ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ SONG LYRICS |PURANDARA DASA SONGS| JNANAVANTARIGE VIDHI

 

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ ಅ-

ಜ್ಞಾನಿ ಮೂಢರಿಗೆ ಹರಿ ನಿನ್ನ ಬಲವಯ್ಯ॥

 

ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವುದಾಯ್ತು

ಇಂದ್ರನಿಗೆ ವಿಧಿ ಕಾಡಿ ಭಂಗಪಡಿ..ಸಿತು।

ಚಂದದಲಿ ಪಾಂಡವರ ವನವಾಸ ಮಾಡಿಸಿತು

ಅಂದು ಸೀತೆಯನು ಲಂಕೆಯಲ್ಲಡಗಿಸಿತು॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ

ಚಂದದಲಿ ಪಾಂಡವರ ವನವಾಸ ಮಾಡಿಸಿತು

ಅಂದು ಸೀತೆಯನು ಲಂಕೆಯಲ್ಲಡಗಿಸಿತು॥1||

 

ಹಿಂದಕ್ಕೆ ಹರಿಶ್ಚಂದ್ರನ ಅರಣ್ಯವ ಸೇರಿಸಿತು

 ಮಡದ್ಯಾಗಿ ಕಾಡಿತೋ ಕರಿಬಂಟಗೆ।

ಕುಂದದೀಶ್ವರನ ಸುಡುಗಾಡ ಸೇರಿಸಿತು

ಇನ್ನು ವಿಧಿಯನ್ನು ನೋಡುವ ನರರ ಪಾಡೇನು॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ….

ಕುಂದದೀಶ್ವರನ ಸುಡುಗಾಡ ಸೇರಿಸಿತು

ಇನ್ನು ವಿಧಿಯನ್ನು ನೋಡುವ ನರರ ಪಾಡೇನು॥2||

 

ವಿಧಿ ಕಾಡೋ ಕಾಲಕ್ಕೆ ಇಲ್ಲದಪವಾದ ಬಂತು

ಕಲಿಸಿತೋ ಸುಳ್ಳು ಕಳವು ಹಾದರವ।

ವಿಧಿಯೊಳಗಾಗದಾ ನರರು ಮತ್ತಿಲ್ಲ

ವಿಧಿಯ ಗೆದ್ದನೊ ನಮ್ಮ ಪುರಂದರ ವಿಟ್ಟಲ॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ….

ವಿಧಿಯೊಳಗಾಗದಾ ನರರು ಮತ್ತಿಲ್ಲ

ವಿಧಿಯ ಗೆದ್ದನೊ ನಮ್ಮ ಪುರಂದರ ವಿಟ್ಟಲ॥3||

.......................................................................................................... 

 

 


No comments:

Post a Comment

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...