May 30, 2021

ಜನ ಗಣ ಮನ (ರಾಷ್ಟ್ರಗೀತೆ) | JANA GANA MANA LYRICS |NATIONAL ANTHEM

 ಜನ ಗಣ ಮನ ಅಧಿನಾಯಕ ಜಯ ಹೇ

ಭಾರತ ಭಾಗ್ಯ ವಿಧಾತಾ |


ಪಂಜಾಬ ಸಿಂಧು ಗುಜರಾತ ಮರಾಠಾ

ದ್ರಾವಿಡ ಉತ್ಕಲ ವಂಗ |


ವಿಂಧ್ಯ ಹಿಮಾಚಲ ಯಮುನಾ ಗಂಗಾ

ಉಚ್ಚಲ ಜಲಧಿ ತರಂಗ |


ತವ ಶುಭ ನಾಮೇ ಜಾಗೇ ತವ ಶುಭ ಆಶಿಶ ಮಾಗೇ  |

ಗಾಹೇ  ತವ ಜಯ ಗಾಥಾ |


ಜನ ಗಣ ಮಂಗಲ ದಾಯಕ ಜಯ ಹೇ 

ಭಾರತ ಭಾಗ್ಯ ವಿಧಾತಾ |


ಜಯ ಹೇ, ಜಯ ಹೇ, ಜಯ ಹೇ

ಜಯ ಜಯ ಜಯ ಜಯ ಹೇ ||

..................................................................................................

CLICK HERE TO LEARN THE SONG

JANA GANA MANA ADHI NAAYAKA JAYA HE

BHARATA BHAGYA VIDHAATA|


PANJAABA SINDHU GUJARAATHA MARAATA

DRAAVIDA UTKALA VANGA|


VINDHYA HIMACHALA YAMUNA GANGA

UCHALA JALADHI TARANGA|


TAVA SHUBHA NAAME JAAGE , TAVA SHUBHA AASHISHA MAAGE

GAAHE TAVA JAYA GAATHA|


JANA GANA MANGALA DAAYAKA JAYA HE

BHARATA BHAAGYA VIDHAATA|


JAYA HE JAYA HE JAYA HE

JAYA JAYA JAYA JAYA HE......||

.................................................................................................................................................


Also see:

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು |UDAYAVAGALI NAMMA CHELUVA KANNADA NAADU LYRICS

GURU STOTRAM: ಗುರು ಸ್ತೋತ್ರಮ್ |SHLOKAS WITH MEANING


May 22, 2021

ಕಮಲದ ಮೊಗದೋಳೆ | Kamalada Mogadole Song Lyrics in Kannada

                                                                                              

ಕಮಲದ ಮೊಗದೋಳೆ ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲಾನಾಭನ ಹೃದಯ ಕಮಲದಲಿ ನಿಂತೋಳೆ

ಕಮಲಿನೀ ಕರಮುಗಿವೆ ಬಾಮ್ಮಾ

ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ ||


ಕಾವೇರಿ ನೀರ ಅಭಿಷೇಕಕಾಗಿ

ನಿನಗಾಗಿ ನಾ ತಂದೆನಮ್ಮ

ಕಂಪನ್ನು ಚೆಲ್ಲೊ ಸುಮರಾಶಿಯಿಂದ

ಹೂಮಾಲೆ ಕಟ್ಟಿರುವೆನಮ್ಮ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವಾ ತುಂಬುವಂತೆ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವ ತುಂಬುವಂತೆ 

ನಲಿಯುತ ಕುಣಿಯುತ ಒಲಿದು ಬಾ 

ನಮ್ಮ ಮನೆಗೆ ಬಾ || ೧ ||


ಶ್ರೀದೇವಿ ಬಾಮ್ಮ ಧನಲಕ್ಷ್ಮೀ ಬಾಮ್ಮ

ಮನೆಯನ್ನು ಬೆಳಕಾಗಿ ಮಾಡು

ದಯೆತೋರಿ ಬಂದು ಮನದಲ್ಲಿ ನಿಂತು

ಸಂತೋಷ ಸೌಭಾಗ್ಯ ನೀಡು

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಕರವನು ಮುಗಿಯುವೆ

ಆರತಿ ಈಗ ಬೆಳಗುವೆ || ೨ ||


 CLICK HERE TO LEARN THIS SONG 

...................................................................................

Also See:

BASAVANNA VACHANA(ಬಸವಣ್ಣನವರ ವಚನಗಳು)

ಅಂಜನಾ ನಂದನ ಆಂಜನೇಯ ನಮೋ ನಮೋ (ANJANA NANDANA AANJANEYA )SONG LYRICS IN KANNADA AND ENGLISH


May 8, 2021

ಬ್ರಹ್ಮ ವಿಷ್ಣು ಶಿವ | Bramha Vishnu Shiva Song Lyrics in Kannada

ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ

ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ

ಬಾಳಿಗೆ ಒಂದೆ ಮನೆ ಬಾಳೆಗೆ ಒಂದೆ ಗೊನೆ

ಭೂಮಿಗೆ ದೈವ ಒಂದೇನೆ ತಾಯಿ

ದಾರಿಗೆ ಒಂದೆ ಕೊನೆ ರಾಗಿಗೆ ಒಂದೆ ತೆನೆ

ಸೃಷ್ಟಿಸೋ ಜೀವೆ ಒಂದೇನೇ ತಾಯಿ ||

 

ಜಗದೊಳಗೆ ಮೊದಲು ಜನಿಸಿದಳು

ಹುಡುಕಿದರೆ ಮೂಲ ಸಿಗದಯ್ಯಾ

ದಡವಿರದ ಕರುಣೆ ಕಡಲಿವಳು

ಗುಡಿಯಿರದ ದೇವಿ ಇವಳಯ್ಯ

ಮನಸು ಮಗು ತರ ಪ್ರೀತಿಯಲಿ

ಹರಸೊ ಹಸು ತರ ತ್ಯಾಗದಲಿ

ಜಗ ತೂಗೊ ಜನನಿ ಜೀವದ ಜೀವ ತಾಯಿ || ೧ ||

 

 

ಪದಗಳಿಗೆ ಸಿಗದ ಗುಣದವಳು

ಬರೆಯುವುದು ಹೇಗೆ ಇತಿಹಾಸ

ಬದುಕುವುದ ಕಲಿಸೊ ಗುರು ಇವಳು

ನರಳುವಳು ಹೇಗೊ ನವಮಾಸ

ಗಂಗೆ ತುಂಗೆಗಿಂತ ಪಾವನಳು

ಬೀಸೋ ಗಾಳಿಗಿಂತ ತಂಪಿವಳು

ಜಗ ತೂಗೊ ಜನನಿ ಜೀವದ ಜೀವ ತಾಯಿ || ೨ ||


Click Here to Learn the Song

May 1, 2021

ನಾನು ಹಡೆದವ್ವ ಹೆಸರು, ಪ್ರಕೃತಿ ಮಾತೆ/NAANU HADEDVVA song lyrics in Kannada (nature song)

 ನಾನು ಹಡೆದವ್ವ ಹೆಸರು, ಪ್ರಕೃತಿ ಮಾತೆ

ಅನುಗಾಲ ಬಾಳಿದವಳು ಅರಸಿಯಂತೆ


ನಾ ಹಡೆದ ಮಕ್ಕಳೇ ಕೊಡಲಿ ಬೀಸಿದರೆನಗೆ

ನನ್ನ ದೇಹದ ತುಂಬ ನೂರು ಗಾಯ

ಮಣ್ಣ ಕಣ ಕಣಕು ಬಿತ್ತಿ ಅಣುವಿನ ಬೀಜ

ನನ್ನ ಸುತರಿಂದಲೇ ಗರ್ಭಪಾತ || ೧ ||


ಈ ಶರಧಿ, ಪರ್ವತ ನಡುವೆ ಜೀವದ ಹಣತೆ

ಹಚ್ಚಿ ಕಾದೆನು ತುಂಬ ವರುಷ ಕಾಲ

ಸುಂಕ ಬಯಸದಿರೆ ಇತ್ತೇ ಸುಖವ ನಾನಂದು

ಇಂದು ಬೆಂಕಿಯಲಿ ಸುಟ್ಟಿಹೆನು  || ೨ ||

...........................................................

CLICK HERE TO LEARN THIS SONG