Aug 19, 2021

ಸ್ವರ್ಣಗೌರಿ ಶ್ಲೋಕಗಳು (SWARNA GOWRI SHLOKAS) WITH KANNADA AND ENGLISH LYRICS

 

ಸ್ವರ್ಣಗೌರಿ ಶ್ಲೋಕಗಳು (SWARNA GOWRI SHLOKAS)

 

ಹಿಮಾಚಲೇ೦ದ್ರ ತನಯಾಂ   ಸೌಮಾಂಗಲ್ಯ ಪ್ರದಾಯಿನೀ೦|

ಗಣೇಶ ಸ್ಕಂದ ಜನನೀ೦ ಪಾರ್ವತೀ೦ ಪ್ರಣಮಾಮ್ಯಹ೦||

 

HIMACHALENDRA TANAYAAM, SOUMAANGALYA PRADAAYINEEM|

GANESHA SKANDA JANANEEM PAARVATHEEM PRANAMAAMYAHAM||

 

ನಮಸ್ತೇ ಗಿರಿಜಾ ದೇವಿ ನಮಸ್ತ್ರೈಲೋಕ್ಯ ನಾಯಕೀ|

ನಮಸ್ತೇ ಸರ್ವ ಪಾಪಘ್ನೀ ಸ್ವರ್ಣಗೌರಿ ನಮೋಸ್ತುತೇ||

 

NAMASTE GIRIJAA DEVI NAMASTRAILOKYA NAAYAKI|

NAMASTE SARVA PAAPAGNI SWARNA GOWRI NAMOSTUTE||

 

ಅಮರೀ ಕಬರೀ ಭಾರ ಭ್ರಮರೀ ಮುಖರೀ ಕೃತಮ್|

ದೂರೀ ಕರೋತು ದುರಿತಂ ಗೌರಿ ಚರಣ ಪಂಕಜಂ||

 

AMARI KABARI BHAARA BHRAMARI MUKHREE KRATHAM|

DOORI KAROTHU DURITHAM, GOWRI CHARANA PANKAJAM||

................................................................................................................................

Also see:

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

EASY SHLOKAS(ಸರಳ ಶ್ಲೋಕಗಳು).

Aug 6, 2021

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು|DHAREGAVATARISIDE SONG LYRICS IN KANNADA


 ಹಾಡಲು ಕಲಿಯಿರಿ(CLICK HERE TO LEARN THIS SONG)


ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು

ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು

ದೇವಿ ನಿನ್ನಯ ಸೊಬಗಿನ ಮಹಿಮೆಯ

ಬಣ್ಣಿಸಲಸದಳವು ನಮ್ಮೀ ತಾಯ್ನೆಲವು ||

 

ಧವಳ ಹಿಮಾಲಯ ಮುಕುಟದ ಮೆರುಗು

ಕಾಲ್ತೊಳೆಯುತಲಿದೆ ಜಲಧಿಯ ಬುರುಗು

ಗಂಗಾ ಬಯಲಿದು ಹಸಿರಿನ ಸೆರಗು

ಕಣ ಕಣಮಂಗಳವು ನಮ್ಮೀ ತಾಯ್ನೆಲವು||1||

 

ದೇವಿ ನಿನ್ನಯ ಸೊಬಗಿನ ಮಹಿಮೆಯ

ಬಣ್ಣಿಸಲಸದಳವು ನಮ್ಮೀ ತಾಯ್ನೆಲವು ||

 

ಕಾಶ್ಮೀರದಲಿ ಸುರಿವುದು ತುಹಿನ

ರಾಜಸ್ಥಾನದಿ ಸುಡುವುದು ಪುಲಿನ

ಮಲಯಾಚಲದಲಿ ಗಂಧದ ಪವನ

ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು||2||

 

ದೇವಿ ನಿನ್ನಯ ಸೊಬಗಿನ ಮಹಿಮೆಯ

ಬಣ್ಣಿಸಲಸದಳವು ನಮ್ಮೀ ತಾಯ್ನೆಲವು ||

 

ಹಲವು ಭಾಷೆ ನುಡಿ ಲಿಪಿಗಳ ತೋಟ

ವಿವಿಧ ಪಂಥ ಮತಗಳ ರಸದೂಟ

ಕಾಣಲು ಕಾಮನ ಬಿಲ್ಲಿನ ನೋಟ

ಬಗೆ ಬಗೆಯ ಸಂಕುಲವು ನಮ್ಮೀ ತಾಯ್ನೆಲವು||3||

 

ದೇವಿ ನಿನ್ನಯ ಸೊಬಗಿನ ಮಹಿಮೆಯ

ಬಣ್ಣಿಸಲಸದಳವು ನಮ್ಮೀ ತಾಯ್ನೆಲವು ||

 

ಪುಣ್ಯವಂತರಿಗೆ ಇದುವೆ ನಾಕ

ಖಳರಿಗೆ ಆಗಿದೆ ಶಿವನ ಪಿನಾಕ

ಶರಣಾಗತರಿಗೆ ಅಭಯದಾಯಕ

ಯುಗಯುಗದೀ ನೆಲವು ನಮ್ಮೀ ತಾಯ್ನೆಲವು||4||

 

ದೇವಿ ನಿನ್ನಯ ಸೊಬಗಿನ ಮಹಿಮೆಯ

ಬಣ್ಣಿಸಲಸದಳವು ನಮ್ಮೀ ತಾಯ್ನೆಲವು ||

 

ಗಂಗೆ ತುಂಗೆಯರ ಅಮೃತ ಸ್ತನ್ಯ

ಕುಡಿಸುತ ಮಾಡಿದೆ ಜೀವನ ಧನ್ಯ

ಮುಡಿಪಿದು ಬದುಕು ನಿನಗೆ ಅನನ್ಯ

ಕ್ಷಣ ಕ್ಷಣ ಬಲ ಛಲವು ನಮ್ಮೀ ತಾಯ್ನೆಲವು||5||

 

ದೇವಿ ನಿನ್ನಯ ಸೊಬಗಿನ ಮಹಿಮೆಯ

ಬಣ್ಣಿಸಲಸದಳವು ನಮ್ಮೀ ತಾಯ್ನೆಲವು ||

...............................................................................................................................................

Aug 3, 2021

ಸ್ವಾಮಿ ದೇವನೆ ಲೋಕ ಪಾಲನೆ |SWAMY DEVANE LOKA PALANE SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತು ನಮೋಸ್ತುತೇ

ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತು ತೇ||


 ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ

ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ||1||

 

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ

ಮನೆಯ ಮಕ್ಕಳ ಐಕ್ಯ ಗಾನವ ಆಲಿಸೈ ಪರಿಪಾಲಿಸೈ||2||

.......................................................................................................................................................

Also See:

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

ಕೂಸಿನ ಕಂಡೀರಾ | KUSINA KANDIRA SONG LYRICS IN KANNADA