ಓ ಪಾಂಡುರಂಗ ಪ್ರಭೋ ವಿಠಲ
ಓ
ಪಾಂಡುರಂಗ ಪ್ರಭೋ ವಿಠಲ
ವೇಣು
ಗೋಪಾಲ ರುಕ್ಮಿಣಿ ಲೋಲ|
ನಿನ್ನೀ
ಪಾವನ ಪಾದಗಳ ಮಹಿಮೆ ಬಣ್ಣಿಸೆ ಮಾತುಗಳ
ಕಾಣೆನು
ತಂದೆ ವಿಠಲ||
ಆಕಾಶ
ಭೂಮಿಗಳ ಅಳೆದಂತ ಪಾದ
ಕಾಳಿಂಗನಾ
ಶಿರದಿ ಕುಣಿದಾಡಿದಪಾದ
ಕಾನನದಿ
ಕಲ್ಲಾದ ಮುನಿ ಸತಿಗೆ ಜೀವವ ತಂದ
ಪಾವನ
ಶ್ರೀ ಪಾದವ ನಂಬಿದೆನಯ್ಯ||1||
ಶ್ರೀದೇವಿ
ಪೂಜಿಸಿದ ಶ್ರೀ ಹರಿಯ ಪಾದ
ಭಕುತರಿಗೆ
ಮುಕುತಿಯನು ಕೊಡುವಂತ ಪಾದ
ಪಾಪವನು
ಕಳೆವಂತ ಸುರಗಂಗೆ ಜನ್ಮಿಸಿದಂತ
ರಂಗನ ಶ್ರೀಪಾದವ
ನಂಬಿದೆನಯ್ಯ||2||
No comments:
Post a Comment