Apr 10, 2021

ದಾಸನ ಮಾಡಿಕೊ ಎನ್ನ|DAASANA MADIKO ENNA SONG LYRICS IN KANNADA

 

ರಚನೆ: ಪುರಂದರ ದಾಸರು

ರಾಗ : ನಾದನಾಮಕ್ರಿಯೆ

ತಾಳ: ಆದಿತಾಳ

 ........................

ಹಾಡಲು ಕಲಿಯಿರಿ(CLICK HERE TO LEARN THIS SONG)

ದಾಸನ ಮಾಡಿಕೊ ಎನ್ನ ಸ್ವಾಮಿ

ಸಾಸಿರ ನಾಮದ ವೆಂಕಟರಮಣ||

 

ದುರ್ಬುದ್ಧಿಗಳನೆಲ್ಲ ಬಿಡಿಸೋ

ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೋ

ಚರಣ ಸೇವೆ ಎನಗೆ ಕೊಡಿಸೋ

ಅಭಯಕರ ಪುಷ್ಪವನ್ನು ಶಿರದಲ್ಲಿ ಮುಡಿಸೋ||1||

 

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ

ಅಡಿಗೆರಗುವೆನಯ್ಯ ಅನುದಿನ ಪಾಡಿ

ಕಡೆಗಣ್ಣಲೇಕೆನ್ನ ನೋಡಿ ಬಿಡುವೆ

ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ||2||

 

ಮೊರೆ ಹೊಕ್ಕವರ ಕಾಯ್ವ ಬಿರುದು ಎನ್ನ

ಮರೆಯದೇ ರಕ್ಷಣೆ ಮಾಡಯ್ಯ ಪೊರೆದು

ದುರಿತಗಳೆಲ್ಲವ ತರಿದು ಶ್ರೀ

ಪುರಂದರ ವಿಠಲ ಎನ್ನನು ಪೊರೆದು ||3||

..............................................................................................

Also See:


No comments:

Post a Comment