Jun 14, 2020

ಜನ್ಮದಿನದ ಶುಭಾಶಯ: ಸಂಸ್ಕೃತ : HAPPY BIRTHDAY SONG IN SANSKRIT.

ಜನ್ಮದಿನದ ಶುಭಾಶಯ: ಸಂಸ್ಕೃತ

               (BIRTHDAY SONG IN SANSKRIT)


ಜನ್ಮದಿನಮಿದಂ ಅಯಿ ಪ್ರಿಯ ಸಖೇ

ಶಂತನೋತು ತೇ ಸರ್ವದಾ ಮುದಂ||

ಪ್ರಾರ್ಥಯಾಮಹೇ ಭವ ಶತಾಯುಷೀ

ಈಶ್ವರ ಸದಾ ತ್ವಾಂ ರಕ್ಷತು||

ಪುಣ್ಯ ಕರ್ಮಣಾ ಕೀರ್ತಿಮರ್ಜಯ

ಜೀವನಂ ತವ ಭವತು ಸಾರ್ಥಕಂ||

 

(ಓ ಪ್ರಿಯ ಬಂಧು/ಸಖ, ಈ ನಿನ್ನ ಜನ್ಮ ದಿನ ಯಾವಾಗಲು ಸಂತೋಷ , ಮಂಗಳವನ್ನು ತರಲಿ.

ನಿನ್ನ ದೀರ್ಘಾಯುಷ್ಯಕ್ಕಾಗಿ ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.

ದೇವರು ನಿನ್ನನ್ನು ಯಾವಾಗಲೂ ಕಾಪಾಡಲಿ.

ಯಾವಾಗಲೂ ಸತ್ಕಾರ್ಯಗಳನ್ನು ಮಾಡಿ, ಒಳ್ಳೆಯ ಕೀರ್ತಿ ಗಳಿಸುತ್ತಾ, ನಿನ್ನ ಜೀವನ ಸಾರ್ಥಕಗೊಳ್ಳಲಿ.)

 ………………………………………………………..

JANMA DINAMIDAM AYI PRIYA SAKHE

SHANTANOTU TE SARVADAA MUDAM

PRAARTHAYAAMAHE BHAVA SHATAAYUSHI |

ESHWARA SADAA TWAM CHA RAKSHATU

PUNYA KARMANA KIRTI MARJAYA

JIVANAM TAVA BHAVATU SAARTHAKAM||


....................................................................

ಹಾಡಲು ಕಲಿಯಿರಿ(LEARN HOW TO SING THIS SONG)


Jun 6, 2020

ರವೆ ಉಂಡೆ ರವೆ ಉಂಡೆ (ಶಿಶುಗೀತೆ) - RAVE UNDE RAVE UNDE SONG LYRICS IN KANNADA




ರವೆ ಉಂಡೆ ರವೆ ಉಂಡೆ

(ಶಿಶುಗೀತೆ)




ರವೆ ಉಂಡೆ ರವೆ ಉಂಡೆ ಡಬ್ಬದಲ್ಲಿ ಕಂಡೆ

ರವೆ ಉಂಡೆ ರವೆ ಉಂಡೆ ಡಬ್ಬದಲ್ಲಿ ಕಂಡೆ

ಅಪ್ಪ ಇಲ್ಲ ಅಂದುಕೊಂಡೆ ಅಮ್ಮ ಇಲ್ಲ ಅಂದುಕೊಂಡೆ

ಅಜ್ಜ ಇಲ್ಲ ಅಂದುಕೊಂಡೆ ಅಜ್ಜಿ ಇಲ್ಲ ಅಂದುಕೊಂಡೆ

ಬಾಯಲ್ಲೊಂದು ಕಚ್ಚಿಕೊಂಡೆ ಕೈಯಲ್ಲೊಂದು ಬಚ್ಚಿಟ್ಟುಕೊಂಡೆ

ಓಡಿ ಓಡಿ ಓಡಿ ಓಡಿ ಓಡಿ ಓಡಿ ಡಬ್ ಅಂತ ಬಿದ್ದೆ ||