ರಚನೆ: ಕೆ
. ಎಸ್ . ನರಸಿಂಹಸ್ವಾಮಿ
ಆಕಾಶಕ್ಕೆದ್ದು
ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ
ಮುತ್ತನಿಡುವ ಬೆಬ್ಬೆರೆಗಳ ಗಾನದಲ್ಲಿ
ಬಯಲ
ತುಂಬಾ ಹಸಿರು ದೀಪ ಹಚ್ಚಿ ಹರಿವ
ನದಿಗಳಲ್ಲಿ
ನೀಲಿಯಲ್ಲಿ
ಹೊಗೆಯ ಚೆಲ್ಲಿ ಯಂತ್ರ ಘೋಷ ಹೇಳುವಲ್ಲಿ
ಕಣ್ಣು
ಬೇರೆ ನೋಟ ಒಂದು ನಾವು
ಭಾರತೀಯರು||
ನಾಡಿನೆಲ್ಲ
ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ
ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ
ನೆಲದ ತೊಟ್ಟಿಲಿನಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ
ನಮ್ಮ
ಯುಗದ ದನಿಗಳಾಗಿ ಮೂಡಿತೆಲ್ಲ ಹಾಡಿನಲ್ಲಿ
ಭಾಷೆ
ಬೇರೆ ಭಾವ ಒಂದು ನಾವು
ಭಾರತೀಯರು||1||
ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ
ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ
ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ
ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೆ
ಇರಲಿ ನಾವು ಒಂದು ನಾವು
ಭಾರತೀಯರು||2||
...................................................................................................
Also see:
ಕನ್ನಡ ಕಲಿ- ಪಂಚೇಂದ್ರಿಯಗಳು|LEARN KANNADA - SENSE ORGANS| KANNADA SAVIGANA BLOGSPOT
ಕಣ್ಣುಗಳೆರಡು ಸಾಲದಮ್ಮ_ KANNUGALERADU SAALADAMMA LYRICS IN KANNADA
Thumba sundaravadalyrics! Thumba sundaravada lyrics
ReplyDeleteThese are the best lines check!
ReplyDelete