Jul 31, 2019

ಶಿವ ಶಿವ ಶಿವ ಎನ್ನಿರೊ : SHIVA SHIVA SHIVA ENNIRO, LORD SHIVA SONG LYRICS IN KANNADA


ಶಿವ ಶಿವ ಶಿವ ಎನ್ನಿರೊ



ಶಿವ ಶಿವ ಶಿವ ಎನ್ನಿರೊಮೂಜಗದವರೆಲ್ಲ
ಶಿವ ಶಿವ ಶಿವ ಎನ್ನಿರೊ ||
ಆಗಮ ಸಿದ್ಧಾಂತ ಮೂಲದ ಜಪವಿದು
ರೋಗದ ಮೂಲವ ಕೆಡಿಪ ಔಷಧವಿದು
ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ
ತನುಮನ ಪ್ರಾಣವ ವ್ಯರ್ಥವ ಮಾಡದೆ ||

ಗುರುಲಿಂಗ ಜಂಗಮ ಅರಿಯಬೇಕಾದರೆ
ಪರಮಾತ್ಮನ ನೀವು ತಿಳಿಯಬೇಕಾದರೆ
ಪೃಥ್ವಿಗೆ ಸದ್ಗುರು ಆಗಬೇಕಾದರೆ ...ನೀವು
ತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ||
........................................................................

ಹಾಡಲು ಕಲಿಯಿರಿ(LEARN HOW TO SING THIS SONG)





Jul 30, 2019

Manasa Vandipe ಮನಸಾ ವಂದಿಪೆ ಗಣನಾಯಕ| LORD GANESHA SONG LYRICS



    ಮನಸಾ ವಂದಿಪೆ ಗಣನಾಯಕ




ರಚನೆ : ಆರ್ ಕೆ ಪದ್ಮನಾಭ
ರಾಗ : ಮಾಯಾ ಮಾಳವ ಗೌಳ
ತಾಳ : ಆದಿ ತಾಳ

ಮನಸಾ ವಂದಿಪೆ ಗಣನಾಯಕ
ಶಿರಬಾಗಿ ನಮಿಸುವೆ ಸಿದ್ದಿ ವಿನಾಯಕ ||

ಸಂಗೀತ ಸೌಧದ ಬಾಗಿಲು ತೆರೆದು
ಪ್ರಣವ ನಾದದ ಉಪದೇಶ ಕೊಡು ತಂದೆ ||||

ರಾಗ ಲಯ ಜ್ಞಾನ ಷೋಡಶ ಶ್ರುತಿ ಜ್ಞಾನ
ವರ್ಣಾಲಂಕಾರ ಜ್ಞಾನ ಕೃತಿ ಕೀರ್ತನ ಜ್ಞಾನ
ಭಕ್ತಿ ಭಾವ ಜ್ಞಾನ ಬಹುಭಾಷಾ ಜ್ಞಾನ
ಕೊಟ್ಟು ಸಲಹಬೇಕು ಪದ್ಮನಾಭ ದಾಸಗೆ || ||

...,....,.,.......,..................................... 

Manasa vandipe gananayaka
Manasa vandipe gananayaka |
Shirabaagi namisuve sidhi vinayaka ||

Sangeetha soudhada baagilu theredu
Pranava naadada upadesha kodu thande||

Raaga laya jnaana shodasha shruti jnaana
Varnaalankaara jnaana kriti keerthana jnaana |
Bhakthi bhaava jnaana bahubhaashaa jnaana
Kottu salahabeko padmanaabha daasage ||

................ .............................................. .......... 


ಹಾಡಲು ಕಲಿಯಿರಿ(LEARN HOW TO SING THIS SONG)



Jul 29, 2019

bandhisenna nee : ಬಂಧಿಸೆನ್ನ ನೀ ನಾದ ಕೋಟೆಯಲ್ಲಿ SONG ON LORD SARASWATI



ಬಂಧಿಸೆನ್ನ ನೀ ನಾದ ಕೋಟೆಯಲ್ಲಿ 



ರಚನೆ : ಆರ್ ಕೆ ಪದ್ಮನಾಭ
ರಾಗ : ಅಭೇರಿ
ತಾಳ : ಆದಿ ತಾಳ
.....................

ಬಂಧಿಸೆನ್ನ  ನೀ ನಾದ ಕೋಟೆಯಲ್ಲಿ
ನಾದ ದೇವತೇ ಶ್ರೀ ಮಾತೇ  ।।

ಸಂಗೀತದಾಅಂತರ್ಯ ಎಟುಕದಾಗಿದೆ ಎನಗೆ
ಶಾಸ್ತ್ರ ಜಟಿಲತೆಯ  ಬಿಡಿಸಲಾಗದು ತಾಯೆ  ।।

ಸಕಲ ಸಾಧನೆಯನು ಮಾಡುತಿಹೆ ಮಾತೆ
ಲಯ ಖಚಿತವಾದರೂ ನಾದ ಸೌಖ್ಯ ಸಿಗಲಿಲ್ಲ  ।।
ಮಾತು ನೀನೆ ಧಾತುವು ನೀನೆ  ।।
ಸ್ವರವೂ ನೀನೆ ಲಯವೂ ನೀನೆ  ।।
ಕೃಪಾಹೀನನಾದ ಪದ್ಮನಾಭ ದಾಸಗೆ
ಗೀತೋಪದೇಶ ನೀಡಿ ....
ಸಂಗೀತೋಪದೇಶ ನೀಡಿ
ಪೊರೆಯೆ ಬೇಡವೆ ತಾಯೆ ।।ಪ।।

..................................................


Also See:


Jul 7, 2019

ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು| HRADAYANTARAALADALI ADAGIRUVA |NATURE SONG

ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು   


ಹೆ :     ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು  ನನ್ನ ನಲ್ಲ
ಗ :      ಬರಿಯ ನೋವುಗಳಲ್ಲ  ಭಯದ ಆತಂಕಗಳು ಕಾಡುತಿವೆ ವಿಶ್ವವೆಲ್ಲಾ


ಹೆ :     ನೀಲಿ ಗಗನದ ತುಂಬಾ ನೀಲಿಯೇ ಏಕಿಲ್ಲ
          ಯಾಕಿಂಥ ಮಲಿನ ಮುಸುಕು
ಗ :      ನಿರ್ಜೀವ ಯಂತ್ರಗಳು ಕಪ್ಪಾದ ಹೊಗೆಚೆಲ್ಲಿ
           ನೀಲಿ  ಮಾಸಿತು ನನ್ನ ನಲ್ಲೆ ||


ಹೆ :     ವಾಯುಮಂಡಲದಲ್ಲಿ ಆಮ್ಲಜನಕವು ಎಲ್ಲಿ
           ಜೀವ ಕುಲಕೆ ಯಾಕೆ ಬವಣೆ
ಗ :      ಸಸ್ಯಶಾಮಲೆಯನ್ನು ಕೊಚ್ಚಿಕೊಂದರು ನಲ್ಲೆ
          ಎಲ್ಲಿ ಬಂದಿತು ಸ್ವಚ್ಛ ಗಾಳಿ   ||

ಹೆ :    ಆನೆ ಸಿಂಹಗಳೆಲ್ಲ ಎಲ್ಲಿ ಹೋದವು ನಲ್ಲ 
         ಯಾಕೆ ಕೋಗಿಲೆಗೆ ಮೂಕ ನೋವು
ಗ :      ನೆಟ್ಟ ಕಾಡುಗಳೆಲ್ಲಾ ಕೆಟ್ಟ ಕೈಗಳ ಬಲೆಗೆ
          ಚಿವುಟಿ ಹೋಯಿತು ನನ್ನ ನಲ್ಲೆ  ||

............................................