ಹಾಡಲು ಕಲಿಯಿರಿ(CLICK HERE TO LEARN THIS SONG)
ಧರೆಗವತರಿಸಿದೆ
ಸ್ವರ್ಗದ ಸ್ಪರ್ಧಿಯು
ಸುಂದರ
ತಾಯ್ನೆಲವು ನಮ್ಮೀ ತಾಯ್ನೆಲವು
ದೇವಿ
ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು
ನಮ್ಮೀ ತಾಯ್ನೆಲವು ||
ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ
ಜಲಧಿಯ ಬುರುಗು
ಗಂಗಾ
ಬಯಲಿದು ಹಸಿರಿನ ಸೆರಗು
ಕಣ ಕಣಮಂಗಳವು
ನಮ್ಮೀ ತಾಯ್ನೆಲವು||1||
ದೇವಿ
ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು
ನಮ್ಮೀ ತಾಯ್ನೆಲವು ||
ಕಾಶ್ಮೀರದಲಿ
ಸುರಿವುದು ತುಹಿನ
ರಾಜಸ್ಥಾನದಿ
ಸುಡುವುದು ಪುಲಿನ
ಮಲಯಾಚಲದಲಿ
ಗಂಧದ ಪವನ
ವಿಧವಿಧ
ಹೂ ಫಲವು ನಮ್ಮೀ ತಾಯ್ನೆಲವು||2||
ದೇವಿ
ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು
ನಮ್ಮೀ ತಾಯ್ನೆಲವು ||
ಹಲವು
ಭಾಷೆ ನುಡಿ ಲಿಪಿಗಳ ತೋಟ
ವಿವಿಧ
ಪಂಥ ಮತಗಳ ರಸದೂಟ
ಕಾಣಲು
ಕಾಮನ ಬಿಲ್ಲಿನ ನೋಟ
ಬಗೆ
ಬಗೆಯ ಸಂಕುಲವು ನಮ್ಮೀ ತಾಯ್ನೆಲವು||3||
ದೇವಿ
ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು
ನಮ್ಮೀ ತಾಯ್ನೆಲವು ||
ಪುಣ್ಯವಂತರಿಗೆ
ಇದುವೆ ನಾಕ
ಖಳರಿಗೆ ಆಗಿದೆ
ಶಿವನ ಪಿನಾಕ
ಶರಣಾಗತರಿಗೆ
ಅಭಯದಾಯಕ
ಯುಗಯುಗದೀ ನೆಲವು
ನಮ್ಮೀ ತಾಯ್ನೆಲವು||4||
ದೇವಿ
ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು
ನಮ್ಮೀ ತಾಯ್ನೆಲವು ||
ಗಂಗೆ ತುಂಗೆಯರ
ಅಮೃತ ಸ್ತನ್ಯ
ಕುಡಿಸುತ ಮಾಡಿದೆ
ಜೀವನ ಧನ್ಯ
ಮುಡಿಪಿದು ಬದುಕು
ನಿನಗೆ ಅನನ್ಯ
ಕ್ಷಣ ಕ್ಷಣ ಬಲ
ಛಲವು ನಮ್ಮೀ ತಾಯ್ನೆಲವು||5||
ದೇವಿ
ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು
ನಮ್ಮೀ ತಾಯ್ನೆಲವು ||
No comments:
Post a Comment