ಹಾಡಲು ಕಲಿಯಿರಿ(CLICK HERE TO LEARN THIS SONG)
ಗುರುವಿನ
ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ|
ಪರಿ
ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ||
ಆರು ಶಾಸ್ತ್ರವನೋದಿದರೇನು ನೂರಾರು ಪುರಾಣವ ಮುಗಿಸಿದರೇನು
ಸಾಧು
ಸಜ್ಜನರ ಸಂಗವ ಮಾಡದೆ ಧೀರನೆಂದು ತಾ ತಿರುಗಿದರೇನು||1||
ಕೊರಳೊಳು
ಮಾಲೆ ಧರಿಸಿದರೇನು ಬೆರಳೊಳು ಜಪಮಣಿ ಎಣಿಸಿದರೇನು
ಮರಳಿ
ಮರಳಿ ತಾ ಹೊರಳಿ ಬೂದಿಯೊಳು ಮರುಳನಂತಾಗಿ ತಿರುಗಿದರೇನು ||2||
ನಾರಿಯ
ಭೋಗ ಅಳಿಸಿದರೇನು ಶರೀರ ಸುಖವನು ಬಿಡಿಸಿದರೇನು
ಮಾರಜನಕ
ಶ್ರೀ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ||3||
......................................................................................................
Also See:
ಕೂಸಿನ ಕಂಡೀರಾ | KUSINA KANDIRA SONG LYRICS IN KANNADA
No comments:
Post a Comment