ಬಂಧಿಸೆನ್ನ ನೀ ನಾದ ಕೋಟೆಯಲ್ಲಿ
ರಚನೆ
: ಆರ್ ಕೆ ಪದ್ಮನಾಭ
ರಾಗ
: ಅಭೇರಿ
ತಾಳ
: ಆದಿ ತಾಳ
.....................
ಬಂಧಿಸೆನ್ನ
ನೀ
ನಾದ ಕೋಟೆಯಲ್ಲಿ
ನಾದ
ದೇವತೇ ಶ್ರೀ ಮಾತೇ ।।
ಸಂಗೀತದಾಅಂತರ್ಯ
ಎಟುಕದಾಗಿದೆ ಎನಗೆ
ಶಾಸ್ತ್ರ
ಜಟಿಲತೆಯ ಬಿಡಿಸಲಾಗದು
ತಾಯೆ ।।
ಸಕಲ
ಸಾಧನೆಯನು ಮಾಡುತಿಹೆ ಮಾತೆ
ಲಯ
ಖಚಿತವಾದರೂ ನಾದ ಸೌಖ್ಯ ಸಿಗಲಿಲ್ಲ ।।
ಮಾತು
ನೀನೆ ಧಾತುವು ನೀನೆ ।।
ಸ್ವರವೂ
ನೀನೆ ಲಯವೂ ನೀನೆ ।।
ಕೃಪಾಹೀನನಾದ
ಪದ್ಮನಾಭ ದಾಸಗೆ
ಗೀತೋಪದೇಶ
ನೀಡಿ ....
ಸಂಗೀತೋಪದೇಶ
ನೀಡಿ
ಪೊರೆಯೆ
ಬೇಡವೆ ತಾಯೆ ।।ಪ।।
Also See:
No comments:
Post a Comment