ಭಗವದ್ಗೀತೆ ಶ್ಲೋಕಗಳು
ಶ್ರೀ ಭಗವಾನ್ ಉವಾಚ:
1.
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ್ರತಾಮ್
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| (ಅಧ್ಯಾಯ – ೪)
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| (ಅಧ್ಯಾಯ – ೪)
(ಅರ್ಥ: ಸಾಧು ಪುರುಷರನ್ನುಉದ್ಧರಿಸುವುದಕ್ಕಾಗಿ, ಪಾಪ ಕರ್ಮ ಮಾಡುವವರನ್ನು ವಿನಾಶ ಮಾಡಲಿಕ್ಕಾಗಿ ಮತ್ತು ಧರ್ಮವನ್ನು ಚೆನ್ನಾಗಿ ಸ್ಥಾಪಿಸುವುದಕ್ಕಾಗಿ
ನಾನು ಯುಗ – ಯುಗಗಳಲ್ಲಿಪ್ರಕಟನಾಗುತ್ತೇನೆ)
2.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್|| (ಅಧ್ಯಾಯ – ೪)
( ಅರ್ಥ: ಎಲೈ ಭಾರತ, ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾದಾಗಲೆಲ್ಲ ನಾನು ನನ್ನ ಸ್ವರೂಪವನ್ನು ರಚಿಸುತ್ತೇನೆ. ಅರ್ಥಾತ್ ಸಾಕಾರ ರೂಪದಿಂದ ಜನರ ಮುಂದೆ ಪ್ರಕಟನಾಗುತ್ತೇನೆ . ಭರತ ವಂಶದಲ್ಲಿ ಹುಟ್ಟಿದ್ದರಿಂದ ಅರ್ಜುನನನ್ನು ಇಲ್ಲಿ ಶ್ರೀಕೃಷ್ಣನು 'ಭಾರತ' ಎಂದು ಕರೆಯುತ್ತಾನೆ)
3.
ಸುಖ ದುಃಖೇ ಸಮೇ ಕೃತ್ವಾ ಲಾಭಾ ಲಾಭೌ ಜಯಾಜಯೌ
ತತೋ ಯುದ್ದಾಯ ಯುಜ್ಯಸ್ವ ನೈವ೦ ಪಾಪಮವಾಪ್ಸ್ಯಸಿ| (ಅಧ್ಯಾಯ – ೨)
(
ಅರ್ಥ: ಜಯ - ಪರಾಜಯ, ಲಾಭ - ಹಾನಿ ಮತ್ತು ಸುಖ - ದುಃಖ ಇವುಗಳನ್ನು ಸಮಾನವಾಗಿ
ತಿಳಿದುಕೊಂಡು ಯುದ್ಧಕ್ಕೆ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡಿದರೆ ನಿನಗೆ ಪಾಪವು ತಟ್ಟಲಾರದು)
Also see:
Nice! this lyrics also good check!
ReplyDelete