ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
(ಭಾವಗೀತೆ)
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ||
ಕರಿ ಗೆಜ್ಜೆ ಕುಣಿಸುತ್ತಾ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ ದೀಪ ಹಚ್ಚ||1||
ಹಳೆಬಾಳು ಸತ್ತಿತ್ತು ಕೊಳೆ ಬಾಳು ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ ದೀಪ ಹಚ್ಚ||2||
ವಿಶ್ವ ಮೋಹಿತ ಚರಣ ವಿವಿಧ ವಿಶ್ವಾಭರಣ
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೊತೆ ಉಲಿ ಏಳಲಿ ದೀಪ ಹಚ್ಚ
ನನ್ನಂತರಂಗದಿ ನಂದದೆ ನಿಂದಿಪ
ನಂದಾದೀಪವಾಗಿರಲಿ ದೀಪ ಹಚ್ಚ||3||
Also See:
No comments:
Post a Comment