Mar 5, 2020

ಹಟ್ಟಿಯಂಗಡಿಯ ವಾಸ ಗಣನಾಯಕ (HATTIANGADIYA VAASA SONG LYRICS IN KANNADA)




ಹಟ್ಟಿಯಂಗಡಿಯ ವಾಸ

ಹಟ್ಟಿಯಂಗಡಿಯ ವಾಸ ಗಣನಾಯಕ
ಮುಟ್ಟಿ ಪೂಜೆ ಮಾಡುವಾಸೆ ವಿನಾಯಕ
ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||

ಸಂಕಷ್ಟಿ ದಿನದಲ್ಲಿ ಸಂಕಷ್ಟ ಪರಿಹರಿಸೋ
ಉತ್ತಿಷ್ಥ ಗಣಪತಿ ನೀನಾಗಿ ಬಂದಿರುವೆ
ಭಕ್ತರ ಕಾಮಧೇನು ನಮಗಾಗಿ ನೀನಿರಲು
ನಿತ್ಯವು ನಾಮ ಸ್ಮರಣೆ ಮಾಡುವಾಸೆಯಾಗಿದೆ

ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||1||

ಭಾದ್ರಪದ ಶುಕ್ಲಚೌತಿ  ಮನೆ ಮನೆಗೂ ನಿನ್ನ ಮೂರ್ತಿ
ಕೊಂಡೊಯ್ದು ಪೂಜಿಪರು ಜಗವೆಲ್ಲ ನಿನ್ನ ಕೀರ್ತಿ
ಭಕ್ತಿಯ ಹೂ ಹಣ್ಣು ಗರಿಕೇಯ ಅರ್ಪಿಸಲು
ಮುಕ್ತಿಯ ದಾರಿ ತೋರಲೆಂದು ಬರುವ ದೇವನೆ

ಬಾರೋ ಗಣೇಶ ನಲಿದು ಬಾರೊ ಗಣೇಶ
ಬಾರೋ ಗಣೇಶ ಒಲಿದು ಬಾರೊ ಗಣೇಶ||2||

CLICK HERE FOR THE SONG

2 comments:

  1. Hello mam, i've got all the original songs from this album. Hope you remember that i had asked for the same and you had told me that u r also searching for the same. pls let me know how shall i send it?

    ReplyDelete
  2. oh, that's great!
    Do you have it in softcopy format or cassette?
    if its softcopy, can you please send it to my mail address?
    vidya.bijoor@gmail.com

    ReplyDelete