May 28, 2022

ಅಂಬುಜ ವಾಸಿನಿ ಸುಂದರಿ ವಾಣಿ -ಸಾಹಿತ್ಯ |Ambuja vasini Sundari Vani | Lyrics in Kannada and English

 ಹಾಡಲು ಕಲಿಯಿರಿ(CLICK HERE TO LEARN THIS SONG)


ಅಂಬುಜ ವಾಸಿನಿ ಸುಂದರಿ ವಾಣಿ

ಸರಸ್ವತಿ ದೇವಿ ನಮೋಸ್ತುತೆ|

ಪುಸ್ತಕ ಧಾರಣಿ ಬುದ್ಧಿ ಪ್ರದಾಯಿನಿ

ವೀಣಾಪಾಣಿ ತ್ರಿನಯನಿ ಪಾಹಿ||

 

ನಾನಾಲಂಕೃತ ಮಣಿಮಯ ಭೂಷೆ

ಮಂದಹಾಸೆ ಮಾಂ ಪಾಹಿ ||1||

 

ವೇದಶಾಸ್ತ್ರ ನುತೆ ವಿಧಿ ಪ್ರಿಯ ಶುಭಗೆ

 ವಿದ್ಯಾವಾರಿಧಿ ಪಾಹಿ ಪಾಹಿ||2||

………………………………………………………….

Ambuja Vasini Sundari Vani

Saraswathi Devi Namosthuthe

Pusthaka Dhaarini Buddi Pradaayini

Veena Paani Thrinayani Paahi||


Naanaalankratha Manimaya Bhooshe

Mandahaase Maam Paahi||1||


Vedashaastranuthe Vidhi Priya Shubhage

Vidyaavaaridhi Paahi Paahi||2||

....................................................................................

Also See:

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

ಕಲಿಸು ಗುರುವೆ ಕಲಿಸು(ಸಾಹಿತ್ಯ)|KALISU GURUVE KALISU LYRICS IN KANNADA|GURU POORNIMA

May 18, 2022

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ(ಭಾವಗೀತೆ)| Irabeku Iruvante Toredu Savira Chinte| Lyrics in Kannada And English

                ಹಾಡಲು ಕಲಿಯಿರಿ(CLICK HERE TO LEARN THIS SONG)


ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ||||


ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ 

ಬೆಳಕಿನುಂಡೆಯ ಬಾನಿಗುರುಳು ಬಿಟ್ಟು 

ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು

ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||

ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ 

ತಣ್ಣಗಿನ ಆಸರೆಯ ನೆರಳ ಕೊಟ್ಟು 

ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ 

ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು||||


 ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು 

ಮರಿದುಂಬಿಗಳ ಪೊರೆವ ತೊಟ್ಟಿಲಾಗಿ

ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ

ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||

ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ 

ಹಾಲುತೆನೆಯಲಿ ಅಮೃತ ತುಂಬಿ ನದಿಯು 

ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ

ಹಾಗೆ ಕೊನೆಗಾಣಿಸು ಕೃಪೆಯನಿಟ್ಟು||||

......................................................................................................................................

Irabeku iruvanthe toredu saavira chinthe

male surisi haguraada mugilinanthe||


Thannodala taaregala gudisi raashiya maadi

belakinundeya baanigurulu bittu

hege mareyaaguvudo nirdhanika nattirulu

haage baalisu guruve karuneyittu||

Thaanu bisilali ninthu thanna bali baruvavage 

thannagina aasareya nerala kottu

hege geluvaaguvudo hasireleya honge mara 

haage baalisu guruve preetiyittu||1||


Thaanu kesarali kusiyutiddaroo taavareyu

maridumbigala poreva tottilaagi

hege thaaytanavannu preethiyali mereyuvudo

haage baalisu guruve karuneyittu||

daariyuddaku pairu naguvante neerunisi 

haalutheneyali amrutha thumbi nadiyu

hege doorada neeliyalli koneyaaguvudo

haage konegaanisu krupeyanittu||2||

.........................................................................................................

Also See:

ಅಂಬೆ ಅಂಬಿಕೆ ಜಗದಂಬಿಕೆ | AMBE AMBIKE JAGADAMBIKE SONG LYRICS IN KANNADA & ENGLISH |LORD DURGA

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು|Athitha Nodadiru Song Lyrics in Kannada|kannada savigana lyrics

May 7, 2022

ಸರಳ ಸುಭಾಷಿತಗಳು (ಅರ್ಥಸಹಿತ) - 7: ತಾಯಿ |SUBHASHITAS WITH MEANING -7 |SUBHASHITAS ON MOTHER

 

नास्ति मातृ समा छाया नास्ति मातृ समा गति:|

नास्ति मातृ समं त्राणं नास्ति मातृ समा प्रपा॥

 

ನಾಸ್ತಿ ಮಾತೃ ಸಮಾ ಛಾಯಾ

ನಾಸ್ತಿ ಮಾತೃ ಸಮಾ ಗತಿ:

ನಾಸ್ತಿ ಮಾತೃ ಸಮಂ ತ್ರಾ ಣ೦

ನಾಸ್ತಿ ಮಾತೃ ಸಮಾ ಪ್ರಪಾ||

 

ತಾಯಿಯಂತೆ ನೆರಳಿಲ್ಲ, ಆಶ್ರಯವಿಲ್ಲ, ರಕ್ಷಕರಿಲ್ಲ.
ಜಗತ್ತಿನಲ್ಲಿ ತಾಯಿಯಂತೆ ಜೀವ ನೀಡುವವರು ಯಾರೂ ಇಲ್ಲ.

....................................................................

मातृदेवीं नमस्तुभ्यम् मम जन्मदात्रीं त्वम् नमो नमः

बाल्यकाले मां पालनं कृत्वा मातृकाभ्यो नमाम्यहम्॥

ಮಾತೃದೇವಿ೦ ನಮಸ್ತುಭ್ಯಂ ಮಮ

ಜನ್ಮದಾತ್ರಿ೦ ತ್ವ೦ ನಮೋ ನಮ :

ಬಾಲ್ಯಕಾಲೇ ಮಾಮ್ ಪಾಲನಂ ಕೃತ್ವಾ

ಮಾತೃಕಾಭ್ಯೋ ತ್ವಂ ನಮಾಮ್ಯಹಂ||


ನನಗೆ ಜನ್ಮ ನೀಡಿದ ನನ್ನ ತಾಯಿಗೆ ನಾನು ನಮಸ್ಕರಿಸುತ್ತೇನೆ.

ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡಲು ಬಾಲ್ಯಕಾಲದಲ್ಲಿ

ನನ್ನ ಜೀವನಕ್ಕೆ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸೇರಿಸಿದ

ನನ್ನ ಇತರ ತಾಯಂದಿರಿಗೆ( ಮಹಿಳೆಯರಿಗೆ) ಕೂಡ ನಾನು

ನಮಸ್ಕರಿಸುತ್ತೇನೆ.

.....................................................................

उपाध्यायात् दशाचार्य आचार्याणां शतं पिता।

सहस्रं तु पितृन् माता गौरवेणातिरिच्यते॥


ಉಪಾಧ್ಯಾಯಾತ್ ದಶಾಚಾರ್ಯ,ಆಚಾರ್ಯಾಣಾ೦ ಶತ೦ ಪಿತಾ|

ಸಹಸ್ರಂ ತು ಪಿತೃನ್ ಮಾತಾ ಗೌರವೇಣಾತಿರಿಚ್ಯತೇ||


ಒಬ್ಬ ಆಚಾರ್ಯನು ಉಪಾಧ್ಯಾಯರಿಗಿಂತ ಹತ್ತು ಪಟ್ಟು ಶ್ರೇಷ್ಠ,
ತಂದೆ ನೂರು ಆಚಾರ್ಯರಂತೆ, ಮತ್ತು ಒಬ್ಬ ವ್ಯಕ್ತಿಯ ತಾಯಿಯು
ತಂದೆಗಿಂತ ಸಾವಿರ ಪಟ್ಟು ಶ್ರೇಷ್ಠರು.

........................................................................

May 4, 2022

ಗುರು ಅಷ್ಟಕಂ (ಆದಿ ಶಂಕರಾಚಾರ್ಯ): ಶರೀರಂ ಸುರೂಪಂ | lyrics in Kannada| Guru Ashtakam by Adi Shankaracharya|

 ಹಾಡಲು ಕಲಿಯಿರಿ(CLICK HERE TO LEARN THIS SONG)

ಶರೀರಂ ಸುರೂಪಂ ತಥಾ ವಾ ಕಲತ್ರಂ

ಯಶಶ್ಚಾರು ಚಿತ್ರಂ ಧನಂ ಮೇರು ತುಲ್ಯಂ

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||1||


ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ

ಗೃಹಂ ಬಾಂಧವಾ: ಸರ್ವ ಮೇತದ್ದಿ ಜಾತ೦

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||2||

 

ಷಡಂಗಾದಿ ವೇದೊ ಮುಖೇ ಶಾಸ್ತ್ರ ವಿದ್ಯಾ

ಕವಿತ್ವಾದಿ ಗದ್ಯ೦ ಸುಪದ್ಯ೦ ಕರೋತಿ

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||3||

 

ವಿದೇಶೇಷು ಮಾನ್ಯ ಸ್ವದೇಶೇಷು ಧನ್ಯ

ಸದಾಚಾರ ವೃತ್ತೇಷು ಮತ್ತೋ ನ ಚಾನ್ಯ:

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||4||

 

ಕ್ಷಮಾಮಂಡಲೇ ಭೂಪಭೂಪಾಲ ವೃ೦ದೈ:

ಸದಾ ಸೇವಿತಂ ಯಸ್ಯ ಪಾದಾರವಿಂದಂ

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||5||

 

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್

ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||6||

 

ನ ಭೋಗೇ ನ ಯೋಗೇ ನ ವಾ ವಾಜಿರಾಜೌ

ನ ಕಾಂತಾ ಮುಖೇ ನೈವ ವಿತ್ತೇಷು ಚಿತ್ತಂ

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||7||

 

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ

ನ ದೇಹೇ ಮನೋವರ್ತತೇ ಮೇ ತ್ವನರ್ಘ್ಯೇ

ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ||8||

 

 ಗುರೋರಷ್ಟಕಂ ಯ: ಪಠೇತ್ ಪುಣ್ಯ ದೇಹೀ

ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ

ಲಭೇದ್ವಾಂಛಿತಾರ್ಥ೦ ಪದ೦ ಬ್ರಹ್ಮ ಸಂಜ್ಞ೦

ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನ೦||

..........................................................................................

Also See:

GURU STOTRAM: ಗುರು ಸ್ತೋತ್ರಮ್ |SHLOKAS WITH MEANING

SONG ON GURU