ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು
ಹೆ : ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು
ನನ್ನ ನಲ್ಲ
ಗ : ಬರಿಯ ನೋವುಗಳಲ್ಲ ಭಯದ ಆತಂಕಗಳು ಕಾಡುತಿವೆ ವಿಶ್ವವೆಲ್ಲಾ
ಹೆ : ನೀಲಿ
ಗಗನದ ತುಂಬಾ ನೀಲಿಯೇ ಏಕಿಲ್ಲ
ಯಾಕಿಂಥ ಮಲಿನ ಮುಸುಕು
ಗ : ನಿರ್ಜೀವ ಯಂತ್ರಗಳು ಕಪ್ಪಾದ ಹೊಗೆಚೆಲ್ಲಿ
ಗ : ನಿರ್ಜೀವ ಯಂತ್ರಗಳು ಕಪ್ಪಾದ ಹೊಗೆಚೆಲ್ಲಿ
ನೀಲಿ ಮಾಸಿತು ನನ್ನ ನಲ್ಲೆ
||
ಹೆ : ವಾಯುಮಂಡಲದಲ್ಲಿ ಆಮ್ಲಜನಕವು ಎಲ್ಲಿ
ಜೀವ ಕುಲಕೆ ಯಾಕೆ ಬವಣೆ
ಗ : ಸಸ್ಯಶಾಮಲೆಯನ್ನು ಕೊಚ್ಚಿಕೊಂದರು ನಲ್ಲೆ
ಗ : ಸಸ್ಯಶಾಮಲೆಯನ್ನು ಕೊಚ್ಚಿಕೊಂದರು ನಲ್ಲೆ
ಎಲ್ಲಿ ಬಂದಿತು ಸ್ವಚ್ಛ ಗಾಳಿ ||
ಹೆ : ಆನೆ ಸಿಂಹಗಳೆಲ್ಲ
ಎಲ್ಲಿ ಹೋದವು ನಲ್ಲ
ಯಾಕೆ ಕೋಗಿಲೆಗೆ ಮೂಕ ನೋವು
ಗ : ನೆಟ್ಟ
ಕಾಡುಗಳೆಲ್ಲಾ ಕೆಟ್ಟ ಕೈಗಳ ಬಲೆಗೆ
ಚಿವುಟಿ ಹೋಯಿತು ನನ್ನ ನಲ್ಲೆ ||............................................
No comments:
Post a Comment