ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ
ಬನಸಿರಿ ಪ್ರಕೃತಿಯ ವರದಾನ
ಸಂಪನ್ಮೂಲದ ಉಗ್ರಾಣ
ಬನಸಿರಿ ಪ್ರಕೃತಿಯ ವರದಾನ
ಸಂಪನ್ಮೂಲದ ಉಗ್ರಾಣ
ವನ್ಯಜೀವಿಗಳಿಗೆ ಆಶ್ರಯಧಾಮ
ಗಿಡಮೂಲಿಕೆಗಳ ರಸ ತಾಣ… ರಸ ತಾಣ ..ರಸ ತಾಣ….||
ಕಾಡು ಮಾನವ ಸಂಬಂಧ
ಬೆಳೆದಿದೆ ಎಷ್ಟೋ ಯುಗದಿಂದ
ಕಾಡಿನ ಗರ್ಭದಿ ಬಂದವರು
ಕಾಡಿನ ಗರ್ಭದಿ ಬಂದವರು
ಕಾಡಿನ ಮಡಿಲಲಿ ಬೆಳೆದವರು
ಕಾಡಿನ ಮಡಿಲಲಿ ಬೆಳೆದವರು ||1||
ವನಗಳೆ ಮುಕ್ತಿಯ ತಾಣಗಳು
ಬದುಕಿಗೆ ಶಕ್ತಿಯ ಕೇಂದ್ರಗಳು
ಕಾಡುಗಳಿಲ್ಲದೆ ನಾಡಿಲ್ಲ
ಕಾಡುಗಳಿಲ್ಲದೆ ನಾಡಿಲ್ಲ
ಕಾಡೆ ನಮ್ಮೊಡನಾಡಿಗಳು
ಕಾಡೆ ನಮ್ಮೊಡನಾಡಿಗಳು
||2||
Saahitya baredavaru yaaru thiLisi?
ReplyDeleteಕ್ಷಮಿಸಿ, ಗೀತೆ ಬರೆದವರ ಹೆಸರು ಗೊತ್ತಿಲ್ಲ.
Delete