Jan 31, 2020

ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ (BANASIRI PRAKRITIYA VARADANA LYRICS IN KANNADA)



ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ

ಬನಸಿರಿ ಪ್ರಕೃತಿಯ ವರದಾನ
ಸಂಪನ್ಮೂಲದ ಉಗ್ರಾಣ
ಬನಸಿರಿ ಪ್ರಕೃತಿಯ ವರದಾನ
ಸಂಪನ್ಮೂಲದ ಉಗ್ರಾಣ
ವನ್ಯಜೀವಿಗಳಿಗೆ ಆಶ್ರಯಧಾಮ
ಗಿಡಮೂಲಿಕೆಗಳ ರಸ ತಾಣ… ರಸ ತಾಣ ..ರಸ ತಾಣ….||

ಕಾಡು ಮಾನವ ಸಂಬಂಧ
ಬೆಳೆದಿದೆ ಎಷ್ಟೋ ಯುಗದಿಂದ
ಕಾಡಿನ ಗರ್ಭದಿ ಬಂದವರು
ಕಾಡಿನ ಗರ್ಭದಿ ಬಂದವರು
ಕಾಡಿನ ಮಡಿಲಲಿ ಬೆಳೆದವರು
ಕಾಡಿನ ಮಡಿಲಲಿ ಬೆಳೆದವರು  ||1||

ವನಗಳೆ ಮುಕ್ತಿಯ ತಾಣಗಳು
ಬದುಕಿಗೆ ಶಕ್ತಿಯ ಕೇಂದ್ರಗಳು
ಕಾಡುಗಳಿಲ್ಲದೆ ನಾಡಿಲ್ಲ
ಕಾಡುಗಳಿಲ್ಲದೆ ನಾಡಿಲ್ಲ
ಕಾಡೆ ನಮ್ಮೊಡನಾಡಿಗಳು
ಕಾಡೆ ನಮ್ಮೊಡನಾಡಿಗಳು ||2||




Jan 24, 2020

ಶೃಂಗೇರಿ ಶಾರದೆ ದೇವಿ ಕರುಣೆ ಬಾರದೆ(SHRINGERI SHARADE SONG LYRICS)




ಶೃಂಗೇರಿ ಶಾರದೆ


ಶೃಂಗೇರಿ ಶಾರದೆ ದೇವಿ ಕರುಣೆ ಬಾರದೆ
ಶೃಂಗೇರಿ ಶಾರದೆ…..||

ನೀ ಕೃಪೆಯ ಬೀರದೆ ಎಮಗೆ ಜ್ಞಾನವು ಬರದೆ
ಕೃಪೆಯ ಬೀರೋ ದಾರಿ ತೋರು ವಿದ್ಯಾ ವಾರಿಧೆ||1||

ಮನೋವಾಂಚಿತ ವಾರಿಧೆ ಕೃಪಾಲೋಚನ ಪ್ರಮದೆ
ದಾಸ ಕೇಶವನ ಮನದೊಳ್ ನೆಲಸೇ ಶಾರದೆ||2||

CLICK HERE FOR THE SONG



Jan 16, 2020

ಓ ಎನ್ನು ಬಾ ಗಣಪ (O ENNU BAA GANAPA SONG LYRICS)



ಎನ್ನು ಬಾ ಗಣಪ


ಎನ್ನು ಬಾ ಗಣಪ ಕರೆದಾಗ
ಎನ್ನು ಬಾ ಗಣಪ|
ಓಂಕಾರ ನಾದ ಲೋಲ ಹೇ ಗಣಪ
ಓಂಕಾರ ರೂಪ ಹೇ ಗಣಪ||

ಮಾಯ ವಿನಾಶಕ ಮೂಷಿಕ ವಾಹನ
ಮಾತೃಭವಾನೀ ಪಾರ್ವತಿ ನಂದನ
ಮಹಾ ಗಣಪತೇ ಪರಮ ದಯಾಘನ
ಶಂಭೋ ನಂದನ ಕರೆವೆನು ನಾ…||1||

ಗಜಮುಖದವನೆ ಗಣಗಳಿಗೊಡೆಯ
ಮೊದಲ ಪೂಜೆಯನು ಪಡೆಯುವ ದೇವನೆ
ಆತ್ಮಲಿಂಗವನ್ನು ಧರೆಯಲ್ಲಿಟ್ಟನೇ
ಬಾಲ ಗಣೇಶನೆ ಕರೆವೆನು ನಾ..||2||


...............................................................................................................

O ENNU BAA GANAPA KAREDAAGA 
O ENNU BAA GANAPA

OMKAARA NAADA LOLA O GANAPA
OMKAARA ROOPA O GANAPA||

MAAYA VINAASHAKA MOOJAGA VANDYA
MAATRA BHAVAANI PAARVATHI NANDANA
MAHAA GANAPATHE PARAMA DAYAAGHANA 
SHAMBHO NANDANA KAREVENU NAA||1||

GAJAMUKHADAVANE GANAGALIGODEYA
MODALA POOJEYANU PADEYUVA DEVANE 
AATHMA LINGAVANU DHAREYALLITTANE
BAALA GANESHANE KAREVENU NAA ||2||
...................................................................................................................................


Also See :



Jan 14, 2020

ರಾಮ ರಾಮ ರಾಮ್ ರಾಮ್ ರಾಮ್(RAMA RAMA RAM RAM RAM LYRICS IN KANNADA)


ರಾಮ ಭಜನೆ



ರಾಮ ರಾಮ ರಾಮ್ ರಾಮ್ ರಾಮ್
ಜಯ ರಾಮ ರಾಮ ರಾಮ್ ರಾಮ್ ರಾಮ್
                    { ೨ಸಲ}

ದಶರಥ ನಂದನ ರಾಮ್ ರಾಮ್ ರಾಮ್
ದಶಮುಖ ಮರ್ದನ ರಾಮ್ ರಾಮ್ ರಾಮ್
               { ೨ಸಲ}
ಪಶುಪತಿ ರಂಜನ ರಾಮ್ ರಾಮ್ ರಾಮ್
ಪಾಪ ವಿಮೋಚನ ರಾಮ್ ರಾಮ್ ರಾಮ್
                  { ೨ಸಲ}


ರಾಮ ರಾಮ ರಾಮ್ ರಾಮ್ ರಾಮ್
ಜಯ ರಾಮ ರಾಮ ರಾಮ್ ರಾಮ್ ರಾಮ್
                    { ೨ಸಲ}


ಅನಾಥ ರಕ್ಷಕ ರಾಮ್ ರಾಮ್ ರಾಮ್
ಆಪತ್ಬಾಂಧವ ರಾಮ್ ರಾಮ್ ರಾಮ್
                    { ೨ಸಲ}
ಮೈಥಿಲಿ ನಂದನ ರಾಮ್ ರಾಮ್ ರಾಮ್
ಮಾರುತಿ ವಂದಿತ ರಾಮ್ ರಾಮ್ ರಾಮ್
                    { ೨ಸಲ}


ರಾಮ ರಾಮ ರಾಮ್ ರಾಮ್ ರಾಮ್
ಜಯ ರಾಮ ರಾಮ ರಾಮ್ ರಾಮ್ ರಾಮ್
                    { ೨ಸಲ}
..................................................................................


ಹಾಡಲು ಕಲಿಯಿರಿ(LEARN TO SING THIS SONG)


Also See:

Jan 11, 2020

ಸ್ಮೃತಿಪಟಲದಲ್ಲಿ ಹೊತ್ತಿರಲು ಜ್ವಾಲೆ | SMRATIPATALADALLI HOTTIRALU SONG LYRICS|




     ದೇಶಭಕ್ತಿಗೀತೆ

ಸ್ಮೃತಿಪಟಲದಲ್ಲಿ ಹೊತ್ತಿರಲು ಜ್ವಾಲೆ
ಧ್ವನಿ ಮೊಳಗುತಿಹುದು ಒಂದು|
ಇದು ನಮ್ಮ ಭೂಮಿ ಇದು ನಮ್ಮ ಭೂಮಿ
ಇದು ನಮ್ಮ ಭೂಮಿ ಎಂದು||

ಪ್ರತಿ ಪ್ರಾಂತ್ಯದಿಂದ ಗಿರಿ ಶಿಖರ ದಿಂದ
ಇತಿಹಾಸದ೦ಚಿನಿಂದ|
ಹಿರಿಬಾಳಿಗಾಗಿ ಕರೆ ಕೇಳುತಿಹುದು
ಪಾಂಚಜನ್ಯದಿಂದ||

ಸಿಂಧು ಗಂಗೆಯರು ಹರಿದು ಮೆರೆಯುವರು
ರತ್ನಭೂಮಿಯೆಂದು|
ಭೂಮಿಯಗಲದ ಬ್ರಹ್ಮಪುತ್ರ ಸಹ
ಸಾಲ್ವಲಹುದು ಎಂದು||

CLICK HERE FOR THE SONG

Jan 8, 2020

ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ |MUNJANEDDU KUMBARANNA LYRICS IN KANNADA,ENGLISH




ಮುಂಜಾನೆದ್ದು ಕುಂಬಾರಣ್ಣ

ಮುಂಜಾನೆದ್ದು ಕುಂಬಾರಣ್ಣ ಹಾಲು  ಬಾನುಂಡಾನ
ಹಾರ್ಯಾಡಿ ಮಣ್ಣಾ ತುಳಿದಾನ
ಹಾರಿ ಹಾರ್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ
ನಾರ್ಯಾರು ಹೊರುವಂತ ಐರಾಣಿ ||

ಹೊತ್ತಾರೆದ್ದು ಕುಂಬಾರಣ್ಣ ತುಪ್ಪ ಬಾನುಂಡಾನ
ಘಟೀಸಿ ಮಣ್ಣಾ ತುಳಿದಾನ
ಘಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ
ಮಿತ್ರೇರು ಹೊರುವಂತ ಐರಾಣಿ ||1||

ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ
ಗಿಂಡಿಲಿ ತಂದೀವ್ನಿ ತಿಳಿದುಪ್ಪ
ಗಿಂಡಿಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ
ತಂದಿಡು ನಮ್ಮ ಐರಾಣಿ ||2||

ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು
ಕೊಡದ ಮ್ಯಾಲೇನ ಬರೆದಾಳ
ಕೊಡದ ಮ್ಯಾಲೇನ ಬರೆದಾಳ ಕಲ್ಯಾಣದ
ಶರಣ ಬಸವನ ನಿಲಿಸ್ಯಾಳ||3||


......................................................................................................................

.....................................................................................................................................

MUNJAANEDDU KUMBAARANNA HAALU BAANUNDANA
HAARYAADI MANNA TULIDAANA
HAARI HAARYAADI MANNA TULIYUTTA MAADYAANA
NAARYAARU HORUVANTHA AIRAANI||

HOTTAREDDU KUMBAARANNA TUPPA BAANUNDAANA
GHATTISI MANNA TULIDAANA
GHATTISI MANNA TULIYUTHA MAADYAANA
MITRERU HORUVANTHA AIRAANI||

AKKI HITTU NAAVU TUMBKONDU TANDEEVI
GINDILI TANDIVNI TILIDUPPA
GINDILI TANDIVNI TILIDUPPA KUMBAARANNA
TANDIDU NAMMA AIRAANI||

KUMBAARANNA NA MADADI KADADHAAGA KAI ITTU 
KODADA MYAALENA BAREDAALA
KODADA MYALENA BAREDAAL KALYAANADA 
SHARANA BASAVANA SINLISYAALA||

................................................................................................................................

Also See:

Jan 5, 2020

O PANDURANGA PRABHO VITTALA LYRICS IN KANNADA |ಓ ಪಾಂಡುರಂಗ ಪ್ರಭೋ ವಿಠಲ |



ಪಾಂಡುರಂಗ ಪ್ರಭೋ ವಿಠಲ


ಪಾಂಡುರಂಗ ಪ್ರಭೋ ವಿಠಲ 
ವೇಣು ಗೋಪಾಲ ರುಕ್ಮಿಣಿ ಲೋಲ|
ನಿನ್ನೀ ಪಾವನ ಪಾದಗಳ ಮಹಿಮೆ ಬಣ್ಣಿಸೆ ಮಾತುಗಳ
ಕಾಣೆನು ತಂದೆ ವಿಠಲ||

ಆಕಾಶ ಭೂಮಿಗಳ ಅಳೆದಂತ ಪಾದ
ಕಾಳಿಂಗನಾ ಶಿರದಿ ಕುಣಿದಾಡಿದಪಾದ
ಕಾನನದಿ ಕಲ್ಲಾದ ಮುನಿ ಸತಿಗೆ ಜೀವವ ತಂದ
ಪಾವನ ಶ್ರೀ ಪಾದವ ನಂಬಿದೆನಯ್ಯ||1||

ಶ್ರೀದೇವಿ ಪೂಜಿಸಿದ ಶ್ರೀ ಹರಿಯ ಪಾದ
ಭಕುತರಿಗೆ ಮುಕುತಿಯನು ಕೊಡುವಂತ ಪಾದ
ಪಾಪವನು ಕಳೆವಂತ ಸುರಗಂಗೆ ಜನ್ಮಿಸಿದಂತ
ರಂಗನ ಶ್ರೀಪಾದವ ನಂಬಿದೆನಯ್ಯ||2||