಲನೆ |SWAMY DEVANE LOKA PALANE SONG LYRICS IN KANNADA


ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ|EE BAANU EE CHUKKI EE HOOVU EE HAKKI SONG LYRICS IN KANNADA AND ENGLISH| KANNADA SAVIGANA LYRICS|VIDYA BV

 ಹಾಡಲು ಕಲಿಯಿರಿ(CLICK HERE TO LEARN THIS SONG)


ಬಾನು ಚುಕ್ಕಿ ಹೂವು ಹಕ್ಕಿ

ತೇಲಿ ಸಾಗುವ ಮುಗಿಲು ಹರುಷ ಉಕ್ಕಿ

ಯಾರು ಇಟ್ಟರು ಇವನು ಹೀಗೆ ಇಲ್ಲಿ

ತುದಿ ಮೊದಲು ತಿಳಿಯದೀ ನೀಲಿಯಲಿ||

 

ಒಂದೊಂದು ಹೂವಿಗೂ ಒಂದೊಂದು ಬಣ್ಣ

ಒಂದೊಂದು ಜೀವಕು ಒಂದೊಂದು ಕಣ್ಣ

ಯಾವುದೋ ಬಗೆಯಲ್ಲಿ ಎಲ್ಲರಿಗು ಅನ್ನ

ಕೊಟ್ಟ ಕರುಣೆಯ ಮೂಲ ಮರೆತಿಹುದು ತನ್ನ||1||

 

ನೂರಾರು ನದಿ ಕುಡಿದು ಮೀರದ ಕಡಲು

ಭೋರೆಂದು ಸುರಿಸುರಿದು ಆರದ ಮುಗಿಲು

ಸೇರಿಯೂ ಕೋಟಿ ತಾರೆ ತುಂಬದಾ ಬಯಲು

ಯಾರದೀ ಮಾಯೆ ಯಾವ ಬಿಂಬದ ನೆರಳು||2||

 

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ

ಹುಡುಕಿದರೆ ಕೀಲಿ ಕೈ ಸಿಗದೆ ಎದೆಯೊಳಗೆ

ತಿಳಿಯದಲದರಲ್ಲೆ ಕುಳಿತಿರುವೆ ನೀನೆ

ಎನ್ನುವರು ನನಗೀಗ ಸೋಜಿಗವು ನಾನೆ||3||

........................................................................................................

EE BAANU EE CHUKKI EE HOOVU EE HAKKI

TELI SASGUVA MUGILU HARUSHA UKKI

YAARU ITTARU IVANU HEEGE ILLI

THUDI MODALU THILIYADEE NEELIYALI||

 

ONDONDU HOOVIGU ONDONDU BANNA

ONDONDU JEEVAKU ONDONDU KANNA

YAAVUDO BAGEYALLI ELLARIGU ANNA

KOTTA KARUNEYA MOOLA MARETHIHUDU THANNA||1||


NOORAARU NADI KUDIDU MEERADA KADALU

BHORENDU SURI SURIDU AARADA MUGILU

SERIYU KOTI TAARE THUMBADA BAYALU

YAARADEE MAAYE YAAVA BIMBADA NERALU||2||

 

HORAGIRUVA PARIYELLLA ADAGIHUDE OLAGE

HUDUKIDARE KEELI KAI SIGADE EDEYOLAGE

THILIYADALADARALLE KULITIRUVE NEENE

ENNUVARU NANAGEEGA SOJIGAVU NAANE||3||

.........................................................................................................................

Also SEe:

ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA

KANNADA FILM SONGS(ಕನ್ನಡ ಚಿತ್ರಗೀತೆಗಳು)

ನಾನು ಹಡೆದವ್ವ ಹೆಸರು, ಪ್ರಕೃತಿ ಮಾತೆ/NAANU HADEDVVA song lyrics in Kannada (nature song)

 ನಾನು ಹಡೆದವ್ವ ಹೆಸರು, ಪ್ರಕೃತಿ ಮಾತೆ

ಅನುಗಾಲ ಬಾಳಿದವಳು ಅರಸಿಯಂತೆ


ನಾ ಹಡೆದ ಮಕ್ಕಳೇ ಕೊಡಲಿ ಬೀಸಿದರೆನಗೆ

ನನ್ನ ದೇಹದ ತುಂಬ ನೂರು ಗಾಯ

ಮಣ್ಣ ಕಣ ಕಣಕು ಬಿತ್ತಿ ಅಣುವಿನ ಬೀಜ

ನನ್ನ ಸುತರಿಂದಲೇ ಗರ್ಭಪಾತ || ೧ ||


ಈ ಶರಧಿ, ಪರ್ವತ ನಡುವೆ ಜೀವದ ಹಣತೆ

ಹಚ್ಚಿ ಕಾದೆನು ತುಂಬ ವರುಷ ಕಾಲ

ಸುಂಕ ಬಯಸದಿರೆ ಇತ್ತೇ ಸುಖವ ನಾನಂದು

ಇಂದು ಬೆಂಕಿಯಲಿ ಸುಟ್ಟಿಹೆನು  || ೨ ||

...........................................................

CLICK HERE TO LEARN THIS SONG



ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ (BANASIRI PRAKRITIYA VARADANA LYRICS IN KANNADA)



ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ

ಬನಸಿರಿ ಪ್ರಕೃತಿಯ ವರದಾನ
ಸಂಪನ್ಮೂಲದ ಉಗ್ರಾಣ
ಬನಸಿರಿ ಪ್ರಕೃತಿಯ ವರದಾನ
ಸಂಪನ್ಮೂಲದ ಉಗ್ರಾಣ
ವನ್ಯಜೀವಿಗಳಿಗೆ ಆಶ್ರಯಧಾಮ
ಗಿಡಮೂಲಿಕೆಗಳ ರಸ ತಾಣ… ರಸ ತಾಣ ..ರಸ ತಾಣ….||

ಕಾಡು ಮಾನವ ಸಂಬಂಧ
ಬೆಳೆದಿದೆ ಎಷ್ಟೋ ಯುಗದಿಂದ
ಕಾಡಿನ ಗರ್ಭದಿ ಬಂದವರು
ಕಾಡಿನ ಗರ್ಭದಿ ಬಂದವರು
ಕಾಡಿನ ಮಡಿಲಲಿ ಬೆಳೆದವರು
ಕಾಡಿನ ಮಡಿಲಲಿ ಬೆಳೆದವರು  ||1||

ವನಗಳೆ ಮುಕ್ತಿಯ ತಾಣಗಳು
ಬದುಕಿಗೆ ಶಕ್ತಿಯ ಕೇಂದ್ರಗಳು
ಕಾಡುಗಳಿಲ್ಲದೆ ನಾಡಿಲ್ಲ
ಕಾಡುಗಳಿಲ್ಲದೆ ನಾಡಿಲ್ಲ
ಕಾಡೆ ನಮ್ಮೊಡನಾಡಿಗಳು
ಕಾಡೆ ನಮ್ಮೊಡನಾಡಿಗಳು ||2||




JOGADA SIRI BELAKINALLI:ಜೋಗದ ಸಿರಿ ಬೆಳಕಿನಲ್ಲಿ :ನಿತ್ಯೋತ್ಸವ ಗೀತೆ




ಜೋಗದ ಸಿರಿ ಬೆಳಕಿನಲ್ಲಿ

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ||

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ||1||

ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೇ
ಸದ್ವಿಕಾಸ ಶೀಲ ನುಡಿಯ ಲೋಕಾಮ್ರುತ ಸೀಮೆಯೆ
ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ||2||

----------------------------------------------------------------------------



Also See:




ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು| HRADAYANTARAALADALI ADAGIRUVA |NATURE SONG

ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು   


ಹೆ :     ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು  ನನ್ನ ನಲ್ಲ
ಗ :      ಬರಿಯ ನೋವುಗಳಲ್ಲ  ಭಯದ ಆತಂಕಗಳು ಕಾಡುತಿವೆ ವಿಶ್ವವೆಲ್ಲಾ


ಹೆ :     ನೀಲಿ ಗಗನದ ತುಂಬಾ ನೀಲಿಯೇ ಏಕಿಲ್ಲ
          ಯಾಕಿಂಥ ಮಲಿನ ಮುಸುಕು
ಗ :      ನಿರ್ಜೀವ ಯಂತ್ರಗಳು ಕಪ್ಪಾದ ಹೊಗೆಚೆಲ್ಲಿ
           ನೀಲಿ  ಮಾಸಿತು ನನ್ನ ನಲ್ಲೆ ||


ಹೆ :     ವಾಯುಮಂಡಲದಲ್ಲಿ ಆಮ್ಲಜನಕವು ಎಲ್ಲಿ
           ಜೀವ ಕುಲಕೆ ಯಾಕೆ ಬವಣೆ
ಗ :      ಸಸ್ಯಶಾಮಲೆಯನ್ನು ಕೊಚ್ಚಿಕೊಂದರು ನಲ್ಲೆ
          ಎಲ್ಲಿ ಬಂದಿತು ಸ್ವಚ್ಛ ಗಾಳಿ   ||

ಹೆ :    ಆನೆ ಸಿಂಹಗಳೆಲ್ಲ ಎಲ್ಲಿ ಹೋದವು ನಲ್ಲ 
         ಯಾಕೆ ಕೋಗಿಲೆಗೆ ಮೂಕ ನೋವು
ಗ :      ನೆಟ್ಟ ಕಾಡುಗಳೆಲ್ಲಾ ಕೆಟ್ಟ ಕೈಗಳ ಬಲೆಗೆ
          ಚಿವುಟಿ ಹೋಯಿತು ನನ್ನ ನಲ್ಲೆ  ||

............................................

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...