1. अभिवादनशीलस्य नित्यं वृद्धॊपसेविन: ।
चत्वारि तस्य वर्धन्ते आयुर्विद्या यशो धनम्॥
ಅಭಿವಾದನ ಶೀಲಸ್ಯ ನಿತ್ಯ೦ ವೃದ್ಧೋಪಸೇವಿನ:।
ಚತ್ವಾರಿ ತಸ್ಯ ವರ್ಧನ್ತೇ ಆಯುರ್ವಿದ್ಯಾ ಯಶೋ ಧನಮ್॥
2. आलस्यं
हि मनुष्याणां शरीरस्थॊ महान् रिपु: ।
नास्त्युद्यम समॊ बन्धु: कुर्वाणॊ नावसीदति॥
ಆಲಸ್ಯಮ್
ಹಿ ಮನುಷ್ಯಾಣಾ೦ ಶರೀರಸ್ಥೋ ಮಹಾನ್ ರಿಪು: |
ನಾಸ್ತ್ಯುದ್ಯಮಸಮೋ
ಬಂಧು: ಕುರ್ವಾಣೋ ನಾವಸೀದತಿ ||
3. अञ्जलिस्थानि
पुष्पाणि वासयन्ति करद्वयम्।
अहॊ सुमनसां प्रीतिर्वामदक्षिणयॊ:
समा॥
ಅಹೋ ಸುಮನಸಾ೦ ಪ್ರೀತಿರ್ವಾಮ ದಕ್ಷಿಣಯೋ: ಸಮಾ॥
ಅರ್ಥ: ಕೈಯಲ್ಲಿ ಹಿಡಿದಿರುವ ಪುಷ್ಪವು ತನ್ನ್ನನ್ನು ಹಿಡಿದಿರುವ
ಎರಡೂ ಕೈಗಳನ್ನು ಸುವಾಸಿತವನ್ನಾಗಿಸುತ್ತದೆ. ಅಂತೆಯೇ ಸಜ್ಜನರು ಎಲ್ಲಾ ಜನರನ್ನು ಒಂದೇ ಪ್ರೀತಿಯಿಂದ
ನೋಡುತ್ತಾರೆ.
4. अनुगन्तुं
सतां धर्म कृत्स्नम् यदि न शक्यते।
स्वल्पमपि अ नुगन्तव्यं मार्गस्तॊ नावसीदति॥
ಸ್ವಲ್ಪಮಪಿ
ಅನುಗಂತವ್ಯ೦ ಮಾರ್ಗಸ್ತೋ ನಾವಸೀದತಿ॥
ಅರ್ಥ: ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು. ಹಾಗೆ ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದಲ್ಲಿ ಸ್ವಲ್ಪವಾದರೂ ಅವರನ್ನು ಅನುಸರಿಸಬೇಕು. ಆ ಮಾರ್ಗವನ್ನು ಅನುಸರಿಸುವವರು ನಾಶವನ್ನು ಹೊಂದುವುದಿಲ್ಲ.
5. अन्य क्षेत्रे कृतं पापं पुण्यक्षेत्रे प्रणश्यति।
पुण्यक्षेत्रे कृतं पापं वज्रलेपो भविष्यति||
ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ಪ್ರಣಶ್ಯತಿ।
ಪುಣ್ಯಕ್ಷೆತ್ರೇ ಕೃತ೦ ಪಾಪ೦ ವಜ್ರಲೇಪೋ ಭವಿಷ್ಯತಿ॥
ಜೀವನದ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿದ ಪಾಪಗಳನ್ನು ಪುಣ್ಯಕ್ಷೇತ್ರಕ್ಕೆ ಹೋಗಿ ಕಳೆದು ಕೊಳ್ಳಬಹುದು. ಆದರೆ ಪುಣ್ಯಕ್ಷೇತ್ರಗಳಿಗೆ ಹೋಗಿ ಅಲ್ಲಿಯೂ ಪಾಪ ಮಾಡಿದರೆ ಆ ಪಾಪವು ವಜ್ರಲೇಪದಂತೆ ಶಾಶ್ವತವಾಗಿರುತ್ತದೆ.
6. हस्तस्य भूषणं दानं सत्यं कण्ठस्य भूषणम्।
श्रोत्रस्य भूषणं शास्त्रं भूष्हणै: किं प्रयोजनम्॥
ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಮ್।
ಶ್ರೋತೃಸ್ಯ ಭೂಷಣ೦ ಶಾಸ್ತ್ರ೦ ಭೂಷಣೈ: ಕಿ೦ ಪ್ರಯೋಜನಮ್॥
ಕೈಗೆ ದಾನವೇ ಆಭರಣ,ಸತ್ಯ ನುಡಿಯುವುದೇ ಕಂಠಕ್ಕೆ ಭೂಷಣ. ಕಿವಿಗೆ ಶಾಸ್ತ್ರ ಶ್ರವಣವೇ ಆಭರಣ. ಸಾಮಾನ್ಯ ಆಭರಣಗಳಿಂದ ಏನು ಪ್ರಯೋಜನ?
7. मातृवत् परदारॆषु परद्रव्यॆषु लोष्टवत् ।
आत्मवत् सर्व भूतेषु य: पश्यति स: पण्डित: ॥
ಮಾತೃವತ್ ಪರದಾರೇಷು ಪರದ್ರವ್ಯೇಷು ಲೊಷ್ಟವತ್ ।
ಆತ್ಮವತ್ ಸರ್ವ ಭೂತೇಷು ಯ: ಪಶ್ಯತಿ ಸ: ಪಂಡಿತ: ||
ಪರಸ್ತ್ರೀಯರನ್ನು ತಾಯಿಯಂತೆ , ಪರದ್ರವ್ಯವನ್ನು ಮಣ್ಣಿನಂತೆ ,ಎಲ್ಲಾ ಜೀವಿಗಳನ್ನು ತನ್ನಂತೆ ಕಾಣುವವನು ಪಂಡಿತ ನು.
8. यथा चित्तं तथा वाच: यथा वाचस्तथा क्रिया ।
चित्ते वाचि क्रियायां च साधूनामेकरूपता॥
ಯಥಾ ಚಿತ್ತ0 ತಥಾ ವಾಚ: ಯಥಾ ವಾಚಸ್ತಥಾ ಕ್ರಿಯಾ।
ಚಿತ್ತೇ ವಾಚಿ ಕ್ರಿಯಾಯಾ೦ ಚ ಸಾಧೂನಾಮೇಕರೂಪತಾ॥
ಸಜ್ಜನರು ಮನಸ್ಸಿನಲ್ಲಿರುವುದನ್ನೇ ಹೊರಗೆ ಮಾತುಗಳಲ್ಲಿ ತೋರಿಸುತ್ತಾರೆ. ಮಾತಿನಂತೆ ಅವರ ಕೃತಿಯೂ ಇರುತ್ತದೆ. ಮನಸ್ಸು ,ಮಾತು, ಕೃತಿಗಳಲ್ಲಿ ಅವರು ಯಾವಾಗಲೂ ಒಂದೇ ಬಗೆಯಾಗಿ ಇರುತ್ತಾರೆ.
............................................................................................................................................
No comments:
Post a Comment