Showing posts with label BASAVANNA VACHANA(ಬಸವಣ್ಣನವರ ವಚನಗಳು). Show all posts
Showing posts with label BASAVANNA VACHANA(ಬಸವಣ್ಣನವರ ವಚನಗಳು). Show all posts

ಬಸವಣ್ಣನವರ ವಚನ: ಎನ್ನ ನಡೆಯೊಂದು ಪರಿ |BASAVANNA VACANA - ENNA NADEYONDU PARI

 

ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ.

......................................................................................................................................

 ENNA NADEYONDU PARI ENNA NUDIYONDU PARI

ENNOLAGENOO SHUDDHAVILL NODAYYA

NUDIGE TAKKA NADEYA KANDEDE

KOODALA SANGAMA DEVANOLAGIPPANAYYAA

......................................................................................................................................

ಬಸವಣ್ಣನವರ ವಚನಗಳು:ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ BASAVANNA VACHANA |NAADAPRIYA SHIVANEMBARU

 ಹಾಡಲು ಕಲಿಯಿರಿ(CLICK HERE TO LEARN THIS VACHANA)

ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು ಕೂಡಲಸಂಗಮ ದೇವಾ

ನಾದ ಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲವಯ್ಯ

ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲವಯ್ಯ।

ನಾದವ ಮಾಡಿಅದ ರಾವಣಂಗೆ ಅರೆ ಆಯುಷ್ಯವಾಯಿತ್ತು

ವೇದವನೋದಿದ ಬ್ರಹ್ಮನಾ ಶಿರವು ಹೋಯಿತ್ತು

ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ

ಭಕ್ತಿಪ್ರಿಯ ನಮ್ಮ ಕೂಡಲಸಂಗಮ ದೇವಾ॥

NIMMA SHARANARIGE SHARANEMBUDA KARUNISU

KOODALA SANGAMA DEVA

NAADAPRIYA SHIVANEMBARU

NAADAPRIYA SHIVANALLA|

VEDAPRIYA SHIVANEMBARU 

VEDAPRIYA SHIVANALLA

NAADAVA MAADIDA RAAVAnANGE AREYAAYUSHAVAAYITHU

VEDAVANODIDA BRAHMANA SHIRA HOYITHU

NAADAPRIYANU ALLA

VEDAPRIYANU ALLA

BHAKTHAPRIYA NAMMA KOODALASANGAMA DEVA||

........................................................................................................

ಬಸವಣ್ಣನವರ ವಚನಗಳು: ದಯವಿಲ್ಲದ ಧರ್ಮವದಾವುದಯ್ಯ lyrics in Kannada and English

 


ದಯವಿಲ್ಲದ ಧರ್ಮವದಾವುದಯ್ಯ 

ದಯವೇ ಬೇಕು ಸಕಲ ಪ್ರಾಣಿಗಳಲ್ಲಿ

ದಯವೇ ಧರ್ಮದ ಮೂಲವಯ್ಯ

ಕೂಡಲಸಂಗಮನಂತಲ್ಲದೊಲ್ಲನಯ್ಯ||


DAYAVILLADA DHARMAVADAAVUDAYYA

DAYAVE BEKU SAKALA PRAANIGALALLI

DAYAVE DHARMADA MOOLAVAYYA

KOODALASANGAMA NANTALLADOLLANAYYA||


Related Topic:

ಬಸವಣ್ಣನವರ ವಚನ: ಕಳಬೇಡ ಕೊಲಬೇಡ | KALABEDA KOLABEDA |BASAVANNA|KANNADA SAVIGANA LYRICS

Also See:

ಜ್ಞಾನವಿಲ್ಲದೇ ಮೋಕ್ಷವಿಲ್ಲಾ/JNANAVILLADE MOKSHAVILLA song lyrics in kannada


ಬಸವಣ್ಣನವರ ವಚನ: ಕಳಬೇಡ ಕೊಲಬೇಡ | KALABEDA KOLABEDA |BASAVANNA|KANNADA SAVIGANA LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ|

ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ

 ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ||

........................................................

KALABEDA KOLABEDA, HUSIYA NUDIYALU BEDA

MUNIYABEDA ANYARIGE, ASAHYA PADABEDA

TANNA BANNISABEDA, IDIRA HALIYALU BEDA

IDE ANTARANGA SHUDDI, IDE BAHIRANGA SHUDDI

IDE NAMMA KOODALA SANGAMA 

DEVARANOLISUVA PARI||

...............................................................................

Also See:

LORD SHIVA(ಈಶ್ವರನ ಹಾಡು)

PURANDARA DASA(ಪುರಂದರದಾಸ).


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...