नास्ति मातृ समा छाया नास्ति मातृ समा गति:|
नास्ति मातृ समं त्राणं नास्ति मातृ समा प्रपा॥
ನಾಸ್ತಿ ಮಾತೃ ಸಮಾ ಛಾಯಾ
ನಾಸ್ತಿ ಮಾತೃ ಸಮಾ ಗತಿ:
ನಾಸ್ತಿ ಮಾತೃ ಸಮಂ ತ್ರಾ ಣ೦
ನಾಸ್ತಿ ಮಾತೃ ಸಮಾ ಪ್ರಪಾ||
ತಾಯಿಯಂತೆ ನೆರಳಿಲ್ಲ, ಆಶ್ರಯವಿಲ್ಲ, ರಕ್ಷಕರಿಲ್ಲ.
ಈ ಜಗತ್ತಿನಲ್ಲಿ ತಾಯಿಯಂತೆ ಜೀವ ನೀಡುವವರು ಯಾರೂ ಇಲ್ಲ.
....................................................................
मातृदेवीं नमस्तुभ्यम् मम जन्मदात्रीं त्वम् नमो नमः
बाल्यकाले मां पालनं कृत्वा मातृकाभ्यो नमाम्यहम्॥
ಮಾತೃದೇವಿ೦ ನಮಸ್ತುಭ್ಯಂ ಮಮ
ಜನ್ಮದಾತ್ರಿ೦ ತ್ವ೦ ನಮೋ ನಮ :
ಬಾಲ್ಯಕಾಲೇ ಮಾಮ್ ಪಾಲನಂ ಕೃತ್ವಾ
ಮಾತೃಕಾಭ್ಯೋ ತ್ವಂ ನಮಾಮ್ಯಹಂ||
ನನಗೆ ಜನ್ಮ ನೀಡಿದ ನನ್ನ ತಾಯಿಗೆ ನಾನು ನಮಸ್ಕರಿಸುತ್ತೇನೆ.
ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡಲು ಬಾಲ್ಯಕಾಲದಲ್ಲಿ
ನನ್ನ ಜೀವನಕ್ಕೆ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸೇರಿಸಿದ
ನನ್ನ ಇತರ ತಾಯಂದಿರಿಗೆ( ಮಹಿಳೆಯರಿಗೆ) ಕೂಡ ನಾನು
ನಮಸ್ಕರಿಸುತ್ತೇನೆ.
.....................................................................
उपाध्यायात् दशाचार्य आचार्याणां शतं पिता।
सहस्रं तु पितृन् माता गौरवेणातिरिच्यते॥
ಉಪಾಧ್ಯಾಯಾತ್ ದಶಾಚಾರ್ಯ,ಆಚಾರ್ಯಾಣಾ೦ ಶತ೦ ಪಿತಾ|
ಸಹಸ್ರಂ ತು ಪಿತೃನ್ ಮಾತಾ ಗೌರವೇಣಾತಿರಿಚ್ಯತೇ||
ಒಬ್ಬ ಆಚಾರ್ಯನು ಉಪಾಧ್ಯಾಯರಿಗಿಂತ ಹತ್ತು ಪಟ್ಟು ಶ್ರೇಷ್ಠ,
ತಂದೆ ನೂರು ಆಚಾರ್ಯರಂತೆ, ಮತ್ತು ಒಬ್ಬ ವ್ಯಕ್ತಿಯ ತಾಯಿಯು
ತಂದೆಗಿಂತ ಸಾವಿರ ಪಟ್ಟು ಶ್ರೇಷ್ಠರು.........................................................................
No comments:
Post a Comment