Jun 1, 2024

ಬಾಳ ಒಳ್ಳೆವ್ರ್ ನಮ್ಮಿಸ್ಸು BHALA OLLEYAVRU NAM MISSU | CHILDREN SONG LYRICS IN KANNADA|

ಹಾಡಲು ಕಲಿಯಿರಿ(CLICK HERE TO LEARN THIS SONG)


 ರಚನೆ : ಎಮ್ ಎಸ್ ಲಕ್ಷ್ಮೀನಾರಾಯಣ ಭಟ್ಟ


ಬಾಳ ಒಳ್ಳೆವ್ರ್ ನಮ್ಮಿಸ್ಸು ಏನ್ ಹೇಳಿದ್ರು ಎಸ್ ಎಸ್ಸು

ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು
ಸ್ಕೂಲಿಗೆಲ್ಲ ಫೇಮಸ್ಸು||


ಜಾಣ ಮರಿ ಅಂತಾರೆ ಚಾಕ್ಲೆಟ್   ಗೀಕ್ಲೆಟ್  ಕೊಡ್ತಾರೆ 

ಜಾಣ ಮರಿ ಅಂತಾರೆಚಾಕ್ಲೆಟ್   ಗೀಕ್ಲೆಟ್  ಕೊಡ್ತಾರೆ 

ಗೊತ್ತಾ!

ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣೆ ಕಂದ ಅನ್ತಾರೆ

ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣೆ ಕಂದ ಅನ್ತಾರೆ||1|| 

 

ಆಟಕ್ ಬಾ ಅಂತಾರೆ ಆಟದ್ ಸಾಮಾನ್ ಕೊಡ್ತಾರೆ 

ಆಟಕ್ ಬಾ ಅಂತಾರೆ ಆಟದ್ ಸಾಮಾನ್ ಕೊಡ್ತಾರೆ 

ಗೊತ್ತಿಲ್ದಂಗೆ ಆಟದ್ ಜೊತೇ ಪಾಠನು ಕಲಿಸ್ತಾರೆ

ಗೊತ್ತಿಲ್ದಂಗೆ ಆಟದ್ ಜೊತೇ ಪಾಠನು ಕಲಿಸ್ತಾರೆ ||2||



ನಮ್ ಜೊತೇನೆ ಆಡ್ತಾರೆ  ಕೈ ಕೈ ಹಿಡಿದು ಹಾಡ್ತಾರೆ

ನಮ್ ಜೊತೇನೆ ಆಡ್ತಾರೆ  ಕೈ ಕೈ ಹಿಡಿದು ಹಾಡ್ತಾರೆ

ಕೋತಿ ಕರಡಿ ಕಥೆ ಹೇಳಿ ಸಿಕ್ಕಾಪಟ್ಟೆ ನಗಿಸ್ತಾರೆ 

ಕೋತಿ ಕರಡಿ ಕಥೆ ಹೇಳಿ  ಸಿಕ್ಕಾಪಟ್ಟೆ ನಗಿಸ್ತಾರೆ ||3||



ನಮ್ಮ ಸ್ಕೂಲ್  ಅಂಥ ಸ್ಕೂಲ್  ಇಲ್ಲ ನಮ್ಮ ಮಿಸ್ ಅಂಥ ಮಿಸ್ ಇಲ್ಲ

ನಮ್ಮ ಸ್ಕೂಲ್  ಅಂಥ ಸ್ಕೂಲ್  ಇಲ್ಲ ನಮ್ಮ ಮಿಸ್ ಅಂಥ ಮಿಸ್ ಇಲ್ಲ

ಅಮ್ಮನ ಹಾಗೆ  ಅವರುನು ಬಿಟ್ಟ ಬರೋಕೆ ಮನಸಿಲ್ಲ ..

ಅಮ್ಮನ ಹಾಗೆ  ಅವರುನು ಬಿಟ್ಟ ಬರೋಕೆ ಮನಸಿಲ್ಲ ..||4||


………………………………………………………………………………


No comments:

Post a Comment