ನೀನಿಲ್ಲದೇ ನನಗೇನಿದೇ|NEENILLADE NANAGENIDE SONG LYRICS IN KANNADA

 ಭಾವಗೀತೆ

ನೀನಿಲ್ಲದೇ ನನಗೇನಿದೇ
ಮನಸೆಲ್ಲ ನಿನ್ನಲ್ಲಿ ನೆಲೆಯಾಗಿದೆ
ಕನಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ||1||


ಒಲವೆಂಬ ಕಿರಣಾ ಬೀರೀ ಒಳಗಿರುವ ಬಣ್ಣಾ ತೆರೆಸೀ
ಒಣಗಿರುವ ಎದೆಬಿಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ||2||

.........................................

ಹಾಡಲು ಕಲಿಯಿರಿ(CLICK HERE TO LEARN THIS SONG)


Also See:


No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...