ಹಟ್ಟಿಯಂಗಡಿಯ ವಾಸ
ಹಟ್ಟಿಯಂಗಡಿಯ ವಾಸ ಗಣನಾಯಕ
ಮುಟ್ಟಿ ಪೂಜೆ ಮಾಡುವಾಸೆ ಓ ವಿನಾಯಕ
ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||
ಸಂಕಷ್ಟಿ ದಿನದಲ್ಲಿ ಸಂಕಷ್ಟ ಪರಿಹರಿಸೋ
ಉತ್ತಿಷ್ಥ ಗಣಪತಿ ನೀನಾಗಿ ಬಂದಿರುವೆ
ಭಕ್ತರ ಕಾಮಧೇನು ನಮಗಾಗಿ ನೀನಿರಲು
ನಿತ್ಯವು ನಾಮ ಸ್ಮರಣೆ ಮಾಡುವಾಸೆಯಾಗಿದೆ
ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||1||
ಭಾದ್ರಪದ ಶುಕ್ಲಚೌತಿ ಮನೆ ಮನೆಗೂ ನಿನ್ನ ಮೂರ್ತಿ
ಕೊಂಡೊಯ್ದು ಪೂಜಿಪರು ಜಗವೆಲ್ಲ ನಿನ್ನ ಕೀರ್ತಿ
ಭಕ್ತಿಯ ಹೂ ಹಣ್ಣು ಗರಿಕೇಯ ಅರ್ಪಿಸಲು
ಮುಕ್ತಿಯ ದಾರಿ ತೋರಲೆಂದು ಬರುವ ದೇವನೆ
ಬಾರೋ ಗಣೇಶ ನಲಿದು ಬಾರೊ ಗಣೇಶ