Nov 28, 2021

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು|Athitha Nodadiru Song Lyrics in Kannada|kannada savigana lyrics

 

   ಹಾಡಲು ಕಲಿಯಿರಿ(CLICK HERE TO LEARN THIS SONG)

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

 ನಿದ್ದೆ ಬರುವಳು ಹೊದ್ದು ಮಲಗು ಮಗುವೆ| ಜೋ… ಜೋ ಜೋ ಜೋ|

ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೆ| ಜೋ… ಜೋ ಜೋ ಜೋ|

 

ಮಲಗು ಚೆಲ್ವಿನ ಸಿರಿಯೆ ಮಲಗು ಒಲ್ಮೆಯ ಸಿರಿಯೆ,

 ಮಲಗು ತೊಟ್ಟಿಲ ಸಿರಿಯೆ ದೇವರಂತೆ|

ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ ,

ಮಲಗು ಚಂದಿರನೂರ ಹೋಗುವೆಯಂತೆ|

ಮಲಗು ಚಂದಿರನೂರ ಹೋಗುವೆಯಂತೆ| ಮಲಗು ಚಂದಿರನೂರ ಹೋಗುವೆಯಂತೆ|

ಜೋ… ಜೋ ಜೋ ಜೋ|

 

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ,

 ಚಂದಿರನ ತಂಗಿಯರು ನಿನ್ನ ಕರೆದು

ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ , 

ವೀಣೆ ನುಡಿಸುವರಂತೆ ಸುತ್ತ ನೆರೆದು

ವೀಣೆ ನುಡಿಸುವರಂತೆ ಸುತ್ತ ನೆರೆದು| ವೀಣೆ ನುಡಿಸುವರಂತೆ ಸುತ್ತ ನೆರೆದು|

ಜೋ… ಜೋ ಜೋ ಜೋ|

 

ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ ,

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ

ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ , 

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ| ಪಟ್ಟದಾನೆಯ ಮೇಲೆ ಪುಟ್ಟ ಮಗುವೆ|

ಜೋ… ಜೋ ಜೋ ಜೋ|

.....................................................................................................

Also See:

ಶಿವ ಪಂಚಾಕ್ಷರಿ ಸ್ತೋತ್ರ(ನಾಗೇಂದ್ರ ಹಾರಾಯ)ಸಾಹಿತ್ಯ| SHIVA PANCHAKSHRA STORTRA ,NAGENDRA HARAYA SONG LYRICS IN KANNADA

ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ಸಾಹಿತ್ಯ|SHRICHAKRA DHARIGE SONG LYRICS |ಲಾಲಿ ಹಾಡು | ಕನ್ನಡ ಚಿತ್ರಗೀತೆ(ಸ್ವಾತಿ ಮುತ್ತು )

No comments:

Post a Comment