ಕೋಡಗನ ಕೋಳಿ ನುಂಗಿತ್ತ
ರಚನೆ: ಸಂತ ಶಿಶುನಾಳ ಶರೀಫ಼
ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ||
ಆಡು ಆನೆಯ ನುಂಗಿ ಗೋಡೆ
ಸುಣ್ಣವ ನುಂಗಿ
ಆಡಲು ಬಂದ ಪಾತರದವಳ
ಮದ್ದಲೆ ನುಂಗಿತ್ತ ತಂಗಿ||1||
ಒಳ್ಳುಒನಕೆಯ ನುಂಗಿ ಕಲ್ಲು
ಗೂಟವ ನುಂಗಿ
ಮೆಲ್ಲಲು
ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತ ತಂಗಿ||2||
ಹಗ್ಗ
ಮಗ್ಗವ ನುಂಗಿ ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ
ಅಣ್ಣನನ್ನೇ ಮಣಿಯು ನುಂಗಿತ್ತ ತಂಗಿ||3||
ಗುಡ್ಡಗವಿಯನ್ನು ನುಂಗಿ ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ ತಂಗಿ
||4||
......................................................................................
Also See:
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ | KOOSINA KANDIRA SONG LYRICS IN KANNADA
ಗುರುವೆ ನಾನು ಒಂದು ಸೊನ್ನೆ lyrics- GURUVE NAANU ONDU SONNE LYRICS
No comments:
Post a Comment