ನವೋದಯದ ಕಿರಣ ಲೀಲೆ
(ನಿತ್ಯೋತ್ಸವ ಗೀತೆ)
ಸಾಹಿತ್ಯ : ಜಿ.ಎಸ್.ಶಿವರುದ್ರಪ್ಪ
ನವೋದಯದ ಕಿರಣ ಲೀಲೆ ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ ಶುಭೋದಯವ
ತೆರೆದಿದೆ||
ನದ ನದಿಗಳ ನೀರಿನಲ್ಲಿ ಗಿರಿ ವನಗಳ ಮುಡಿಗಳಲ್ಲಿ
ಶಿಲ್ಪ ಕಲಾ ಗಾನ ಕಾವ್ಯ ಗುಡಿ ಗೋಪುರ ಶಿಖರದಲ್ಲಿ
ಶುಭೋದಯವ ತೆರೆದಿದೆ ಶುಭೋದಯವ
ತೆರೆದಿದೆ||1||
ಮುಗ್ಧ ಜಾನಪದಗಳಲ್ಲಿ ದಗ್ಧ ನಗರ ಗೊಂದಲದಲಿ
ಯಂತ್ರ ತಂತ್ರದ ಅಟ್ಟಹಾಸ ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ ಶುಭೋದಯವ
ತೆರೆದಿದೆ||2||
ಹಳಬರಲ್ಲಿಹೊಸಬರಲ್ಲಿ
ಹಿರಿಯರಲ್ಲಿ ಕಿರಿಯರಲ್ಲಿ
ನವ ಚೇತನದುತ್ಸಾಹದ ಚಿಲುಮೆ ಚಿಮ್ಮುವೆಡೆಗಳಲ್ಲಿ
ಶುಭೋದಯವ ತೆರೆದಿದೆ ಶುಭೋದಯವ
ತೆರೆದಿದೆ||3||
.........................................................................................................................
No comments:
Post a Comment