ಬ್ರಹ್ಮ
ವಿಷ್ಣು ಶಿವ ಎದೆ ಹಾಲು
ಕುಡಿದರೊ
ಆಮ್ಮ
ನೀನೆ ದೈವ ಅಂತ ಕಾಲು
ಮುಗಿದರೊ
ಬಾಳಿಗೆ
ಒಂದೆ ಮನೆ ಬಾಳೆಗೆ ಒಂದೆ
ಗೊನೆ
ಭೂಮಿಗೆ
ದೈವ ಒಂದೇನೆ ತಾಯಿ
ದಾರಿಗೆ
ಒಂದೆ ಕೊನೆ ರಾಗಿಗೆ ಒಂದೆ
ತೆನೆ
ಸೃಷ್ಟಿಸೋ
ಜೀವೆ ಒಂದೇನೇ ತಾಯಿ ||
ಜಗದೊಳಗೆ
ಮೊದಲು ಜನಿಸಿದಳು
ಹುಡುಕಿದರೆ
ಮೂಲ ಸಿಗದಯ್ಯಾ
ದಡವಿರದ
ಕರುಣೆ ಕಡಲಿವಳು
ಗುಡಿಯಿರದ
ದೇವಿ ಇವಳಯ್ಯ
ಮನಸು
ಮಗು ತರ ಪ್ರೀತಿಯಲಿ
ಹರಸೊ
ಹಸು ತರ ತ್ಯಾಗದಲಿ
ಜಗ ತೂಗೊ ಜನನಿ ಜೀವದ
ಜೀವ ತಾಯಿ || ೧ ||
ಪದಗಳಿಗೆ
ಸಿಗದ ಗುಣದವಳು
ಬರೆಯುವುದು
ಹೇಗೆ ಇತಿಹಾಸ
ಬದುಕುವುದ
ಕಲಿಸೊ ಗುರು ಇವಳು
ನರಳುವಳು ಹೇಗೊ
ನವಮಾಸ
ಗಂಗೆ
ತುಂಗೆಗಿಂತ ಪಾವನಳು
ಬೀಸೋ ಗಾಳಿಗಿಂತ
ತಂಪಿವಳು
ಜಗ ತೂಗೊ ಜನನಿ ಜೀವದ
ಜೀವ ತಾಯಿ || ೨ ||
No comments:
Post a Comment