Jun 27, 2025

ಕೈ ಮೀರಿ ಹೋದ ಮಾತಿಗೆ KAI MEERI HODA MAATHIGE SONG LYRICS IN KANNADA(PURANDARA DASA)

 

ಕೈ ಮೀರಿ ಹೋದ ಮಾತಿಗೆ ಹುಡುಕಾಡಬಾರದು ||

 

ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು |

ತನ್ನ ಪ್ರೀತಿಯಿಲ್ಲದ ಪತಿಯ ಕಂಡು ಹಿಗ್ಗಬಾರದು |

ಜಾರತ್ವ ಮಾಡೋ ಪತ್ನಿಯ ಕೂಡಿ ಅಳಬಾರದು |

ವೈರತ್ವ ಮಾಳ್ಪರ ಸೊಲ್ಲು ಕೇಳಬಾರದು |1|

 

ದುಷ್ಟೇ ಕರ್ಕಶಿ ಸ್ತ್ರೀಯ ಹೆಸರು ತೆಗೆಯಬಾರದು |

ಹತ್ತು ಮಂದಿಗೆ ಅಂಜದವನ ಸ್ನೇಹಿಸಬಾರದು

ಪಂಕ್ತಿಯಲಿ ಪರಪಂಕ್ತಿಯನು ಮಾಡಬಾರದು

ಮಂಕು ಜೀವನಾಗಿ ಮುಕ್ತಿ ಬೇಡಬಾರದು |2|

 

ಆಚಾರಹೀನನ ಮನೆಯೊಳು ಊಟ  ಮಾಡಬಾರದು |

ವಿಚಾರ ಇಲ್ಲದ ಸಭೆಯೊಳು ಕೂಡಬಾರದು |

ಪರಪುರುಷರಿದ್ದೆಡೆ ಒಬ್ಬಳಿರಬಾರದು

ಪುರಂದರ ವಿಠಲನ  ಧ್ಯಾನ ಮರೆಯಬಾರದು


Jun 24, 2025

ಎಲೆಗಳು ನೂರಾರು ಭಾವದ ಎಳೆಗಳು ನೂರಾರು | ELEGALU NOORARU LYRICS IN KANNADA | PATRIOTIC SONG

 ಹಾಡಲು ಕಲಿಯಿರಿ(CLICK HERE TO LEARN THIS SONG)

ಎಲೆಗಳು ನೂರಾರು ಭಾವದ ಎಳೆಗಳು ನೂರಾರು 

ಎಲೆಗಳ ಬಣ್ಣ ಒಂದೇ ಹಸಿರು |

ಜಾತಿ, ಭಾಷೆ, ಪಂಥ ಹಲವು 

ಅವುಗಳ ಹಿಂದೆ ಮಾತ್ರ ಒಂದೇ ಒಲವು 

ಸಾಗೋಣ ಒಟ್ಟಿಗೆ ಸಾಗೋಣ , ನಾವು ನೀವು ಸೇರಿ ಒಂದಾಗಿ 

ನೀಗೋಣ ಭಿನ್ನತೆ ನೀಗೋಣ , ಸಾವಿರ ಹೆಜ್ಜೆ ಒಂದೇ ಗುರಿಗಾಗಿ ||

 

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು 

ಬೆಳಕಿನ ಪರಿಗೆ ಒಂದೇ ಹೆಸರು |

ಸೂರ್ಯ, ಚಂದ್ರ, ಲಾಂದ್ರ, ಹಣತೆ,

ಅವುಗಳ ಹಿಂದೆ ಮಾತ್ರ ಒಂದೇ ಘನತೆ 

ತೆರೆಯೋಣ ಹೃದಯ ತೆರೆಯೋಣ  , ನಾವು ನೀವು ಸೇರಿ ಒಂದಾಗಿ 

ಮರೆಯೋಣ ಭೇದ ಮರೆಯೋಣ , ನದಿಗಳು ಕೂಡಿದ ಪ್ರೀತಿಯ ಕಡಲಾಗಿ ||1||

 

ಪದಗಳು ನೂರಾರು ಬದುಕಿನ ಹದಗಳು ನೂರಾರು 

ಪದಗಳ ಹಿಂದೆ ಒಂದೇ ಉಸಿರು  |

ಅಕ್ಕರೆಯಿಂದ ಒಟ್ಟಿಗೆ ಬಾಳೋಣ 

ಭಾರತ ಮಾತೆಗೆ ನಮ್ಮ ಪ್ರೀತಿಯ ತೋರೋಣ 

ಕಟ್ಟೋಣ ನಾಡನು ಕಟ್ಟೋಣ,  ನಾವು ನೀವು ಸೇರಿ ಒಂದಾಗಿ 

ಮುಟ್ಟೋಣ ಬಾನನು  ಮುಟ್ಟೋಣ, ತಾರೆಗಳೇ  ನಾಡಿನ ಸೂರಾಗಿ ||2||

 .................................................................................................................................................


Jun 20, 2025

ಗರುಡ ಗಮನ ತವ GARUDA GAMANA TAVA |POPULAR SONG ON LORD VISHNU lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)

ಗರುಡ ಗಮನ ತವ ಚರಣಕಮಲಮಿಹ

ಮನಸಿ ಲಸತು ಮಮ ನಿತ್ಯಂ |

ಗರುಡ ಗಮನ ತವ ಚರಣಕಮಲಮಿಹ

ಮನಸಿ ಲಸತು ಮಮ ನಿತ್ಯಂ |

ಮನಸಿ ಲಸತು ಮಮ ನಿತ್ಯಂ |

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಜಲಜನಯನ ವಿಧಿನಮುಚಿಹರಣಮುಖ

ವಿಬುಧ ವಿನುತ ಪದಪದ್ಮ |

ಜಲಜನಯನ ವಿಧಿನಮುಚಿಹರಣಮುಖ

ವಿಬುಧ ವಿನುತ ಪದಪದ್ಮ |

ವಿಬುಧ ವಿನುತ ಪದಪದ್ಮ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಭುಜಗಶಯನ ಭವ ಮದನಜನಕ ಮಮ

ಜನನಮರಣಭಯಹಾರಿ |

ಭುಜಗಶಯನ ಭವ ಮದನಜನಕ ಮಮ

ಜನನಮರಣಭಯಹಾರಿ |

ಜನನಮರಣಭಯಹಾರಿ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಶಂಖಚಕ್ರಧರ ದುಷ್ಟದೈತ್ಯಹರ

ಸರ್ವಲೋಕಶರಣ |

ಶಂಖಚಕ್ರಧರ ದುಷ್ಟದೈತ್ಯಹರ

ಸರ್ವಲೋಕಶರಣ |

ಸರ್ವಲೋಕಶರಣ |


ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಅಗಣಿತಗುಣಗಣ ಅಶರಣಶರಣದ

ವಿದಳಿತಸುರರಿಪುಜಾಲ |

ಅಗಣಿತಗುಣಗಣ ಅಶರಣಶರಣದ

ವಿದಳಿತಸುರರಿಪುಜಾಲ |

ವಿದಳಿತಸುರರಿಪುಜಾಲ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಭಕ್ತವರ್ಯಮಿಹ ಭೂರಿಕರುಣಯಾ

ಪಾಹಿ ಭಾರತೀತೀರ್ಥಂ |

ಭಕ್ತವರ್ಯಮಿಹ ಭೂರಿಕರುಣಯಾ

ಪಾಹಿ ಭಾರತೀತೀರ್ಥಂ |

ಪಾಹಿ ಭಾರತೀತೀರ್ಥಂ |

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

..........................................................................................................................

 


Jun 18, 2025

ಚನ್ನಪ್ಪ ಚನ್ನೆಗೌಡ (ಜಾನಪದ ಗೀತೆ) CHENNAPPA CHENNEGOWDA SONG LYRICS IN KANNADA |KANNADA SAVIGANA

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಚನ್ನಪ್ಪ ಚನ್ನೆಗೌಡ | ಕುಂಬಾರ ಮಾಡಿದ ಕೊಡನವ್ವ

ಚೆಂದಕೆ ತಂದೇನ ತಂಗಿ | ನೀರಿಗೆ ಬಂದೇನ || ||

 

ಬಾಳೀಯ ಬನದಾಗ  ನಾ  ಹೆಂಗ ಬಾಗಿ ಬರಲೆವ್ವ

ಬಾಳೀಯ ಗೊನೆ ಬಾಗಿ ನನ್ನ ಬೆನ್ನು ತಾಕಿತ್ತ||

ಆರು ಮೂರು ಒಂಭತ್ತು | ಒಂಭತ್ತು ಚಿತ್ರದ ಕೊಡನವ್ವ

ಚೆಂದಕ ತಂದೇನ ತಂಗಿ | ನೀರಿಗೆ ಬಂದೇನ ||1||

 

ನಿಂಬಿಯ ಬನದಾಗ ನಾ ಹೆಂಗ ನಂಬಿ ಬರಲೆವ್ವ

ಮುಳ್ಳು ತಾಕಿತ್ತ ತಂಗಿ ಸೆರಗು ಹರಿದಿತ್ತ ||

ಅಣ್ಣಿಗೆರೆ ಕೆರೆಯಾಗ ತೆರೆ ಹೊಡ್ದು ನೀರು ತರುವಾಗ

ಕಲ್ಲು ತಾಕಿತ್ತ ತಂಗಿ ಬಿಂದಿಗೆ ಒಡೆದಿತ್ತ||

ಅವ್ವಾ ಇವನ್ಯಾರ ಮಂಚದ ಮ್ಯಾಲ ಮಲಗ್ಯಾನ

ಗೊತ್ತಿಲ್ಲೇನವ್ವಾ ತಂಗಿ ಶಿಶುನಾಳ ಶರೀಫಜ್ಜ||2||

 

..............................................................................................................................................

Jun 11, 2025

ಸರಳ ಸುಭಾಷಿತ: ಅಲಂಕಾರ ಪ್ರಿಯೋ ವಿಷ್ಣು: | ಬ್ರಾಹ್ಮಣೋ ಭೋಜನ ಪ್ರಿಯ: | BRAHMANO BHOJANA PRIYA MEANING

    CLICK HERE FOR THE EXPLAINATION

अलङ्कारप्रियॊ विष्णु: अभिषेकप्रिय: शिव: ।

नमस्कारप्रियो भानु: ब्राह्मणो भोजन: प्रिय: ॥


ಅಲಂಕಾರ ಪ್ರಿಯೋ ವಿಷ್ಣು: ಅಭಿಷೇಕ ಪ್ರಿಯ: ಶಿವ: ।

ನಮಸ್ಕಾರಪ್ರಿಯೋ ಭಾನು:  ಬ್ರಾಹ್ಮಣೋ ಭೋಜನ ಪ್ರಿಯ: ॥


ವಿಷ್ಣುವು ಅಲಂಕಾರ ಪ್ರಿಯನು, ಶಿವನು ಅಭಿಷೇಕ ಪ್ರಿಯನು, ಸೂರ್ಯನು ನಮಸ್ಕಾರ ಪ್ರಿಯನು, ಬ್ರಾಹ್ಮಣನು ಭೋಜನ ಪ್ರಿಯನು.

ಪ್ರತಿಯೊಬ್ಬನಿಗೂ ಮುಖ್ಯವಾಗಿ ಬೇಕಾದದ್ದು ಸಂತೃಪ್ತಿ.

.............................................................................................................................................


Jun 4, 2025

ನಿಂಬಿಯ ಬನಾದ ಮ್ಯಾಗಳ SONG LYRICS IN KANNADA|KANNADA SAVIGANA LYRICS| NIMBIYA BANADA MYAGALA| FOLK SONG|

 ಹಾಡಲು ಕಲಿಯಿರಿ(CLICK HERE TO LEARN THIS SONG)

ನಿಂಬಿಯ ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ

ನಿಂಬಿಯ ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ

ನಿಂಬಿಯ ………||

ಎದ್ದೋನೆ ನಿಮಗ್ಯಾನ ಏಳುತಲೇ ನಿಮಗ್ಯಾನ
ಸಿದ್ಧರ ಗ್ಯಾನ ಶಿವುಗ್ಯಾನ ನಿಂಬಿಯ |
ಸಿದ್ದರ….ನೇ ಗ್ಯಾನ  ಶಿವುಗ್ಯಾನ ಮಾಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ, ನಿಂಬಿಯ….||1||

ಆರೇಲೆ ಮಾವಿನ ಬೇರಾಗೆ ಇರುವೋಳೆ
ವಾಲ್ಗದ ಸದ್ದಿಗೆ ಒದಗೋಳೆ, ನಿಂಬಿಯ…|
ವಾಲ್ಗದ ಸದ್ದಿಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡರ ಬಿಡಿಸವ್ವ, ನಿಂಬಿಯ….||2||

ಎಂಟೆಲೆ ಮಾವಿನ ದಂಟಾಗೆ ಇರುವೋಳೆ
ಗಂಟೆ ಸದ್ದಿಗೆ ಒದಗೋಳೆ, ನಿಂಬಿಯ
ಗಂಟೆಯ ಸದ್ದಿಗೆ ಒದಗೋಳೆ ಸರಸತಿಯೆ
ನಮ್ ಗಂಟಲ ತೊಡರ ಬಿಡಿಸಮ್ಮ, ನಿಂಬಿಯ…. ||3||

ರಾಗಿ ಬೀಸೋ ಕಲ್ಲೆ ರಾಜರ ಅಡಿಗಲ್ಲೇ
ರಾಯ ಅಣ್ಣಯ್ಯನ ಅರಮನೆ, ನಿಂಬಿಯ
ರಾಯ ಅಣ್ಣಯ್ಯನ ಅರಮನೆ ರಾಗಿಕಲ್ಲೆ
ನೀ ರಾಜಬೀದಿಗೆ ದಣಿ ದೊರೆ, ನಿಂಬಿಯ…||4||

ಕಲ್ಲವ್ವ ಮಾತಾಯಿ ಮೆಲ್ಲವ್ವ ರಾಗಿಯ
ಜಲ್ಲ ಜಲ್ಲನೆ ಉದುರವ್ವ, ನಿಂಬಿಯ
ಜಲ್ಲನೆ ಜಲ್ಲನೆ ಉದುರವ್ವ ನಾ ನಿನಗೆ
ಬೆಲ್ಲದಾರತಿಯ ಬೆಳಗೇನು, ನಿಂಬಿಯ…||5||

 

…………………………………………………………………………..