ಶಿವ ಶಿವ ಎನ್ನುತ ಹಾಡಲು ಮನದಲಿ (SHIVA SHIVA ENNUTHA HAADALU SONG LYRICS)




ಶಿವ ಶಿವ ಎನ್ನುತ ಹಾಡಲು

ಶಿವ ಶಿವ ಎನ್ನುತ ಹಾಡಲು ಮನದಲಿ
ನೆಮ್ಮದಿ ಕಾಣುವುದು ಸುಖ ಸಮೃದ್ಧಿಕೂಡುವುದು
ಶಿವ ಸ್ಮರಣೆಯ ಮಾಡು ಶಿವ ನಾಮವ ನೀ ಹಾಡು
ಕೈ ಮುಗಿದು ಬೇಡು ಕೈಲಾಸವ ನೀ ನೋಡು||

ಗಂಗಾಜಟಾಧರನು ಶಂಕರ ಪಾರ್ವತಿ ಮನ ಪ್ರಿಯನು (2 ಸಲ)
ದೀನ ರಕ್ಷಕ ದಾನವ ಶಿಕ್ಷಕ ತಾಂಡವ ಭೈರವನು
ಕರುಣಾಳು ಮೂರ್ತಿಯವನು ದಯೆತೋರಿ ಹರಸುತಿಹನು||1||

ನಂದೀಶ ವಾಹನನು ಶಂಕರ ನಾಗಭೂಷಣನು (2 ಸಲ)
ನಿಟಿಲ ಮನೋಹರ ನೀಲಕಂಠಹರ ಅನಾಥ ರಕ್ಷಕನು
ಕರುಣಾಳ ನೋಡಬನ್ನಿ ಸೇನೇಶ್ವರ ಜಯವೆನ್ನಿ||2||

CLICK HERE FOR THE SONG

Also See:

ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA




ನೀಡು ಶಿವ ನೀಡದಿರು ಶಿವ

ನೀಡು ಶಿವ ನೀಡದಿರು ಶಿವ
ಬಾಗುವುದು ಎನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ಎನ್ನ ಕಾಯ||

ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ(2 ಸಲ)
ನೀನಿತ್ತ ಕಾಯ ನಿನ ಕೈಲಿ ಮಾಯ(2 ಸಲ)
ಆಗೋದು ಹೋಗೋದು ನಾ ಕಾಣೆನೆ||1||

ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ
ನಾನಂತೂ ನಿನ್ನನ್ನಲಾರೆ(2 ಸಲ)
ಸಾರಂಗ ಮನಕೆ ನೂರಾರು ಬಯಕೆ(2 ಸಲ)
ಮುಂದಿಟ್ಟು ಉಣಿಸೋದು ನಾ ಕಾಣೆನೆ||2||



ಶ್ರೀ ಗಣೇಶ ಶ್ಲೋಕಗಳು(LORD GANESHA SHLOKAS) LYRICS IN KANNADA




ಶ್ರೀ ಗಣೇಶ ಶ್ಲೋಕಗಳು

1.      ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ|
         ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ||

2.   ಅಗಜಾನನ ಪದ್ಮಾರ್ಕಂ ಗಜಾನನಮ್ ಅಹರ್ನಿಶಂ|
         ಅನೇಕದಂ ತಂ ಭಕ್ತಾನಾಂ ಏಕದಂತಂ ಉಪಾಸ್ಮಹೇ||

3.   ಗಜಾನನಂ ಭೂತ ಗಣಾದಿ ಸೇವಿತಂ
         ಕಪಿತ್ಥ ಜಂಬೂಫಲ ಸಾರ ಭಕ್ಷಿತಂ|
         ಉಮಾಸುತಂ ಶೋಕ ವಿನಾಶ ಕಾರಣಂ
         ನಮಾಮಿ ವಿಘ್ನೇಶ್ವರ ಪಾದಪಂಕಜಂ||

    4.ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ|
      ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಷ್ ಕಾಮಾರ್ಥ ಸಿದ್ಧಯೆ||

..........................................................................................

Also see:

ಕೂಸಿನ ಕಂಡೀರಾ | KUSINA KANDIRA SONG LYRICS IN KANNADA




ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ


ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ
ಬಾಲನ ಕಂಡೀರಾ ಬಲವಂತನ ಕಂಡೀರಾ||

ಅಂಜನೆ ಉದರದಿ ಜನಿಸಿತು ಕೂಸು
ರಾಮನ ಪಾದಕ್ಕೆರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನು ಸುಟ್ಟಿತು ಕೂಸು||1||

ಬಂಡಿ ಅನ್ನವನು೦ಡಿತು ಕೂಸು
ಬಕನ ಪ್ರಾಣವ ಕೊಂಡಿತು ಕೂಸು
ವಿಷದ ಲಡ್ಡುಗೆಯ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||2||

ಮಾಯವೆಲ್ಲವ ಗೆದ್ದಿತು ಕೂಸು
ಮಧ್ವ ಮತವನುದ್ಧರಿಸಿತು ಕೂಸು
ಪುರಂದರವಿಠಲನ ದಯದಿಂದ ಕೂಸು
ಸುಮ್ಮನೆ ಉಡುಪಿಲಿ ನಿಂತಿತು ಕೂಸು||3||


ಸೂರ್ಯ ದ್ವಾದಶ ನಾಮಾವಳಿ (surya dwaadasha naamaavali in kannada)




ಸೂರ್ಯ ದ್ವಾದಶ ನಾಮಾವಳಿ


ಓಂ ಹ್ರಾಂ ಮಿತ್ರಾಯ ನಮ:
ಓಂ ಹ್ರೀಂ ರವಯೇ ನಮ:
ಓಂ ಹ್ರೂO ಸೂರ್ಯಾಯ ನಮ:
ಓಂ ಹ್ರೈO ಭಾನವೇ ನಮ:
ಓಂ ಹ್ರೊವ್ಮ್ ಖಗಾಯ ನಮ:
ಓಂ ಹ್ರ: ಪೂಶ್ನೇ ನಮ:
ಓಂ ಹ್ರಾಂ ಹಿರಣ್ಯ ಗರ್ಭಾಯ ನಮ:
ಓಂ ಹ್ರೀಂ ಮರೀಚಯೇ ನಮ:
ಓಂ ಹ್ರೂO ಆದಿತ್ಯಾಯ ನಮ:
ಓಂ ಹ್ರೈO ಸವಿತ್ರೇ ನಮ:
ಓಂ ಹ್ರೊವ್ಮ್ ಅರ್ಕಾಯ ನಮ:
ಓಂ ಹ್ರ: ಭಾಸ್ಕರಾಯ ನಮ:
ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮ:




INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...