ಸಾಹಿತ್ಯ: ಗೋಪಾಲ್ ಯಾಗ್ನಿಕ್
ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ... ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ ನವಿಲೇ.. ನವಿಲೆ||
ಈ ನೆಲದ ನೆಲೆಯಲಿ ಮನಸು ಕುಣಿಯಲಿ
ನವಿಲೇ...ನೀನೇನೆ ನಾನಾಗುವೆ
ಗೆಲುವಾಗಿಯೆ ಒಲಿವೆ ನವಿಲೇ.. ನವಿಲೆ||
ತಂಗಾಳಿ ಬೀಸಿ ಬರದೆ ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ ಗುಟ್ಯಾಕೆ ನನ್ನ ಬಳಿಯೆ
ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊರೆಯಲೇ||1||
ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ
ಸುರಲೋಕಾ ಇದನು ಬಿಡಲೇ ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ||2||
.................................................
Also see:
ಕಂಬದ ಮ್ಯಾಲಿನ ಗೊಂಬೆಯೇ | KAMBADA MYALINA GOMBEYE LYRICS
ವೆಂಕಟರಮಣನೆ ಬಾರೋ (VENKATARAMANANE BAARO ), SONG ON LORD VISHNU - LYRICS IN KANNADA AND ENGLISH
No comments:
Post a Comment