May 26, 2024

ಹೂವಿನ ದಳಗಳ ತುಂಬಾ (HOOVINA DALAGALA TUMBA)| ಪರಿಸರ ಗೀತೆ | ರಚನೆ: ಡಾ॥ ಜಿ.ಎಸ್. ಶಿವರುದ್ರಪ್ಪ

ಹಾಡಲು ಕಲಿಯಿರಿ(CLICK HERE TO LEARN THIS SONG)


ರಚನೆ: ಡಾ॥ ಜಿ.ಎಸ್. ಶಿವರುದ್ರಪ್ಪ 


ಹೂವಿನ ದಳಗಳ ತುಂಬಾ ಅಮ್ಮ ಯಾಕಿಷ್ಟೊಂದು ಧೂಳು|

ನಿನ್ನ ಹೆರಳಿಗೂ ದೇವರ ಮುಡಿಗೂ ಹೇಗೆ ಮುಡಿಸಲೇ ಹೇಳು

ಅಮ್ಮ ಹೇಗೆ ಮುಡಿಸಲೇ ಹೇಳು ||

 

ಸುತ್ತಲೂ ಕಾಣುವ ಗಿಡ ಮರವೆಲ್ಲಾ ಯಾಕಿಷ್ಟೊಂದು ಬೋಳು?

 ಹಾಡುವ ಹಕ್ಕಿಗೆ ಅಲೆಯುವ ದುಂಬಿಗೆ ಸ್ಥಳವಿನ್ನೆಲ್ಲಿದೆ ಹೇಳು?

 ಅಮ್ಮಸ್ಥಳವಿನ್ನೆಲ್ಲಿದೆ ಹೇಳು? ||1||

 

ಜುಳು ಜುಳು ಹರಿಯುವ ಹೊಳೆ ಹಳ್ಳಗಳ ನೀರ್ಯಾಕಿಷ್ಟು ಕೊಳಕು ?

ಈಜುವ ಮೀನಿಗೆ ದಾಹದ ಬಾಯಿಗೆ ಇಲ್ಲವೇ ಬದುಕುವ ಹಕ್ಕು?

 ಅಮ್ಮ ಇಲ್ಲವೇ ಬದುಕುವ ಹಕ್ಕು? ||2||

 

ಹಗಲು ಇರುಳು ಯಾಕಿಷ್ಷ್ಟೊಂದು ಸಾವಿರ ಗಾಲಿಗಳುರುಳು?

  ಗದ್ದಲದೊಳು ಕೇಳಿಸದಾಗಿದೆ ನಿನ್ನ ಜೋಗುಳದ ಕೊರಳು

ಅಮ್ಮ ನಿನ್ನ ಜೋಗುಳದ ಕೊರಳು ||3||

..................................................................................................................


No comments:

Post a Comment