ರಚನೆ: ಪುರಂದರ ದಾಸರು
ಹಾಡಲು ಕಲಿಯಿರಿ(CLICK HERE TO LEARN THIS SONG)
ಪಿಳ್ಳಂಗೋವಿಯ
ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ
ಪಿಳ್ಳಂಗೋವಿಯ
ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ…ರಂಗನ
ಎಲ್ಲಿ
ನೋಡಿದಿರಿ…
ಎಲ್ಲಿ ನೋಡಿದರಲ್ಲಿ
ತಾನಿಲ್ಲದಿಲ್ಲವೆಂದು ಬಲ್ಲ ಜಾಣರೆ||
ನಂದ ಗೋಪನ ಮಂದಿರಂಗಳ
ಸಂದುಗೊಂದಿನಲಿ
ಅಂದ ಚಂದದ ಗೋಪ
ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರಿಯರ
ಹಿಂದುಮುಂದಿನಲಿ
ಅಂದದಾಕಳ ಕಂದಕರುಗಳ
ಮಂದೆ ಮಂದೆಯಲಿ||1||
ಈ ಚರಾಚರದೊಳಗೆ
ಅಜಂಡದ ಆಚೆಈಚೆಯಲಿ
ಖೇಚರೇಂದ್ರನ
ಸುತನ ರಥದ ಉಛ ಪೀಠದಲಿ
ನಾಚದೆ ಮಾಧವ
ಕೇಶವ ಎಂಬ ವಾಚಕಂಗಳಲಿ
ಮೀಚು ಕೊಂಡದ
ಪುರಂದರವಿಠಲನ ಲೋಚನಾಗ್ರದಲಿ||2||
Also See:
ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ|AKASHAKKEDDU NINTA SONG LYRICS IN KANNADA
ಆವ ಕುಲವೋ ರಂಗ ಅರಿಯಲಾಗದು(AAVA KULAVO RANGA ARIYALAGADU LYRICS IN KANNADA
No comments:
Post a Comment