Mar 4, 2020

ಬಾನಿನಲ್ಲಿ ಮೂಡಿ ಬಂದ ಚಂದಮಾಮ(ಶಿಶುಗೀತೆ) : BANINALLI MOODI BANDA SONG LYRICS IN KANNADA



ಬಾನಿನಲ್ಲಿ ಮೂಡಿ ಬಂದ ಚಂದಮಾಮ
(ಶಿಶುಗೀತೆ)


ಬಾನಿನಲ್ಲಿ ಮೂಡಿ ಬಂದ ಚಂದಮಾಮ
ಮೂಡಿ ಬಂದ ಮೂಡಿ ಬಂದ ಚಂದಮಾಮ
ಕತ್ತಲನ್ನು ದೂಡಿ ನಿಂದ ಚಂದ ಮಾಮಾ ||

ಮೋಡದೊಡನೆ ಓಡಿ ಬಂದ ಚಂದಮಾಮ
ಓಡಿ ಬಂದ ಓಡಿ ಬಂದ ಚಂದಮಾಮ
ನಮ್ಮನ್ನು ನೋಡಿ ನಿಂದ ಚಂದ ಮಾಮಾ ||1||

ಮುಗಿಲ ಬೆಟ್ಟವೇರಿ ಬಂದ ಚಂದಮಾಮ
ಏರಿ ಬಂದ ಏರಿ ಬಂದ ಚಂದಮಾಮ
ತಾರೆಗಳನು ಸೇರಿ ನಿಂದ ಚಂದ ಮಾಮಾ ||2||

ತಂಪು ಬೆಳಕು ಬೀರಿ ಬಂದ ಚಂದಮಾಮ
ಬೀರಿ ಬಂದ ಬೀರಿ ಬಂದ ಚಂದಮಾಮ
ಜಗಕೆ ಚೆಲುವ ತೋರಿ ನಿಂದ ಚಂದ ಮಾಮಾ ||3||
....................................................................................

Also See:



No comments:

Post a Comment