ಹಾಡಲು ಕಲಿಯಿರಿ(CLICK HERE TO LEARN THIS SONG)
ಓ.... ಓ.....ಓ.....ಓ
, ಆ.....ಆ........ಆ........ ಆ
ಓ.... ಓ.....ಓ.....ಓ
, ಆ.....ಆ........ಆ........ ಆ
ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ಚಲನಚಿತ್ರ ಗೀತೆ, ಶಾಲಾ ಪ್ರಾರ್ಥನೆ, ಭಾವನಾತ್ಮಕ ಹಾಡುಗಳು, ಶ್ಲೋಕಗಳು ಮತ್ತು ಸುಭಾಷಿತಗಳು ಸೇರಿದಂತೆ ಎಲ್ಲಾ ರೀತಿಯ ಕನ್ನಡ ಹಾಡುಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಬ್ಲಾಗ್ ಉಪಯುಕ್ತವಾಗಿದೆ. ಹೆಚ್ಚಿನ ಹಾಡುಗಳ ಸಾಹಿತ್ಯದ ಕೊನೆಯಲ್ಲಿ ಹಾಡನ್ನು ಕಲಿಯಲು ಅನೂಕೂಲವಾಗುವಂತೆ, ಯು ಟ್ಯೂಬ್ ಲಿಂಕ್ ಅನ್ನು ಕೊಡಲಾಗಿದೆ.
ಹಾಡಲು ಕಲಿಯಿರಿ(CLICK HERE TO LEARN THIS SONG)
ಓ.... ಓ.....ಓ.....ಓ
, ಆ.....ಆ........ಆ........ ಆ
ಓ.... ಓ.....ಓ.....ಓ
, ಆ.....ಆ........ಆ........ ಆ
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ:
ಡಾ॥ ಜಿ.ಎಸ್.ಶಿವರುದ್ರಪ್ಪ
ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ,
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ, ಸ್ತ್ರೀ ಎಂದರೆ ಅಷ್ಟೆ ಸಾಕೆ ||
ಹಸಿರ ಉಟ್ಟ ಬೆಟ್ಟಗಳಲಿ ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ,
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೆ ಸಾಕೆ ||1||
ಮರಗಿಡ ಹೂ ಮುಂಗುರುಳನು ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ , ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೆ ಸಾಕೆ
||2||
ಮನೆಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ, ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೆ ಸಾಕೆ
||3||
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ:ದ ರಾ ಬೇಂದ್ರೆ (ಅಂಬಿಕಾತನಯದತ್ತ)
ಯುಗ
ಯುಗಾದಿ ಕಳೆದರೂ
ಯುಗಾದಿ
ಮರಳಿ ಬರುತಿದೆ
ಹೊಸ ವರುಷಕೆ ಹೊಸ
ಹರುಷವ
ಹೊಸತು ಹೊಸತು ತರುತಿದೆ llPll
ಹೊಂಗೆ
ಹೂವ ತೊಂಗಳಲಿ ಭೃಂಗದ
ಸಂಗೀತ ಕೇಳಿ
ಮತ್ತೆ
ಕೇಳ ಬರುತಿದೆ|
ಬೇವಿನ ಕಹಿ ಬಾಳಿನಲಿ ಹೂವಿನ
ನಸುಗಂಪು ಸೂಸಿ
ಜೀವಕಳೆಯ
ತರುತಿದೆ ll1ll
ವರುಷಕೊಂದು
ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು
ಅಖಿಲ
ಜೀವಜಾತಕೆ |
ಒಂದೇ
ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ
ಹರೆಯ
ನಮಗದಷ್ಟೇ
ಏತಕೋ ll2ll
ನಿದ್ದೆಗೊಮ್ಮೆ
ನಿತ್ಯ ಮರಣ ಎದ್ದ ಸಲ
ನವೀನ ಜನನ
ನಮಗೆ
ಏಕೆ ಬಾರದು?
ಎಲೆ
ಸನತ್ಕುಮಾರ ದೇವ ಎಲೆ
ಸಾಹಸಿ ಚಿರಂಜೀವ
ನಿನಗೆ
ಲೀಲೆ ಸೇರದೂ॥3॥
...................................................................................
ಹಾಡಲು ಕಲಿಯಿರಿ(CLICK HERE TO LEARN THIS SONG)
ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾವಧಾರತಂಸಕಂ ವಿಲಾಸಿಲೋಕ ರಕ್ಷಕಮ್।
ಅನಾಯಕೈಕ ನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್॥೧॥
ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಂ
ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್।
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತತಮ್॥೨॥
ಸಮಸ್ತಲೋಕ ಶಂಕರಂ ನಿರಸ್ತದೈತ್ಯ ಕುಂಜರಮ್
ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್।
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್॥೩॥
ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ
ಪುರಾರಿಪೂರ್ವ ನಂದನಂ ಸುರಾರಿ ಗರ್ವ ಚರ್ವಣಮ್।
ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಮ್
ಕಪೋಲದಾನ ವಾರಣಂ ಭಜೇ ಪುರಾಣ ವಾರಣಮ್॥೪॥
ನಿತಾಂತ-ಕಾಂತ ದಂತ-ಕಾಂತಿಮಂತಕಾಂತಕಾತ್ಮಜಮ್
ಅಚಿಂತ್ಯರೂಪಮಂತಹೀನಮಂತರಾಯ ಕೃಂತನಮ್।
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಮ್
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್॥೫॥
ಮಹಾಗಣೇಶಪಂಚರತ್ನಮಾದರೇಣ ಯೋನ್ವsಹಮ್
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ।
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋsಚಿರಾತ್॥
ಹಾಡಲು ಕಲಿಯಿರಿ(CLICK HERE TO LEARN THIS SONG)
ವನಸುಮದೊಳೆನ್ನ
ಜೀವನವು ವಿಕಸಿಸುವಂತೆ
ಮನವನನುಗೊಳಿಸು
ಗುರುವೇ ಹೇ ದೇವ
|
ಜನಕೆ ಸಂತಸವೀವ ಘನನು ತಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ
ಬಾಯ್ಬಿಡದೆ ||1||
ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು
ನಿಜ ಸೌರಭವ ಸೂಸಿ
ನಲವಿಂ ತಾನೆಲೆಯ
ಪಿಂತಿರ್ದು ದೀನತೆಯ ತೋರಿ….|
ಅಭಿಮಾನವನು
ತೊರೆದು ಕೃತಕೃತ್ಯತೆಯ ಪಡೆವಂತೆ ||2||
ಹಾಡಲು ಕಲಿಯಿರಿ(CLICK HERE TO LEARN THIS SONG)
ಮಾಣಿಕ್ಯವೀಣಾಮುಫಲಾಲಯಂತೀಂ, ಮದಾಲಸಾಂ ಮಂಜುಲವಾಗ್ವಿಲಾಸಾಂ
ಮಾಹೇಂದ್ರನೀಲದ್ಯುತಿಕೋಮಲಾಂಗೀಂ, ಮಾತಂಗಕನ್ಯಾಂ ಮನಸಾಸ್ಮರಾಮಿ
||
ಚತುರ್ಭುಜೇ ಚಂದ್ರಕಲಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ
ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣಹಸ್ತೇ
ನಮಸ್ತೇ ಜಗದೇಕಮಾತಃ. ||
ಮಾತಾಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ ಕದಂಬ ವನವಾಸಿನೀ
ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ
ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ
ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ
ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ
ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ
ಪುರುಚಿನನವರತ್ನ ಪೀಠಸ್ತಿತೆ, ಸುಸ್ತಿತೇ
ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ
ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ
ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ
ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ
ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ
ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ
…………………………………………………………………………………………………………………
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ||
ತುಂಬಿದ ಹರಿಗೋಲಂಬಿಗಾ
ಅದಕೊಂಭತ್ತು ಛಿದ್ರನೋಡಂಬಿಗಾ
ಸಂಭ್ರಮದಿಂದ ನೀನಂಬಿಗಾ
ಅದರಿಂಬು ನೋಡಿ ನಡೆಸಂಬಿಗಾ ||1||
ಹೊಳೆಯ ಭರವ ನೋಡಂಬಿಗಾ
ಅದಕ್ಕೆ ಸೆಳವು ಘನವಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆನಂಬಿಗಾ
ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ ||2||
ಆರು ತೆರೆಯ ನೋಡಂಬಿಗಾ
ಅದು ಮೀರಿ ಬರುತಲಿದೆ ಅಂಬಿಗಾ
ಯಾರಿಂದಲಾಗದು ಅಂಬಿಗಾ
ಅದ ನಿವಾರಿಸಿ ದಾಟಿಸೊ ಅಂಬಿಗಾ ||3||
ಹೊತ್ತುಹೋಯಿತು ನೋಡಂಬಿಗಾ
ಅಲ್ಲಿ ಮತ್ತೈವರೀರ್ವರು ಅಂಬಿಗಾ
ಒತ್ತಿ ನಡೆಸಿ ನೋಡಂಬಿಗಾ
ಎನ್ನ ಸತ್ಯ ಲೋಕಕೆ ಒಯ್ಯೊ ಅಂಬಿಗಾ ||4||
ಸತ್ಯವೆಂಬುದೆ ಹುಟ್ಟಂಬಿಗಾ
ಸದಾ ಭಕ್ತಿಎಂಬುದೆ ಪಥವಂಬಿಗಾ
ಮುಕ್ತಿದಾಯಕ ನಮ್ಮ ಪುರಂದರ ವಿಠ್ಠಲನ
ಮುಕ್ತಿಮಂಟಪಕೊಯ್ಯೊ ಅಂಬಿಗಾ||5||
................................................................................