ಹಾಡಲು ಕಲಿಯಿರಿ(CLICK HERE TO LEARN THIS SONG)
ನಿಂಬಿಯ ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ
ನಿಂಬಿಯ ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ
ನಿಂಬಿಯ ………||
ಎದ್ದೋನೆ ನಿಮಗ್ಯಾನ ಏಳುತಲೇ ನಿಮಗ್ಯಾನ
ಸಿದ್ಧರ ಗ್ಯಾನ ಶಿವುಗ್ಯಾನ ನಿಂಬಿಯ
|
ಸಿದ್ದರ….ನೇ ಗ್ಯಾನ ಶಿವುಗ್ಯಾನ ಮಾಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ, ನಿಂಬಿಯ….||1||
ಆರೇಲೆ ಮಾವಿನ ಬೇರಾಗೆ ಇರುವೋಳೆ
ವಾಲ್ಗದ ಸದ್ದಿಗೆ ಒದಗೋಳೆ, ನಿಂಬಿಯ…|
ವಾಲ್ಗದ ಸದ್ದಿಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡರ ಬಿಡಿಸವ್ವ, ನಿಂಬಿಯ….||2||
ಎಂಟೆಲೆ ಮಾವಿನ ದಂಟಾಗೆ ಇರುವೋಳೆ
ಗಂಟೆ ಸದ್ದಿಗೆ ಒದಗೋಳೆ, ನಿಂಬಿಯ
ಗಂಟೆಯ ಸದ್ದಿಗೆ ಒದಗೋಳೆ ಸರಸತಿಯೆ
ನಮ್ ಗಂಟಲ ತೊಡರ ಬಿಡಿಸಮ್ಮ, ನಿಂಬಿಯ….
||3||
ರಾಗಿ ಬೀಸೋ ಕಲ್ಲೆ ರಾಜರ
ಅಡಿಗಲ್ಲೇ
ರಾಯ ಅಣ್ಣಯ್ಯನ ಅರಮನೆ, ನಿಂಬಿಯ
ರಾಯ ಅಣ್ಣಯ್ಯನ ಅರಮನೆ ರಾಗಿಕಲ್ಲೆ
ನೀ ರಾಜಬೀದಿಗೆ ದಣಿ ದೊರೆ, ನಿಂಬಿಯ…||4||
ಕಲ್ಲವ್ವ ಮಾತಾಯಿ ಮೆಲ್ಲವ್ವ ರಾಗಿಯ
ಜಲ್ಲ ಜಲ್ಲನೆ ಉದುರವ್ವ, ನಿಂಬಿಯ
ಜಲ್ಲನೆ ಜಲ್ಲನೆ ಉದುರವ್ವ ನಾ ನಿನಗೆ
ಬೆಲ್ಲದಾರತಿಯ ಬೆಳಗೇನು, ನಿಂಬಿಯ…||5||
…………………………………………………………………………..
No comments:
Post a Comment